ಟರ್ಕಿ: ರಕ್ಷಣಾ ಕಾರ್ಯಾಚರಣೆ ಬಹುತೇಕ ಅಂತ್ಯ

ಅಂಕಾರ, ಫೆ.19: ಕಳೆದ ವಾರ ಸಂಭವಿಸಿದ ಭೀಕರ ಭೂಕಂಪದಿಂದ ಭಾರೀ ಹಾನಿಯಾಗಿರುವ ಎರಡು ಪ್ರಾಂತ್ಯಗಳನ್ನು ಹೊರತುಪಡಿಸಿ ಇತರ ಎಲ್ಲಾ ಪ್ರಾಂತಗಳಲ್ಲೂ ರಕ್ಷಣಾ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿರುವುದಾಗಿ ಟರ್ಕಿ(Turkey)ಯ ವಿಪತ್ತು ನಿರ್ವಹಣಾ ಏಜೆನ್ಸಿ ರವಿವಾರ ಹೇಳಿದೆ.
ಹತಾಯ್ ಮತ್ತು ಕಹ್ರಮನ್ಮರಾಸ್ ಪ್ರಾಂತಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಾಂತಗಳಲ್ಲೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಏಜೆನ್ಸಿಯ ಮುಖ್ಯಸ್ಥ ಯೂನಸ್ ಸೀಝರ್ರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಫೆಬ್ರವರಿ 6ರಂದು ಸಂಭವಿಸಿದ್ದ ಭೀಕರ ಭೂಕಂಪವು ಕಹ್ರಮನ್ಮರಾಸ್ ಪ್ರಾಂತದ ಪಝರಸಿಕ್ ಜಿಲ್ಲೆಯಲ್ಲಿ ಕೇಂದ್ರೀಕೃತವಾಗಿತ್ತು. ಈ ಪ್ರಾಂತದಲ್ಲೇ ಕನಿಷ್ಟ 40 ಕಟ್ಟಡಗಳು ಕುಸಿದುಬಿದ್ದಿವೆ. ಟರ್ಕಿ ದೇಶದಲ್ಲಿ ಸುಮಾರು 1,05,000 ಕಟ್ಟಡಗಳು ಕುಸಿದುಬಿದ್ದಿದ್ದು 40,689 ಮಂದಿ ಮೃತಪಟ್ಟಿದ್ದಾರೆ ಎಂದು ಟರ್ಕಿ ಅಧಿಕಾರಿಗಳು ಹೇಳಿದ್ದಾರೆ.
Next Story





