ಐಎಎಸ್ ಅಧಿಕಾರಿ ನಗ್ನ ಚಿತ್ರ ಕಳಿಸಬಹುದಾ?: ರೂಪಾ ಮೌದ್ಗಿಲ್ ಪ್ರಶ್ನೆ
ರೋಹಿಣಿ ಸಿಂಧೂರಿ -ರೂಪಾ ಮೌದ್ಗಿಲ್ ಬಹಿರಂಗ ಜಟಾಪಟಿ ತಾರಕಕ್ಕೆ

ಬೆಂಗಳೂರು, ಫೆ.20: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ನಡುವಿನ ವೈಯಕ್ತಿಕ ವಿಚಾರಗಳ ಬಹಿರಂಗ ಜಟಾಪಟಿಗೆ ಮುಖ್ಯಮಂತ್ರಿ, ಗೃಹಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೊರತಾಗಿಯೂ ಇವರೊಳಗಿನ ಜಗಳ ತಾರಕಕ್ಕೇರಿದೆ.
ಈ ಬಾರಿ ಮೊಬೈಲ್ ಫೋನ್ ನಲ್ಲಿ ಯಾವುದೋ ಮೆಸೇಜ್ ಡಿಲೀಟ್ ಆಗಿರುವ ಚಿತ್ರಗಳ ಸ್ಕ್ರೀನ್‌ಶಾಟ್ ಅನ್ನು Facebookನಲ್ಲಿ ಹಂಚಿಕೊಂಡಿರುವ ಡಿ.ರೂಪಾ ಮೌದ್ಗಿಲ್, "Get well soon ಅಂತಾ ನನಗೆ ಹೇಳಿದ್ದಾರಲ್ಲ press ನಲ್ಲಿ ಇವತ್ತು ರೋಹಿಣಿ ಸಿಂಧೂರಿ , ಅವರ deleted ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ. Number ಅವರದೇ ಅಲ್ಲವಾ. ಐಎಎಸ್ ಅಧಿಕಾರಿ ನಗ್ನ ಚಿತ್ರ, nude, naked pics ಕಳಿಸಬಹುದ?" ಎಂದು ಪ್ರಶ್ನಿಸಿದ್ದಾರೆ.
"ಈ ರೀತಿಯ ಪಿಕ್ಸ್ ಕಳಿಸಿದ್ದು ಯಾವ ಕಾರಣಕ್ಕಾಗಿ. ಸಂಧಾನಕ್ಕೆ? ಅವರ ಮೇಲಿನ ಆರೋಪ prove ಆಗಿರುವ preliminary inquiry ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆಯಲು? ಯಾವುದು? ಅವರೇ ಉತ್ತರಿಸಬೇಕು." ರೂಪಾ ಬರೆದುಕೊಂಡಿದ್ದಾರೆ.
"Get well soon ಅಂತಾ ಹೇಳುವುದರ ಮೂಲಕ mental illness ಬಗ್ಗೆ ಅವರ ಅಭಿಪ್ರಾಯ ಎಷ್ಟು cheap ಅಂತಾ ತೋರಿಸುತ್ತದೆ" ರೂಪಾ ಮೌದ್ಗಿಲ್ ಟೀಕಿಸಿದ್ದಾರೆ.
"ಸಿಂಧೂರಿ ಅವರ ಪತಿಯ press meet ಮಾಡ್ತಾರೆ ಅಂದ್ರೆ ಏನರ್ಥ? ರೋಹಿಣಿ ಸಿಂಧೂರಿ ಗೆ ಮೀಡಿಯಾ ದವರ ಸವಾಲು ಎದುರಿಸಲು ಧೈರ್ಯ ಇಲ್ಲವಾ? ಉತ್ತರಗಳಿಲ್ಲವ? ಅವರ ಪತಿ ಹೇಳೋದು, phone hack ಮಾಡಲಾಗಿದೆ ಅಂತ. ನಂಬುವ ಮಾತೇ? ಏನೋ ಹೇಳಬೇಕು ಪಾಪ. ಮಾನ ಹರಾಜು ಆಗಿದೆ" ರೂಪಾ ಮೌದ್ಗಿಲ್ ಫೇಸ್ ಬುಕ್ ಪೋಸ್ಟ್ ನಲ್ಲಿ ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹಾಗೂ ರೋಹಿಣಿ ಸಿಂಧೂರಿ ಸಂಧಾನ ಯತ್ನ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾದ ಬೆನ್ನಲ್ಲೇ ಸಿಂಧೂರಿ ವಿರುದ್ಧ ಡಿ.ರೂಪಾ ಮೌದ್ಗಿಲ್ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸಿದ್ದಾರೆ. ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳು ಪಟ್ಟಿ ಮಾಡಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಡಿ.ರೂಪಾ ಮೌದ್ಗಿಲ್ ಪೋಸ್ಟ್ ಮಾಡಿದ್ದರಲ್ಲದೆ, ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೊಗಳನ್ನು ಬಹಿರಂಗಪಡಿಸಿದ್ದರು.







