ಉಪ್ಪಿನಂಗಡಿ: ಬೊಲೆರೋ ಢಿಕ್ಕಿ; ಬೈಕ್ ಸವಾರ ಮೃತ್ಯು

ಉಪ್ಪಿನಂಗಡಿ: ಬೊಲೆರೋ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಕೆಮ್ಮಾರ ಬಳಿಯ ಓಡ್ಲದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಸಬಳೂರಿನ ಕಡೆಂಬ್ಯಾಲು ಕೊರಗಪ್ಪ ಗೌಡ ಮೃತ ಬೈಕ್ ಸವಾರ ಎಂದು ತಿಳಿದು ಬಂದಿದೆ.
ಉಪ್ಪಿನಂಗಡಿಯಿಂದ ಕೆಮ್ಮಾರ ಕಡೆ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ಕಡಬ ಕಡೆಯಿಂದ ಬಂದ ಬೊಲೆರೋ ವಾಹನ ಇವರ ಬೈಕ್ ಗೆ ಢಿಕ್ಕಿಯಾಯಿತು ಎನ್ನಲಾಗಿದೆ.
Next Story





