ಪಾಕಿಸ್ತಾನ: ಶಂಕಿತ ಮಹಿಳಾ ಆತ್ಮಾಹುತಿ ಬಾಂಬರ್ ಬಂಧನ

ಲಾಹೋರ್, ಫೆ.20: ಸ್ಫೋಟಕಗಳಿದ್ದ ಜಾಕೆಟ್ ಧರಿಸಿದ್ದ ಶಂಕಿತ ಮಹಿಳಾ ಆತ್ಮಾಹುತಿ ಬಾಂಬರ್ ನನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಪೊಲೀಸರು ಹೇಳಿದ್ದಾರೆ.
ಬಲೂಚಿಸ್ತಾನ ಪ್ರಾಂತದಲ್ಲಿ ದಾಳಿ ನಡೆಸಲು ಈಕೆ ಯೋಜನೆ ರೂಪಿಸಿದ್ದಳು. ಗುಪ್ತಚರ ಇಲಾಖೆಯ ಮಾಹಿತಿಯಂತೆ ಈಕೆಯನ್ನು ಕ್ವೆಟಾದ ಸ್ಯಾಟಿಲೈಟ್ ನಗರದಲ್ಲಿ ಭಯೋತ್ಪಾದನೆ ನಿಗ್ರಹ ದಳದವರು ಬಂಧಿಸಿದ್ದಾರೆ.
ಈಕೆ ಸ್ಫೋಟಕಗಳಿದ್ದ ಜಾಕೆಟ್ ಧರಿಸಿದ್ದಳು. ಅಲ್ಲದೆ ಈಕೆಯ ಬಳಿಯಿದ್ದ ಬ್ಯಾಗಿನಲ್ಲೂ ಸ್ಫೋಟಕ ಪತ್ತೆಯಾಗಿದೆ. ಈಕೆ ನಿಷೇಧಿತ ಉಗ್ರ ಸಂಘಟನೆ ಬಲೂಚ್ ಲಿಬರೇಷನ್ ಫ್ರಂಟ್ ನ ಸದಸ್ಯೆಯಾಗಿದ್ದು ಆತ್ಮಹತ್ಯಾ ಬಾಂಬ್ ದಾಳಿಗೆ ಯೋಜನೆ ರೂಪಿಸಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story