ಜೈದೇವ್ ಉನದ್ಕಟ್ ನೇತೃತ್ವದ ಸೌರಾಷ್ಟ್ರಕ್ಕೆ ರಣಜಿ ಟ್ರೋಫಿ
ಫೈನಲ್ ನಲ್ಲಿ ಬಂಗಾಳಕ್ಕೆ ಸೋಲು

ಕೋಲ್ಕತಾ: ಎಡಗೈ ವೇಗಿ ಜಯದೇವ್ ಉನದ್ಕಟ್ ಅವರು ಎರಡನೇ ಇನಿಂಗ್ಸ್‌ನಲ್ಲಿ 85 ರನ್ ಗೆ 6 ವಿಕೆಟ್ ಗಳು ಸೇರಿದಂತೆ ಒಟ್ಟು ಒಂಬತ್ತು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸೌರಾಷ್ಟ್ರ ಕ್ರಿಕೆಟ್ ತಂಡ ರವಿವಾರ ನಡೆದ ಕೊನೆಗೊಂಡ ಫೈನಲ್ ಪಂದ್ಯದಲ್ಲಿ ಬಂಗಾಳವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿ ಎರಡನೇ ಬಾರಿ ರಣಜಿ ಟ್ರೋಫಿ ಪ್ರಶಸ್ತಿ ಗೆಲ್ಲಲು ನೆರವಾದರು.
ಮೊದಲ ಇನಿಂಗ್ಸ್ ನಲ್ಲಿ 230 ರನ್ ಬೃಹತ್ ಮುನ್ನಡೆಯನ್ನು ಬಿಟ್ಟುಕೊಟ್ಟ ನಂತರ ಬಂಗಾಳ ತನ್ನ ಎರಡನೇ 2ನೇ ಇನಿಂಗ್ಸನ್ನು ರವಿವಾರ 4 ವಿಕೆಟಿಗೆ 169 ರನ್ ನಿಂದ ಮುಂದುವರಿಸಿತು. 241 ರನ್ ಗೆ ಆಲೌಟಾಯಿತು. ಅಂತಿಮ ಪಂದ್ಯವನ್ನು ಗೆಲ್ಲಲು ಸೌರಾಷ್ಟಕ್ಕೆ ಕೇವಲ 12 ರನ್ ಗುರಿಯನ್ನು ನೀಡಿತು.
ಸೌರಾಷ್ಟ್ರವು ಆರಂಭಿಕ ಬ್ಯಾಟರ್ ಜೇ ಗೋಹಿಲ್ (0) ವಿಕೆಟನ್ನು ಕಳೆದುಕೊಂಡಿತು ಆದರೆ 2.4 ಓವರ್‌ಗಳಲ್ಲಿ 1 ವಿಕೆಟ್‌ಗೆ 14 ರನ್ ಗಳಿಸಿತು.
ಸೌರಾಷ್ಟ್ರ ಈ ಮೊದಲು 2019-20 ಋತುವಿನಲ್ಲಿ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಬಂಗಾಳವನ್ನು ಸೋಲಿಸಿತ್ತು.
ಕಳೆದ 10 ಸೀಸನ್‌ಗಳಲ್ಲಿ ಐದು ಬಾರಿ ಫೈನಲ್‌ಗೆ ತಲುಪಿ ತಮ್ಮ ಸ್ಥಿರತೆಯನ್ನು ತೋರಿಸಿದೆ.





