ಫೆ.21ರಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ಪುನಾರಂಭ

ಬೆಂಗಳೂರು, ಫೆ.20: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದಿಂದ ಮಂಗಳವಾರ(ಫೆ.21)ದಿಂದ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಪುನರಾಂಭವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾತನಾಡಿದ ಅವರು, ‘ಫೆ.22ರಂದು ಶಿವಮೊಗ್ಗ ಗ್ರಾಮಾಂತರ, 23ರಂದು ಶಿವಮೊಗ್ಗ ಗ್ರಾಮಾಂತರ ಹಾಗೂ ಸೊರಬ, 24ರಂದು ಯಲ್ಲಾಪುರ ಮತ್ತು ತೀರ್ಥಹಳ್ಳಿ, 25ರಂದು ತೀರ್ಥಹಳ್ಳಿ ಹಾಗೂ ಕೊಪ್ಪ, 26ರಂದು ಶೃಂಗೇರಿ, 28ಕ್ಕೆ ಚಿಕ್ಕಮಗಳೂರು ಹಾಗೂ ಮಾ.1ರಂದು ಮೂಡಿಗೆರೆ ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ. ಈ ತಿಂಗಳ 27ರಂದು ಪಕ್ಷದ ಬೃಹತ್ ಸಮಾವೇಶ ಇದ್ದು, ಅಂದು ಪಂಚರತ್ನ ರಥಯಾತ್ರೆಗೆ ಬಿಡುವು ಕೊಡಲಾಗಿದೆ ಎಂದು ತಿಳಿಸಿದರು.
Next Story





