ವೈದ್ಯಕೀಯ ತುರ್ತು ಪರಿಸ್ಥಿತಿ: ದಿಲ್ಲಿಗೆ ಬರಬೇಕಿದ್ದ ಏರ್ ಇಂಡಿಯಾ ವಿಮಾನ ಲಂಡನ್‌ನಲ್ಲಿ ಲ್ಯಾಂಡ್

ಹೊಸದಿಲ್ಲಿ: ವೈದ್ಯಕೀಯ ತುರ್ತುಪರಿಸ್ಥಿತಿಯಿಂದಾಗಿ ನ್ಯೂಯಾರ್ಕ್‌ನಿಂದ ದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಮಾರ್ಗ ಮಧ್ಯದಲ್ಲಿ ಲಂಡನ್ ನಲ್ಲಿ ಇಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಫ್ಲೈಟ್‌ರಾಡಾರ್ 24' ವೆಬ್ ತಾಣದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಬೋಯಿಂಗ್ 777-337 (ER) ವಿಮಾನವನ್ನು ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಲಂಡನ್‌ನಲ್ಲಿ ಇಳಿಸಲಾಗಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ವಿಮಾನವನ್ನು ಲಂಡನ್ ನಲ್ಲಿ ಇಳಿಸಲಾಗಿದ್ದು, ಸಂಬಂಧಪಟ್ಟ ಪ್ರಯಾಣಿಕರನ್ನು ಇಳಿಸಿದ ನಂತರ, ವಿಮಾನವು ಲಂಡನ್‌ನಿಂದ ದಿಲ್ಲಿಗೆ ಹೊರಡಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವೈದ್ಯಕೀಯ ತುರ್ತುಸ್ಥಿತಿಯ ಬಗ್ಗೆ ಇನ್ನಷ್ಟು ವಿವರಗಳು ಸಿಗಬೇಕಿದೆ.
ವಿಮಾನವು ದಿಲ್ಲಿಗೆ ತಲುಪಲು ಕನಿಷ್ಠ 6-7 ಗಂಟೆಗಳ ಕಾಲ ತಡವಾಗುವ ಸಾಧ್ಯತೆಯಿದೆ ಎಂದು ವೈಡ್-ಬಾಡಿ ಏರ್‌ಕ್ರಾಫ್ಟ್ ಪೈಲಟ್ ಹೇಳಿದ್ದಾರೆ.
Next Story





