Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ‘ನಮ್ಮ ಕುಂದಾಪುರ’ ಫೇಸ್‌ಬುಕ್...

‘ನಮ್ಮ ಕುಂದಾಪುರ’ ಫೇಸ್‌ಬುಕ್ ಗ್ರೂಪ್‌ನಿಂದ 'ಸ್ನೇಹ ಸಹಮಿಲನ'

19 Feb 2023 4:11 PM IST
share
‘ನಮ್ಮ ಕುಂದಾಪುರ’ ಫೇಸ್‌ಬುಕ್ ಗ್ರೂಪ್‌ನಿಂದ ಸ್ನೇಹ ಸಹಮಿಲನ

ಕುಂದಾಪುರ, ಫೆ.19: ‘ನಮ್ಮ ಕುಂದಾಪುರ’ ಫೇಸ್‌ಬುಕ್ ಗ್ರೂಪ್ ಸದಸ್ಯರ ’ಸ್ನೇಹ ಸಹಮಿಲನ’ ಕಾರ್ಯಕ್ರಮವು ಇತ್ತೀಚೆಗೆ ಕುಂದಾಪುರದ ನಗು ಫ್ಯಾಲೇಸ್ ಹೋಟೇಲಿನಲ್ಲಿ ಜರುಗಿತು.

 ಗ್ರೂಪ್ ಸದಸ್ಯರನ್ನು ಒಗ್ಗೂಡಿಸುವ ಹಾಗೂ ಪರಸ್ಪರ ಪರಿಚಯಿಸಿ ಕುಟುಂಬ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಸಹಮಿಲನ ಕಾರ್ಯ ಕ್ರಮವನ್ನು ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

‘13 ವರ್ಷದ ಹಿಂದೆ ಫೇಸ್‌ಬುಕ್ ಆರಂಭದ ದಿನಗಳಲ್ಲಿ ’ನಮ್ಮ ಕುಂದಾಪುರ’ ಗ್ರೂಪ್ ರಚಿಸಿ ಕುಂದಾಪುರದ ಸೊಗಡು, ಪ್ರಪಂಚದ ವಿವಿಧೆಡೆ ನೆಲೆಸಿದ ಕುಂದಾಪುರದವರನ್ನು ಬೆಸೆಯುವ ತಳಹದಿಯಾಗಿ ಮಾಡಲಾಯಿತು. ಬರಬರುತ್ತಾ ಗ್ರೂಪಿಗೆ ಸೇರುವ ಸದಸ್ಯರ ಸಂಖ್ಯೆ ಕೂಡ ಹೆಚ್ಚಿತು. ಭಾರತ ಮಾತ್ರವಲ್ಲದೆ ಅಮೆರಿಕಾ, ಗಲ್ಫ್ ರಾಷ್ಟ್ರದಲ್ಲಿಯೂ ಗ್ರೂಪ್ ಸದಸ್ಯರಿದ್ದಾರೆ. ಊರಿನ ವಿಚಾರ, ಆಚಾರ, ಕಲೆ, ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ರಾಜಕೀಯ, ನಿಂದನೆಗೆ ಗ್ರೂಪಿನಲ್ಲಿ ಮುಲಾಜಿಲ್ಲದೆ ಅವಕಾಶ ನಿರಾಕರಿಸಿದ್ದೇವೆ’ ಎಂದು ಗ್ರೂಪ್ ಅಡ್ಮಿನ್ ರಾಧಾಕೃಷ್ಣ ಶೆಟ್ಟಿ ತಿಳಿಸಿದರು.

‘10 ವರ್ಷಗಳ ಹಿಂದೆ ರಾಧಾಕೃಷ್ಣ ಶೆಟ್ಟಿಯವರ ನಮ್ಮ ಕುಂದಾಪುರ ಫೇಸ್‌ಬುಕ್ ಗ್ರೂಪ್ ಸೇರಿದ್ದೆ. ಬಳಿಕ ಬೆಂಗಳೂರು, ಮೈಸೂರು, ಕುಂದಾಪುರ ಸಹಿತ ವಿವಿಧೆಡೆ ನಡೆದ 6-7 ಸ್ನೇಹ ಸಹಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕುಟುಂಬದ ವಾತಾವರಣವಿದೆ. ವಿವಿಧೆಡೆ ಇರುವ ಕುಂದಾಪುರದವರ ಪರಿಚಯ, ಸ್ನೇಹ ವಾಗುತ್ತದೆ. ಗ್ರೂಪ್ ಮೂಲಕವಾಗಿ ಕುಂದಾಪ್ರ ಕನ್ನಡಕ್ಕೂ ಹೆಚ್ಚಿನ ಒತ್ತು ಸಿಗುತ್ತಿದೆ’ ಎಂದು ಝಹೀರ್ ಅಹ್ಮದ್ ನಾಕುದಾ ಗಂಗೊಳ್ಳಿ ಹೇಳಿದರು.

ನಮ್ಮ ಕುಂದಾಪುರ ಫೇಸ್ ಬುಕ್ ಗ್ರೂಪ್ ಅಡ್ಮಿನ್ ರಾಧಾಕೃಷ್ಣ ಶೆಟ್ಟಿ, ಕರುಣಾಕರ್, ಗಿರಿಧರ್ ಶೆಟ್ಟಿ, ತಲ್ಲೂರು ನಾರಾಯಣ ಶೆಟ್ಟಿ, ಲಲಿತಾ ವಾರಂಬಳ್ಳಿ ವೇದಿಕೆಯಲ್ಲಿದ್ದರು.

ಕನ್ನಡ ತುಳು ಸಾಹಿತ್ಯ ತುಳು ಬಳಗದ ವತಿಯಿಂದ ರಾಧಾಕೃಷ್ಣ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಪುಂಡಲೀಕ ಪೂಜಾರಿ ಆಜ್ರಿ ಕಾರ್ಯಕ್ರಮ ನಿರೂಪಿಸಿದರು.


ಗ್ರೂಪಿನಲ್ಲಿ 2.36 ಲಕ್ಷಕ್ಕೂ ಅಧಿಕ ಸದಸ್ಯರು!

ಊರಭಿಮಾನ, ಭಾಷಾಭಿಮಾನ, ಆಚಾರ-ವಿಚಾರಗಳನ್ನು ತಿಳಿಸುವ ಹಾಗೂ ಕಲೆ, ಸಂಸ್ಕೃತಿಯ ಬೆಳೆಸುವಿಕೆ ಮತ್ತು ಉಳಿಸುವಿಕೆಯ ಉದ್ದೇಶದಿಂದ 2010ರಲ್ಲಿ ಮೂಲತಃ ಕುಂದಾಪುರದ ರಾಧಾಕೃಷ್ಣ ಶೆಟ್ಟಿ ನಮ್ಮ ಕುಂದಾಪುರ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಗ್ರೂಪ್ ರಚಿಸಿದ್ದರು. ಈ ಗ್ರೂಪ್ ಸದಸ್ಯರ ಸಂಖ್ಯೆ ಬರೋಬ್ಬರಿ 2.36 ಲಕ್ಷಕ್ಕೂ ಅಧಿಕ. ಭಾರತ ದೇಶ ಸಹಿತ, ಗಲ್ಫ್ ರಾಷ್ಟ್ರ ಹಾಗೂ ಅಮೆರಿಕದಲ್ಲೂ ಈ ಗ್ರೂಪ್‌ ಸದಸ್ಯರು ಸಕ್ರಿಯರಾಗಿದ್ದಾರೆ. ಈವರೆಗೆ ಕುಂದಾಪುರದಲ್ಲಿ 7 ಬಾರಿ, ಅಮೆರಿಕದಲ್ಲಿ 7, ಮುಂಬೈ ಹಾಗೂ ಮೈಸೂರಿನಲ್ಲಿ ತಲಾ ಒಂದು ಬಾರಿ, ಬೆಂಗಳೂರಿನಲ್ಲಿ ಒಟ್ಟು 26 ಸದಸ್ಯರ ಸ್ನೇಹ ಸಹಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

share
Next Story
X