ಅಂದರ್ ಬಾಹರ್: ಏಳು ಮಂದಿ ಬಂಧನ
ಕುಂದಾಪುರ, ಫೆ.20: ತಲ್ಲೂರು ಗ್ರಾಮದ ವೈಭವ ಬಾರ್ ಬಳಿ ಡಿ.19ರಂದು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ತಲ್ಲೂರು ಪಿಂಗಾಣಿಗುಡ್ಡೆಯ ಪುಟ್ಟ ಎಸ್.(42), ಗಣೇಶ್(49), ಪಾರ್ತಿ ಕಟ್ಟೆಯ ಸುದರ್ಶನ(31), ತಲ್ಲೂರಿನ ಮುಡೂರ (56), ಕೋಟೆಬಾಗಿಲಿನ ಸುರೇಶ್(47), ಸೀತಾರಾಮ (43), ಸುನೀಲ್(30) ಬಂಧಿತ ಆರೋಪಿಗಳು. ಇವರಿಂದ 2420 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story