ಹತ್ಯೆಗೀಡಾದ ಮಸೂದ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ, ಸುಳ್ಯ ತಾಲೂಕು ಜಮಾಅತ್ ಸಮಿತಿ ವತಿಯಿಂದ ಮನೆ ಹಸ್ತಾಂತರ

ಸುಳ್ಯ: ಕಳೆದ ಜುಲೈನಲ್ಲಿ ಸುಳ್ಯ ತಾಲೂಕಿನ ಕಳಂಜ ಎಂಬಲ್ಲಿ ಹತ್ಯೆಗೀಡಾದ ಮಸೂದ್ ಕುಟುಂಬವನ್ನು ಅನೇಕ ದಾನಿಗಳು, ಸಂಘಟನೆಗಳು, ರಾಜಕೀಯ ನಾಯಕರುಗಳು ಭೇಟಿ ನೀಡಿ ಸಾಂತ್ವನ ಮತ್ತು ಸಹಾಯ ಹಸ್ತವನ್ನು ಚಾಚಿದ್ದರು. ಈ ಪೈಕಿ ದ.ಕ. ಮತ್ತು ಉಡುಪಿ ಜಿಲ್ಲೆ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಅವರು ಸೆಂಟ್ರಲ್ ಕಮಿಟಿಯಿಂದ ನೀಡಿದ 30 ಲಕ್ಷ ರೂ., ತಾಲೂಕು ಜಮಾಅತ್ ಮತ್ತು ದಾನಿಗಳು ನೀಡಲಾದ ಮೊತ್ತದಲ್ಲಿ ಸುಳ್ಯ ತಾಲೂಕು ಬೆಳ್ಳಾರೆ ಎಂಬಲ್ಲಿ ಮನೆಯನ್ನು ಹಾಗೂ ಉಳಿದ ಮೊತ್ತದಲ್ಲಿ ಮಸೂದ್ ಸಹೋದರಿಯ ಮದುವೆಗೆ ಚಿನ್ನಾಭರಣ ಖರೀದಿಸುವ ಯೋಜನೆ ರೂಪಿಸಿ ಇಂದು ಬೆಳ್ಳಾರೆಯಲ್ಲಿ ಮಸೂದ್ ಕುಟುಂಬಕ್ಕೆ ಮನೆ ಹಸ್ತಾಂತರ ಮಾಡಲಾಯಿತು.
ದ.ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್ ಅವರು ಮನೆ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಮನೆ ಇಲ್ಲದೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈ ನಿರ್ಗತಿಕ ಕುಟುಂಬ ಸಂಕಷ್ಟದಲ್ಲಿದ್ದಾಗ ಜಾತಿ, ಮತ ಭೇದ ಇಲ್ಲದೆ ನೆರವಿಗೆ ಧಾವಿಸಿ ಸಾಂತ್ವನ ಹೇಳಿ ಸಹಾಯ ಮಾಡಿ ಮಾನವೀಯತೆ ಮೆರೆದ ಎಲ್ಲರಿಗೂ ನಮ್ಮ ಅಭಿನಂದನೆಗಳು. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಪರಸ್ಪರ ಸೌಹಾರ್ದತೆಯಿಂದ ದೇಶದ ಜಾತ್ಯತೀತ ಮೌಲ್ಯದ ಸೌಂದರ್ಯ ಹೆಚ್ಚಿಸಲು ಕಾರಣ ಕಾರಣಕರ್ತರಾಗೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರುಗಳಾದ ಮಾಜಿ ಮೇಯರ್ ಅಶ್ರಫ್, ಪುತ್ತು ಬಾವ ಹಾಜಿ, ಹಾಜಿ ಕೆ.ಪಿ. ಅಹ್ಮದ್ ಆಕರ್ಷನ್ ಪುತ್ತೂರು, ಸಂಘಟನಾ ಕಾರ್ಯದರ್ಶಿಗಳಾದ ಎಸ್. ಸಂಶುದ್ದೀನ್ ಸುಳ್ಯ, ಅಬ್ದುಲ್ ರಹ್ಮಾನ್ ಆಝಾದ್, ಕಾರ್ಯದರ್ಶಿ ಕಾನೂನು ಸಲಹೆಗಾರ ನೂರುದ್ದೀನ್ ಸಾಲ್ಮರ, ಕೆಪಿಸಿಸಿ ಮಾಧ್ಯಮ ವಕ್ತಾರ ಟಿ.ಎಂ ಶಾಹಿದ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ. ಎಂ ಮುಸ್ತಾಫ, ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ಸಂಚಾಲಕ ಇಕ್ಬಾಲ್ ಎಲಿಮಲೆ, ಎಐಕೆಎಂಸಿಸಿ ದ. ಕ. ಜಿಲ್ಲಾ ಖಜಾಂಚಿ ಹಾಜಿ ಇಬ್ರಾಹಿಂ, ಜಾವಗಲ್ ಶರೀಫ್ ಮ್ಯಾನೇಜಿಂಗ್ ಟ್ರಸ್ಟಿ ಹಾಜಿ ಇಸಾಕ್ ಸಾಹೇಬ್ ಪಾಜಪಲ್ಲ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷ ಪಿ. ಎ. ಮಹಮ್ಮದ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್, ಕಲ್ಮಡ್ಕ ಗ್ರಾಮ ಪಂ. ಅಧ್ಯಕ್ಷೆ ಹಾಜಿರ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಜಿ.ಕೆ, ಸುಳ್ಳ ಅಲ್ಪಸಂಖ್ಯಾತರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಪಡಪಿನಂಗಡಿ, ಜಾಲಸೂರ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಜೀದ್ ನಡುವಡ್ಕ, ಅಡ್ವೋಕೇಟ್ ಮೂಸಾ ಪೈoಬಚ್ಚಾಲ್, ಜಾಲಸೂರ್ ಮಸೀದಿ ಅಧ್ಯಕ್ಷ ಉಸ್ಮಾನ್ ಜಿ.ಎಂ, ಮೊಗರ್ಪಣೆ ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ ಸೀ ಫುಡ್, ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮುಸ್ತಫಾ ಕಲ್ಪಣೆ, ಅನ್ಸಾರಿಯಾ ಎಜುಕೇಶನ್ ಟ್ರಸ್ಟ್ ನಿರ್ದೇಶಕ ಶಾಫಿ ಕುತ್ತಾಮೊಟ್ಟೆ, ಉದ್ಯಮಿಗಳಾದ ಸಿದ್ದೀಕ್ ಕೊಕೊ, ಹಾಜಿ ಮೂಸ ಕಲ್ಪಣೆ ಮತ್ತು ಮಸೂದ್ ಕಳಂಜ ಕುಟುಂಬಸ್ಥರು ಉಪಸ್ಥಿತರಿದ್ದರು.