ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ರೈತರಿಬ್ಬರು ಸ್ಥಳದಲ್ಲೇ ಮೃತ್ಯು

ಮಾಯಕೊಂಡ: ಹೊಲದಲ್ಲಿನ ಮೋಟರ್ ಆನ್ ಮಾಡುವ ವೇಳೆ ಸ್ಟಾಟರ್‌ನಲ್ಲಿ ವಿದ್ಯುತ್ ಪ್ರವಹಸಿ ಸ್ಥಳದಲ್ಲೇ ರೈತರಿಬ್ಬರು ಅಸುನೀಗಿರುವ ದಾರುಣ ಘಟನೆ ತಾಲೂಕಿನ ಬಾಡ ಗ್ರಾಮದಲ್ಲಿ ನಡೆದಿದೆ.
ಬಾಡ ಗ್ರಾಮದ ರೈತ ಚಂದ್ರಪ್ಪ 65 ವರ್ಷ, ಮತ್ತು ಮಂಜುನಾಥ್ 52 ವರ್ಷ ಮೃತ ರೈತರು.
ಸೋಮವಾರ ಬೆಳಗ್ಗೆ ಚಂದ್ರಪ್ಪ ಮತ್ತು ಮಂಜುನಾಥ್ ಎಂದಿನಂತೆ ಇಬ್ಬರು ಹೊಲಕ್ಕೆ ತೆರಳಿದ್ದಾರೆ ಅಲ್ಲಿ ಮೋಟರ್ ಆನ್ ಮಾಡುವಾಗ ವಿದ್ಯುತ್ ಪ್ರವಹಸಿ ಸಾವಿಗೀಡಾಗಿದ್ದಾರೆ ಎಂದು ಸ್ಥಳಿಯರು ತಿಳಿಸಿದರು. ಮಂಜುನಾಥ್ ಗೆ 12 ವರ್ಷ ಮತ್ತು 10 ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ.
ಚಂದ್ರಪ್ಪ ಇವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಅಪಾರ ಬಂದುಗಳನ್ನು ಅಗಲಿದ್ದಾರೆ ಈ ಇಬ್ಬರ ಸಾವಿನಿಂದ ಇಡೀ ಬಾಡ ಗ್ರಾಮವೇ ನಿರವ ವೌನ ಅವರಿಸಿತ್ತು.
ಇಲ್ಲಿನ ಪ್ರಾಥಮಿಕ ಆರೋಗ್ಯ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆಸಲಾಯಿತು. ಸ್ಥಳಕ್ಕೆ ಮಾಯಕೊಂಡ ಪೊಲೀಸ್ ಠಾಣಾ ಸಿಬ್ಬಂದಿ ದಾವಿಸಿ ದೂರು ದಾಖಲಿಸಿಕೊಂಡರು.
ಸ್ಥಳಕ್ಕೆ ಜಿಪ ಮಾಜಿ ಅಧ್ಯಕ್ಷ ಜಿ ಎನ್ ಶೈಲಜಾ ಬಸವರಾಜ್, ಜಿಪ ಮಾಜಿ ಸದಸ್ಯ ಕೆ ಎಸ್ ಬಸವಂತಪ್ಪ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮತರ ಕುಟುಂಬಸ್ಥರು ರೋದನೆ ಮುಗಿಲು ಮಟ್ಟಿತ್ತು.







