ಬಂಟ್ವಾಳ: ರೈಲು ಢಿಕ್ಕಿ; ಯುವಕ ಮೃತ್ಯು

ಬಂಟ್ವಾಳ: ರೈಲ್ವೆ ಟ್ರಾಕ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ರೈಲು ಢಿಕ್ಕಿ ಹೊಡೆದ ಘಟನೆ ಬಂಟ್ವಾಳ ತಾಲೂಕಿನ ಅಮ್ಟೂರು ಎಂಬಲ್ಲಿ ಸೋಮವಾರ ನಡೆದಿದೆ.
ಬಿಜಾಪುರ ಮೂಲದ ಮಲ್ಲು ಆಧಿಮಣಿ (33) ಮೃತ ಯುವಕ ಎಂದು ಗುರುತಿಸಲಾಗಿದೆ.
ಈತ ಮಾನಸಿಕವಾಗಿ ಖಿನ್ನತೆಯಿಂದ ಇದ್ದ ಎಂದು ಹೇಳಲಾಗಿದ್ದು, ಫೆ.17ರಂದು ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದ ಎಂದು ಮನೆಯವರು ತಿಳಿಸಿದ್ದಾರೆ.
ರೈಲ್ವೆ ಟ್ರಾಕ್ ಪೆಟ್ರೋಲಿಂಗ್ ಮಾಡುವ ಸಿಬ್ಬಂದಿ ಮೃತದೇಹವನ್ನು ಗಮನಿಸಿ ಇಲಾಖೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಟ್ವಾಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Next Story