ಹಂಪಿ ಕನ್ನಡ ವಿವಿಗೆ ಪ್ರಭಾರಿ ಕುಲಪತಿಗಳಾಗಿ ಡಾ. ಟಿ.ಪಿ. ವಿಜಯ್ ನೇಮಕ

ಬೆಂಗಳೂರು, ಫೆ.20: ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿಗಳಾಗಿ ಅದೇ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಟಿ.ಪಿ. ವಿಜಯ್ ನೇಮಕವಾಗಿದ್ದಾರೆ.
ಈ ಕುರಿತು ಸರಕಾರವು ಆದೇಶ ಹೊರಡಿಸಿದ್ದು, ವಿವಿಗೆ ಪೂರ್ಣಾವಧಿಯ ಕುಲಪತಿಗಳು ನೇಮಕವಾಗುವವರೆಗೂ ಅಥವಾ ಮುಂದಿನ ಆದೇಶದವರೆಗೂ ಪ್ರಭಾರಿ ಕುಲಪತಿಗಳಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದೆ.
ಹಂಪಿ ವಿವಿಯ ಕುಲಪತಿಗಳಾಗಿ ನೇಮಕವಾಗಿದ್ದ ಡಾ. ರಮೇಶ್ ಎಸ್. ಸಿ. ಅವರ ಮೂರು ವರ್ಷಗಳ ಅಧಿಕಾರವಧಿ ಪೂರ್ಣಗೊಂಡ ಬಳಿಕ ರಾಜ್ಯ ಸರಕಾರವು ಅವರ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಣೆ ಮಾಡಲಾಗಿತ್ತು. ಈಗ ಅವರ ಅಧಿಕಾರವಧಿ ಮುಕ್ತಾಯಗೊಂಡಿದ್ದು, ಸರಕಾರ ಪ್ರಭಾರಿ ಕುಲಪತಿಯನ್ನು ನೇಮಕ ಮಾಡಿದೆ.
.jpeg)
Next Story





