Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ...

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 6,804 ಮಂದಿ ನಾಪತ್ತೆ

ಪ್ರತೀ ವರ್ಷ ಸರಾಸರಿ ಎರಡೂವರೆ ಸಾವಿರ ಮಕ್ಕಳು ಕಾಣೆ

ಜಿ.ಮಹಾಂತೇಶ್ಜಿ.ಮಹಾಂತೇಶ್20 Feb 2023 8:03 AM IST
share
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 6,804 ಮಂದಿ ನಾಪತ್ತೆ
ಪ್ರತೀ ವರ್ಷ ಸರಾಸರಿ ಎರಡೂವರೆ ಸಾವಿರ ಮಕ್ಕಳು ಕಾಣೆ

ಬೆಂಗಳೂರು, ಫೆ  .19: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳೂ ಸೇರಿದಂತೆ 6,804 ಗಂಡಸರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ. ಮೂರೂ ವರ್ಷಗಳಾದರೂ ಇವರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚುವಲ್ಲಿ ರಾಜ್ಯ ಪೊಲೀಸ್ ಇಲಾಖೆಯು ವಿಲವಾಗಿದೆ.

ಮಕ್ಕಳು, ಗಂಡಸರು ಮತ್ತು ಮಹಿಳೆಯರು ನಾಪತ್ತೆಯಾಗಿರುವ ಕುರಿತು ವಿಧಾನಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ಸೂಚನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉತ್ತರಿಸಿರುವ ಪ್ರತಿಯಲ್ಲಿ ಈ ಮಾಹಿತಿ ಇದೆ. ಇದರ ಪ್ರತಿ "the-file.in'' ಗೆ ಲಭ್ಯವಾಗಿದೆ.

ಪ್ರತೀ ವರ್ಷ ಸರಾಸರಿ ಎರಡೂವರೆ ಸಾವಿರದಷ್ಟು ಮಕ್ಕಳು ಕಾಣೆಯಾಗುತ್ತಿದ್ದರೂ ಸರಕಾರ ಕಣ್ಮುಚ್ಚಿ ಕುಳಿತಿರುವುದು ಸರಿಯಲ್ಲ. ಈ ಬಗ್ಗೆ ಸರಕಾರ ವಿಶೇಷ ಕಾರ್ಯಪಡೆ ರಚಿಸಿ ಯಾವ ಕಾರಣಗಳಿಗಾಗಿ ಮಕ್ಕಳು ಕಾಣೆಯಾಗುತ್ತಿದ್ದಾರೆ, ಅದರ ಹಿಂದಿರುವವರು ಯಾರು ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಯು.ಬಿ. ವೆಂಕಟೇಶ್ ಅವರು ಪ್ರಸ್ತಾವಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಗೃಹ ಇಲಾಖೆಯು 2020ರಿಂದ 2023ರ ಜನವರಿವರೆಗಿನ ಅಂಕಿ ಅಂಶಗಳ ಮಾಹಿತಿ ಒದಗಿಸಿದೆ. ಇದರ ಪ್ರಕಾರ 2020ರಿಂದ 2023ರವರೆಗೆ ಒಟ್ಟು 16,296 ಗಂಡಸರು, ಮಹಿಳೆಯರು ಮತ್ತು ಮಕ್ಕಳು ಕಾಣೆಯಾಗಿದ್ದರು. ಈ ಪೈಕಿ 12,680 ಪತ್ತೆಯಾಗಿದ್ದಾರೆ. ಇನ್ನೂ 3,616 ಮಂದಿಯನ್ನು ಪತ್ತೆ ಹಚ್ಚಬೇಕಿದೆ ಎಂದು ಹೇಳಿದೆ.

ಅದೇ ರೀತಿ 31,194 ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದರು. ಈ ಪೈಕಿ 29,026 ಪತ್ತೆಯಾಗಿದ್ದಾರೆ. 2,168 ಮಂದಿ ಪತ್ತೆಯಾಗಿಲ್ಲ. ಗಂಡು ಮಕ್ಕಳು (18 ವರ್ಷದೊಳಗಿನವರು) 1,745 ನಾಪತ್ತೆಯಾಗಿದ್ದರು. 1,493 ಪತ್ತೆಯಾಗಿದ್ದಾರೆ. 252 ಪತ್ತೆಯಾಗಬೇಕಿದೆ. ಹೆಣ್ಣು ಮಕ್ಕಳು 4,885 ನಾಪತ್ತೆಯಾಗಿದ್ದರು. 4,117 ಪತ್ತೆಯಾಗಿದ್ದಾರೆ. 768 ಪತ್ತೆಯಾಗಬೇಕಿದೆ. ಒಟ್ಟಾರೆ 6, 804 ಮಂದಿ ಎಲ್ಲಿದ್ದಾರೆ ಎಂಬುದನ್ನು ಇನ್ನೂ ಪತ್ತೆ ಹಚ್ಚಿಲ್ಲ ಎಂಬುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

2020ರಲ್ಲಿ ಕಾಣೆಯಾಗಿರುವ ಒಟ್ಟು 4,273ರ ಪೈಕಿ 3,503 ಮಂದಿಯನ್ನು ಪತ್ತೆ ಹಚ್ಚಿದ್ದು, ಇನ್ನೂ 770 ಮಂದಿಯನ್ನು ಪತ್ತೆ ಹಚ್ಚಬೇಕಿದೆ. 2021ರಲ್ಲಿ 5,056 ಪೈಕಿ 4,172 ಪತ್ತೆ ಹಚ್ಚಿದ್ದರೆ 884 ಮಂದಿ ಪತ್ತೆ ಹಚ್ಚಬೇಕಿದೆ. 2022ರಲ್ಲಿ 6,468 ಮಂದಿ ನಾಪತ್ತೆಯಾಗಿದ್ದು ಈ ಪೈಕಿ 1,635 ಮಂದಿಯನ್ನಷ್ಟೇ ಪತ್ತೆ ಹಚ್ಚಲಾಗಿದೆ. ಇನ್ನೂ 1,635 ಮಂದಿಯನ್ನು ಪತ್ತೆ ಹಚ್ಚಬೇಕಿದೆ. 2023ರಲ್ಲಿ 499 ಮಂದಿ ಕಾಣೆಯಾಗಿದ್ದು ಈ ಪೈಕಿ 172 ಮಂದಿಯನ್ನು ಪತ್ತೆ ಹಚ್ಚಿದ್ದು ಇನ್ನೂ 327 ಮಂದಿ ಪತ್ತೆಯಾಗಿಲ್ಲ.
ಅದೇ ರೀತಿ 2020ರಲ್ಲಿ ಕಾಣೆಯಾಗಿದ್ದ 8,848 ಮಹಿಳೆಯರ ಪೈಕಿ 8,684 ಮಹಿಳೆಯರು ಪತ್ತೆಯಾಗಿದ್ದು ಇನ್ನೂ 264 ಪತ್ತೆ ಹಚ್ಚಲಾಗಿಲ್ಲ. 2021ರಲ್ಲಿ 10,081 ನಾಪತ್ತೆಯಾಗಿದ್ದು ಈ ಪೈಕಿ 9,735 ಮಂದಿಯನ್ನು ಪತ್ತೆ ಹಚ್ಚಿದ್ದು ಇನ್ನೂ 346 ಪತ್ತೆಯಾಗಿಲ್ಲ. 2022ರಲ್ಲಿ 11,215 ನಾಪತ್ತೆಯಾಗಿದ್ದು ಈ ಪೈಕಿ 10,186 ಪತ್ತೆಯಾಗಿದ್ದು ಇನ್ನೂ 1,029 ಮತ್ತು 2023ರಲ್ಲಿ 950 ಕಾಣೆಯಾಗಿರುವ ಮಹಿಳೆಯರ ಪೈಕಿ 529 ಪತ್ತೆಯಾಗಿಲ್ಲ ಎಂದು ಗೃಹ ಇಲಾಖೆ ಒದಗಿಸಿರುವ ಮಾಹಿತಿಯಿಂದ ಗೊತ್ತಾಗಿದೆ.

18 ವರ್ಷದೊಳಗಿನ ಗಂಡು ಮಕ್ಕಳು 2020ರಿಂದ 2023ರವರೆಗೆ 1,745 ನಾಪತ್ತೆಯಾಗಿದ್ದು ಈ ಪೈಕಿ 1,493 ಪತ್ತೆ ಹಚ್ಚಲಾಗಿದೆ. ಇನ್ನೂ 252 ಮಕ್ಕಳನ್ನು ಪತ್ತೆ ಹಚ್ಚಬೇಕಿದೆ. ಇದೇ ಅವಧಿಯಲ್ಲಿ 4,885 ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದು ಈ ಪೈಕಿ 4,117 ಪತ್ತೆ ಹಚ್ಚಲಾಗಿದೆ. ಇನ್ನೂ 768 ಪತ್ತೆಯಾಗಿಲ್ಲ.

ರಾಜ್ಯದಲ್ಲಿ 2020ರಲ್ಲಿ 13,246 ನಾಪತ್ತೆ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 13,042 ಪ್ರಕರಣ ನಿಜ ಎಂದು ದೃಢಪಟ್ಟಿದೆ. ಆದರೆ ಕಾಣೆಯಾಗಿದ್ದ 686 ಜನರನ್ನು ಪತ್ತೆ ಮಾಡಲು ಆಗಿಲ್ಲ. 331 ಜನರ ಪತ್ತೆ ಪ್ರಗತಿಯಲ್ಲಿದೆ. 2021ರಲ್ಲಿ ನಿಜ ಎಂದು ದೃಢಪಟ್ಟ 14,961 ಪ್ರಕರಣಗಳ ಪೈಕಿ 311 ಜನ ಪತ್ತೆಯಾಗಿಲ್ಲ. 928 ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. 2022ರಲ್ಲಿ 17,701 ಜನ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಅದರಲ್ಲಿ 17,545 ಪ್ರಕರಣಗಳು ದೃಢಪಟ್ಟಿದ್ದು 3,741 ಇನ್ನೂ ತನಿಖೆ ಹಂತದಲ್ಲಿದೆ ಎಂದು ಯು.ಬಿ. ವೆಂಕಟೇಶ್ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳಿಂದ ತಿಳಿದು ಬಂದಿದೆ. ರಾಜ್ಯದ ಸರಕಾರಿ ಮಕ್ಕಳ ಆರೈಕೆ ಕೇಂದ್ರ(ಬಾಲ ಮಂದಿರ)ಗಳಿಂದ ಈವರೆಗೆ 484 ಮಕ್ಕಳು ಕಾಣೆಯಾಗಿದ್ದಾರೆ. ಆ ಪೈಕಿ ಇನ್ನೂ 119 ಮಕ್ಕಳು ಪತ್ತೆಯಾಗಿಲ್ಲ ಎಂದು ಹೈಕೋರ್ಟ್ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಸರಕಾರವೇ ತಿಳಿಸಿತ್ತು.

2022ರ ಫೆಬ್ರವರಿವರೆಗೆ ಪತ್ತೆ ಮಾಡಲಾದ 13 ಮಕ್ಕಳಲ್ಲಿ 11 ಮಕ್ಕಳು ಪೋಷಕರೊಂದಿಗೆ ವಾಸ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳು ಬಾಲ ಮಂದಿರಗಳಲ್ಲಿದ್ದಾರೆ. ನಾಪತ್ತೆಯಾಗಿರುವ 119 ಮಕ್ಕಳ ಪ್ರಕರಣಗಳಲ್ಲಿ 66 ಪ್ರಕರಣಗಳನ್ನು ಮಾನವ ಕಳ್ಳಸಾಗಣೆ ತಡೆ ಘಟಕ (ಎಎಚ್ಟಿಯು)ಗಳಿಗೆ ಮತ್ತು 53 ಪ್ರಕರಣ ಸಂಬಂ‘ಪಟ್ಟ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಲಾಗಿದೆ ಎಂದು ಸರಕಾರ ಅನುಪಾಲನಾ ವರದಿಯಲ್ಲಿ ತಿಳಿಸಿತ್ತು.

share
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
X