ಖಂಡಾಂತರ ಕ್ಷಿಪಣಿ ಪ್ರಯೋಗಿಸಿದ ಉ.ಕೊರಿಯಾ

ಪೋಂಗ್ಯಾಂಗ್, ಫೆ.19: ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಜಂಟಿ ಸಮರಾಭ್ಯಾಸಕ್ಕೆ ಪ್ರತಿಯಾಗಿ ಖಂಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿರುವುದಾಗಿ ಉತ್ತರ ಕೊರಿಯಾ ರವಿವಾರ ಹೇಳಿದೆ.
ಇದು ಅಮೆರಿಕ ಮತ್ತು ದಕ್ಷಿಣ ಕೊರಿಯಾಕ್ಕೆ ನೀಡಿರುವ ಎಚ್ಚರಿಕೆಯಾಗಿದೆ. ಅಧ್ಯಕ್ಷರ ತುರ್ತು ಆದೇಶದ ಹಿನ್ನೆಲೆಯಲ್ಲಿ ಪ್ಯೋಂಗ್ಯಾಂಗ್ ವಿಮಾನನಿಲ್ದಾಣದ ಸೇನಾನೆಲೆಯಿಂದ ಖಂಡಾಂತರ ಕ್ಷಿಪಣಿಯನ್ನು ಪ್ರಯೋಗಿಸಲಾಗಿದೆ ಎಂದು ಉತ್ತರಕೊರಿಯಾದ ಅಧಿಕಾರಿಗಳು ಹೇಳಿದ್ದಾರೆ. ಖಂಡಾಂತರ ಕ್ಷಿಪಣಿ ಹಾರಿಹೋಗಿರುವುದನ್ನು ಗಮನಿಸಿರುವುದಾಗಿ ದಕ್ಷಿಣ ಕೊರಿಯಾ ಮತ್ತು ಜಪಾನ್ ಹೇಳಿವೆ. ಸುಮಾರು 66 ನಿಮಿಷ ಹಾರಾಟ ನಡೆಸಿದ ಬಳಿಕ ತನ್ನ ವಿಶೇಷ ಆರ್ಥಿಕ ವಲಯದ ಬಳಿಯ ಸಮುದ್ರಕ್ಕೆ ಇದು ಅಪ್ಪಳಿಸಿದೆ. ಈ ಕ್ಷಿಪಣಿ ಅಮೆರಿಕಕ್ಕೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದೆ ಎಂದು ಜಪಾನ್ ಹೇಳಿದೆ.
Next Story