Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನರೇಗಾ ಕಾರ್ಮಿಕರು ಈ ಆ್ಯಪ್ ವಿರುದ್ಧ...

ನರೇಗಾ ಕಾರ್ಮಿಕರು ಈ ಆ್ಯಪ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದೇಕೆ?

ಶ್ರೀನಿವಾಸ ಕೊಡಾಲಿ (thewire.in)ಶ್ರೀನಿವಾಸ ಕೊಡಾಲಿ (thewire.in)20 Feb 2023 6:26 PM IST
share
ನರೇಗಾ ಕಾರ್ಮಿಕರು ಈ ಆ್ಯಪ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದೇಕೆ?

ಹೊಸದಿಲ್ಲಿ: ನರೇಗಾ ಯೋಜನೆಯಡಿ ಹಾಜರಾತಿಗಾಗಿ ಜ.1ರಿಂದ ಕಡ್ಡಾಯಗೊಳಿಸಲಾಗಿರುವ ನೂತನ ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಾಫ್ಟ್ವೇರ್ (ಎನ್ಎಂಎಂಎಸ್) ಆ್ಯಪ್ ಅನ್ನು ವಿರೋಧಿಸಿ ಕಾರ್ಮಿಕರು ನರೇಗಾ ಸಂಘರ್ಷ ಮೋರ್ಚಾದ ನೇತೃತ್ವದಲ್ಲಿ ದಿಲ್ಲಿಯ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಎಲ್ಲ ನರೇಗಾ ಕಾರ್ಮಿಕರು ಪ್ರತಿ ದಿನ ಈ ಆ್ಯಪ್ ನಲ್ಲಿ ಜಿಯೋ ಟ್ಯಾಗ್ ಮಾಡಲಾದ ಎರಡು ಫೋಟೊಗಳನ್ನು ಅಪ್ಲೋಡ್ ಮಾಡುವುದು ಅಗತ್ಯವಾಗಿದೆ. ಫೋಟೊಗಳನ್ನು ಅಪ್ಲೋಡ್ ಮಾಡಲು ಮತ್ತು ಹಾಜರಾತಿಯನ್ನು ಗುರುತಿಸಲು ವಿಫಲರಾದರೆ ಅಂದಿನ ವೇತನವನ್ನು ಕಾರ್ಮಿಕರಿಗೆ ನೀಡಲಾಗುವುದಿಲ್ಲ.

ಆಧಾರ್ ಅಸ್ತಿತ್ವಕ್ಕೆ ಬಂದು ದಶಕ ಕಳೆದ ಬಳಿಕ ಸರಕಾರವು ಕಾರ್ಮಿಕರ ‘ಕಲ್ಯಾಣಕ್ಕಾಗಿ’ ಮತ್ತು ‘ಭ್ರಷ್ಟಾಚಾರವನ್ನು ತೊಡೆದುಹಾಕಲು’ ಮತ್ತೊಮ್ಮೆ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸುತ್ತಿದೆ, ಆದರೆ ಯಾವುದೇ ಸ್ಪಷ್ಟವಾದ ಪ್ರಗತಿ ಕಂಡು ಬರುತ್ತಿಲ್ಲ. ಸಾಫ್ಟ್ವೇರ್ ಯಾವಾಗಲೂ ಸಮಸ್ಯೆಗಳನ್ನು ಬಗೆಹರಿಸಲು ವಿಧಾನ ಎಂದು ಹೇಳಲಾಗುತ್ತದೆ, ಆದರೆ ಎನ್ಎಂಎಂಎಸ್ ಆ್ಯಪ್ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸಿದೆ. ಆಧಾರ್ ನಕಲಿ ಫಲಾನುಭವಿಗಳನ್ನು ಹೇಗೆ ಹೊರಹಾಕಿದೆ ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ. ಅದು ವಾಸ್ತವದಲ್ಲಿ ಫಲಾನುಭವಿಗಳಿಗೆ ತೊಡಕನ್ನುಂಟು ಮಾಡಿದೆ ಎನ್ನುವುದನ್ನು ಹಲವಾರು ಪ್ರಕರಣಗಳು ತೋರಿಸಿವೆ.

ಈಗ ಎನ್ಎಂಎಂಎಸ್ ಆ್ಯಪ್ ಇನ್ನೊಂದು ಅಡಚಣೆಯಾಗಿದೆ. ನರೇಗಾದಡಿ ಅಸ್ತಿತ್ವದಲ್ಲಿರುವ ಹಾಜರಾತಿ ವ್ಯವಸ್ಥೆ ಮತ್ತು ಕೆಲಸದ ನಿರ್ವಹಣೆಗೆ ಅದು ಸ್ಪಷ್ಟವಾಗಿ ಅಡ್ಡಿಯನ್ನುಂಟು ಮಾಡುತ್ತಿದೆ. ಕಾರ್ಮಿಕರಿಗೆ ತಮ್ಮ ಕೆಲಸಕ್ಕೆ ವೇತನವನ್ನು ನೀಡಬೇಕೇ ಅಥವಾ ಅವರು ಸರಕಾರಕ್ಕಾಗಿ ಪುಕ್ಕಟೆ ದುಡಿಯಬೇಕೇ ಎನ್ನುವುದನ್ನು ಈ ಆ್ಯಪ್ ನಿರ್ಧರಿಸುತ್ತದೆ ಮತ್ತು ಇದು ಅನ್ಯಾಯವಾಗಿದೆ.

ಆಧಾರ್ ಗೆ ವಂಚನೆಯನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ, ಅದೇ ರೀತಿ ಈ ಆ್ಯಪ್ ಭ್ರಷ್ಟಾಚಾರವನ್ನು ನಿರ್ಮೂಲಿಸುತ್ತದೆ ಎಂದು ನಂಬಲು ಯಾವುದೇ ಕಾರಣವಿಲ್ಲ. ವಾಸ್ತವದಲ್ಲಿ ಡಿಜಿಟಲೀಕರಣವು ಎಲ್ಲ ಸಮಾಜ ಕಲ್ಯಾಣ ಕಾರ್ಯಕ್ರಮಗಳ ವಿತರಣೆಯನ್ನು ಅಗೋಚರ ಮತ್ತು ರಹಸ್ಯವಾಗಿಸಿದೆ ಮತ್ತು ಇದು ಸಾಮಾಜಿಕ ಆಡಿಟ್ ಮಾಡುವುದನ್ನು ತಳಮಟ್ಟದ ಜನರಿಗೆ ಕಠಿಣವಾಗಿಸಿದೆ. ಎನ್ಎಂಎಂಎಸ್ ಆ್ಯಪ್ ನಕಲುಗಳನ್ನು ಗುರುತಿಸಲು ಮತ್ತು ಭ್ರಷ್ಟಾಚಾರವನ್ನು ನಿವಾರಿಸಲು ಫೋಟೊಗಳನ್ನು ಬಳಸುವುದಾಗಿ ಭರವಸೆ ನೀಡುತ್ತಿದೆ. ಅದು ಭ್ರಷ್ಟಾಚಾರವನ್ನು ನಿವಾರಿಸುತ್ತದೆಯೇ ಇಲ್ಲವೇ ಎನ್ನುವುದನ್ನು ಬಿಡಿ,ಫೋಟೊಗಳನ್ನು ಅಪ್ಲೋಡ್ ಮಾಡುವ ಪ್ರಕ್ರಿಯೆಯು ಪ್ರಾಮಾಣಿಕ ನರೇಗಾ ಕಾರ್ಮಿಕರಿಗೆ ತೊಡಕಾಗಿದೆ.

ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರೂ ಸಾಫ್ಟ್ವೇರ್ನಲ್ಲಿ ಯಾವುದೇ ಸಮಸ್ಯೆಯಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸಿದ್ಧವಿಲ್ಲ. ಸಾಫ್ಟ್ವೇರ್ ಅಭಿವೃದ್ಧಿಯ ಸಂದರ್ಭದಲ್ಲಿ ಅದು ಉದ್ದೇಶಿತ ಕಾರ್ಯಗಳನ್ನು ಪೂರೈಸುತ್ತದೆಯೇ ಎಂದು ಪರೀಕ್ಷಿಸಲು ಸರಕಾರದ ಬಳಿ ‘ಸ್ಟ್ಯಾಂಡರ್ಡೈಸೇಷನ್ ಟೆಸ್ಟಿಂಗ್ ಆ್ಯಂಡ್ ಕ್ವಾಲಿಟಿ ಸರ್ಟಿಫಿಕೇಷನ್’ ಎಂಬ ಸಮಗ್ರ ಇಲಾಖೆಯೇ ಇದೆ. ಆದರೆ ಎನ್ಎಂಎಂಎಸ್ ಆ್ಯಪ್ ನ ಗುಣಮಟ್ಟದ ಬಗ್ಗೆ ಯಾವುದೇ ಪರೀಕ್ಷೆ ನಡೆಸಿರುವಂತೆ ಕಂಡು ಬರುತ್ತಿಲ್ಲ. ಆದಾಗ್ಯೂ ಸರಕಾರವು ಆ್ಯಪ್ ಅನ್ನು ಕಡ್ಡಾಯಗೊಳಿಸಿದೆ ಮತ್ತು ನರೇಗಾ ಕಾರ್ಮಿಕರು ವ್ಯಕ್ತಪಡಿಸಿರುವ ಕಳವಳಗಳನ್ನು ಆಲಿಸಲು ಸಿದ್ಧವಿಲ್ಲ.

ಸಾಫ್ಟ್ವೇರ್ ವಿನ್ಯಾಸದಿಂದಾಗಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಮೀರಿ ಗ್ರಾಮೀಣ ಪ್ರದೇಶಗಳಲ್ಲಿ ಸ್ಮಾರ್ಟ್ ಫೋನ್ಗಳು ಮತ್ತು ಇಂಟರ್ನೆಟ್ ಲಭ್ಯತೆಯಲ್ಲಿ ಕೊರತೆಗಳು ಇನ್ನಷ್ಟು ಸವಾಲುಗಳನ್ನು ಸೃಷ್ಟಿಸಿವೆ.

ಇವೆಲ್ಲ ಹೊಸದೇನಲ್ಲ. ಈ ವ್ಯವಸ್ಥೆಗಳನ್ನು ಅಭಿವೃದ್ಧಿಗೊಳಿಸುವ ಹೊಣೆಯನ್ನು ಹೊತ್ತಿರುವ ಅಧಿಕಾರಿಗಳು ಮತ್ತು ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಈ ಬಗ್ಗೆ ಹಲವಾರು ಬಾರಿ ಅರಿವು ಮೂಡಿಸಲಾಗಿದೆ. ಆದರೂ ಸರಕಾರವು ಭಾರತೀಯರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ರಾಮಬಾಣವಾಗಿ ತಂತ್ರಜ್ಞಾನ ಹೇರುವುದನ್ನು ಮುಂದುವರಿಸಿದೆ.

ಸಮರ್ಥ ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಸವಾಲುಗಳಿದ್ದರೂ ಈ ಸಮಸ್ಯೆಯು ಅದನ್ನೂ ಮೀರಿ ಹರಡಿಕೊಳ್ಳುತ್ತಿದೆ. ಇದು ಎಲ್ಲ ಕಲ್ಯಾಣ ಕಾರ್ಯಕ್ರಮಗಳಿಗೆ ಹಣಕಾಸನ್ನು ತಗ್ಗಿಸುವ ಸರಕಾರದ ನೀತಿ ನಿರ್ಧಾರವಾಗಿದೆ. ತಂತ್ರಜ್ಞಾನವು ಮುಂದುವರಿದಂತೆ ಈ ಸಾಫ್ಟ್ವೇರ್ ಸಮಸ್ಯೆಗಳು ಬಗೆಹರಿಯುತ್ತವೆ,ಆದರೆ ಪಾವತಿಸದ ವೇತನಗಳ ಸಮಸ್ಯೆಯನ್ನು ಸಚಿವಾಲಯವು ಬಗೆಹರಿಸುತ್ತಿಲ್ಲ ಮತ್ತು ಇದು ಪ್ರತಿಭಟನೆಗಳಿಗೆ ಕಾರಣವಾಗಿದೆ.

share
ಶ್ರೀನಿವಾಸ ಕೊಡಾಲಿ (thewire.in)
ಶ್ರೀನಿವಾಸ ಕೊಡಾಲಿ (thewire.in)
Next Story
X