ಮಂಗಳೂರು: ಛತ್ರಪತಿ ಶಿವಾಜಿ ಜಯಂತಿ ಆಚರಣೆ

ಮಂಗಳೂರು: ದ.ಕ.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದ.ಕ. ಹಾಗೂ ಜಿಲ್ಲೆಯ ಆರ್ಯ ಯಾನೆ ಮರಾಠ ಸಮಾಜ ಸಂಘದ ವತಿಯಿಂದ ರವಿವಾರ ನಗರ ಪುರಭವನದಲ್ಲಿ ಛತ್ರಪತಿ ಶಿವಾಜಿಯ ೩೯೬ನೇ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ನಗರದ ಪಂಪ್‌ವೆಲ್ ಮೇಲ್ಸೆತುವೆಯ ಬಳಿ ಶಿವಾಜಿಯ ಪ್ರತಿಮೆಯನ್ನು ಮರಾಠ ಪರಿಷತ್ ಹಾಗೂ ಸರಕಾರದ ಸಹಯೋಗದಲ್ಲಿ ನಿರ್ಮಿಸಲು ಚಿಂತಿಸ ಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಮೇಯರ್, ಉಪ ಮೇಯರ್ ಹಾಗೂ ಮರಾಠ ಸಮಾಜದ ಮುಖಂಡ ರೊಂದಿಗೆ ಸಭೆ ನಡೆಸಲಾಗಿದೆ, ಸ್ಥಳವನ್ನು ಅಂತಿಮಗೊಳಿಸಿ ಚುನಾವಣೆಗೂ ಮುನ್ನ ಶಿಲನ್ಯಾಸ ನೆರವೇರಿಸಲಾಗು ವುದು ಎಂದರು.
ಉಪನ್ಯಾಸ ನೀಡಿದ ಕುದ್ರೋಳಿಯ ನಾರಾಯಣ ಗುರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ, ಈ ದೇಶ ಶಿವಾಜಿಯನ್ನು ಮರೆಯಲು ಸಾಧ್ಯವಿಲ್ಲ, ದೇಶದ ಚರಿತ್ರೆಯು ಶಿವಾಜಿಯನ್ನು ಮರೆಯು ವಂತಿಲ್ಲ. ಶಿವಾಜಿ ವ್ಯಕ್ತಿಯಲ್ಲ ಆ ಕಾಲಮಾನಕ್ಕೆ ಹುಟ್ಟಿ ಬಂದ ಅವತಾರ ಎಂದು ಬಣ್ಣಿಸಿದರು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಜಿಲ್ಲಾಧ್ಯಕ್ಷ ಸುರೇಶ್ ರಾವ್, ಮಂಗಳೂರು ಆರ್ಯ ಯಾನೆ ಮರಾಠ ಸಮಾಜದ ಸಂಘದ ಅಧ್ಯಕ್ಷ ವಾಮನ್ ವಾಗ್ಮನ್ ಮುಳ್ಳಂಗೋಡು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಬಬಿತಾ ಕಾರ್ಯಕ್ರಮ ನಿರೂಪಿಸಿದರು.