ಉಡುಪಿ: ಕೋರಿಯರ್ ಸಂಸ್ಥೆ ಹೆಸರಿನಲ್ಲಿ ವಿದ್ಯಾರ್ಥಿನಿಗೆ ಸಾವಿರಾರು ರೂ. ವಂಚನೆ

ಉಡುಪಿ, ಫೆ.20: ಕೋರಿಯರ್ ಸಂಸ್ಥೆಯವರೆಂದು ನಂಬಿಸಿ ವಿದ್ಯಾರ್ಥಿನಿಯೊಬ್ಬರ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಹಣ ವರ್ಗಾಯಿಸಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ತಾಲೂಕಿನ ಕೋಟೇಶ್ವರ ಬೀಜಾಡಿ ಕೆನರಾ ಬ್ಯಾಂಕ್ ಬಳಿಯ ನಿವಾಸಿ ರೂಪಶ್ರೀ ಎಂ.ಸಿ.(27) ಎಂಬವರು ವಿದ್ಯಾಭ್ಯಾಸಕ್ಕಾಗಿ ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದು, ಆದರೆ ಆರ್ಡರ್ ಮಾಡಿ ಒಂದು ವಾರ ಕಳೆದರೂ ಪುಸ್ತಕಗಳು ಬಾರದೇ ಇರುವುದನ್ನು ಕಂಡು ಫೆ.18ರಂದು ಗೂಗಲ್ ನಲ್ಲಿ ಕೋರಿಯರ್ ಸಂಸ್ಥೆಯ ವಿವರವನ್ನು ಹುಡುಕಾಡಿದ್ದರು.
ಗೂಗಲ್‌ನಲ್ಲಿ ಕಂಡುಬಂದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ತಾನು ಕೋರಿಯರ್ ಸಂಸ್ಥೆಯವನೆಂದು ನಂಬಿಸಿದನು. ಬಳಿಕ ರೂಪಶ್ರೀ ಅವರ ಮೊಬೈಲ್‌ಗೆ ಲಿಂಕ್ ಒಂದನ್ನು ಕಳುಹಿಸಿ, ಬ್ಯಾಂಕ್ ವಿವರ ಪಡೆದಿದ್ದನು. ಅದೇ ದಿನ ರೂಪಶ್ರೀ ಖಾತೆಯಿಂದ ಒಟ್ಟು 19 ಬಾರಿ ಹಣ ಡ್ರಾ ಮಾಡಿ, 80,602 ರೂ. ವರ್ಗಾಯಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story