ನಿಕ್ಕಿ ಯಾದವ್ ನನ್ನು ಹತ್ಯೆಗೈದ ಸಾಹಿಲ್ ತಂದೆ ಕೂಡ ಈ ಹಿಂದೆ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ: ಪೊಲೀಸರು

ಹೊಸದಿಲ್ಲಿ: ತನ್ನ ಸಂಗಾತಿ ನಿಕ್ಕಿ ಯಾದವ್‌ನನ್ನು ಕೊಂದು ಶವವನ್ನು ದಿಲ್ಲಿಯ ತನ್ನ ಕುಟುಂಬದ ಒಡೆತನದ ರಸ್ತೆ ಬದಿಯ ರೆಸ್ಟೋರೆಂಟ್‌ನ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ನಿಕ್ಕಿ ಯಾದವ್‌ನ ತಂದೆಯನ್ನು ಕೂಡ ಈ ಹಿಂದೆ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ.
ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಪೊಲೀಸರು ಸಾಹಿಲ್ ಗೆಹ್ಲೋಟ್ ಹಾಗೂ ಆತನ ತಂದೆ ವೀರೇಂದ್ರನನ್ನು ಧಾಬಾಕ್ಕೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಪೊಲೀಸರು ವೀರೇಂದ್ರ, ಸಾಹಿಲ್‌ನ ಇಬ್ಬರು ಸೋದರ ಸಂಬಂಧಿಗಳಾದ ಆಶಿಶ್ ಹಾಗೂ ನವೀನ್ ಮತ್ತು ಇಬ್ಬರು ಸ್ನೇಹಿತರಾದ ಅಮರ್ ಹಾಗೂ ಲೋಕೇಶ್ ರನ್ನು ಡ್ಯೂಟಿ ಮ್ಯಾಜಿಸ್ಟ್ರೇಟ್ ನಿವಾಸಕ್ಕೆ ಹಾಜರುಪಡಿಸಿದರು.
ಸಾಹಿಲ್ ಹಾಗೂ ನಿಕ್ಕಿ ಮೂರು ವರ್ಷಗಳ ಹಿಂದೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಿಕ್ಕಿ ತನ್ನ ಕುಟುಂಬವನ್ನು ಮದುವೆಗೆ ಆಹ್ವಾನಿಸಿದ್ದರು ಆದರೆ ಜಾತಿ ಭೇದದ ಕಾರಣ ಅವರು ಮದುವೆಗೆ ಒಪ್ಪಿಗೆ ನೀಡಲಿಲ್ಲ.
ಸಾಹಿಲ್‌ನ ತಂದೆ, ಸೋದರ ಸಂಬಂಧಿಗಳು ಹಾಗೂ ಇಬ್ಬರು ಸ್ನೇಹಿತರ ಭಾಗಿಯಾಗಿರುವ ಶಂಕೆಯಿಂದ ಪೊಲೀಸರು ಅವರನ್ನೂ ವಿಚಾರಣೆಗೆ ಒಳಪಡಿಸಿದರು ಸಾಹಿಲ್ ಹೇಳಿಕೆಗೆ ವ್ಯತಿರಿಕ್ತ ಉತ್ತರಗಳನ್ನು ಪಡೆದ ನಂತರ ಅವರನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.







