Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಾರುತಿ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌:...

ಮಾರುತಿ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌: ಪ್ರಕೃತಿ ನ್ಯಾಶ್ ಬೆಂಗಳೂರು ಚಾಂಪಿಯನ್

20 Feb 2023 11:38 PM IST
share
ಮಾರುತಿ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌: ಪ್ರಕೃತಿ ನ್ಯಾಶ್ ಬೆಂಗಳೂರು ಚಾಂಪಿಯನ್

ಮಂಗಳೂರು: ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಮಾಜ ಸೇವಾ ನಿರತ ಸಂಸ್ಥೆ ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್(ರಿ) ಮೊಗವೀರ ಪಟ್ಣ ಉಳ್ಳಾಲ ಇವುಗಳ ಸಂಯುಕ್ತ  ಆಶ್ರಯದಲ್ಲಿ  ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಲಾದ ಅಖಿಲ ಭಾರತ ಮಟ್ಟದ ಹೊನಲು ಬೆಳಕಿನ ಮಾರುತಿ ಟ್ರೋಫಿ-2023 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ  ಪ್ರಶಸ್ತಿ ಪ್ರಕೃತಿ ನ್ಯಾಶ್ ಬೆಂಗಳೂರು   ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಫೈನಲ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಾನ್ಸನ್ ಕುಂದಾಪುರ ತಂಡವು ಪ್ರಕೃತಿ ನ್ಯಾಶ್ ತಂಡದ ಬೌಲರ್ ಗಳ ಎದುರು ರನ್ ಗಳಿಸಲು ಪರದಾಡಿ 8 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 29 ರನ್  ಗಳಿಸಲಷ್ಟೇ ಶಕ್ತವಾಯಿತು.

ಇದಕ್ಕುತ್ತರವಾಗಿ ಪ್ರಕೃತಿ ನ್ಯಾಶ್ ಕೇವಲ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿತು.

ಪ್ರಥಮ ಸ್ಥಾನಿ ಪ್ರಕೃತಿ ನ್ಯಾಶ್ 4 ಲಕ್ಷ ನಗದು ಸಹಿತ ಮಿರುಗುವ  ಟ್ರೋಫಿ ಮತ್ತು ದ್ವಿತೀಯ ಸ್ಥಾನಿ ಜಾನ್ಸನ್ ಕುಂದಾಪುರ 2 ಲಕ್ಷ ನಗದು ಸಹಿತ ಮಿರುಗುವ ಟ್ರೋಫಿ ತಮ್ಮದಾಗಿಸಿಕೊಂಡವು.

ಇದಕ್ಕೂ ಮುನ್ನ ಸೆಮಿಫೈನಲ್ ನಲ್ಲಿ ಪ್ರಕೃತಿ ನ್ಯಾಶ್-ರಾಮಾಂಜನೇಯ ಗುಡ್ಡೆಕೊಪ್ಲ ತಂಡವನ್ನು ಹಾಗೂ ಜಾನ್ಸನ್ ಕುಂದಾಪುರ-ಫ್ರೆಂಡ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ಫೈನಲ್ ನಲ್ಲಿ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ನ್ಯಾಶ್ ನ ಪ್ರವೀಣ್ ಗೌಡ ಪಂದ್ಯಶ್ರೇಷ್ಟ ಮತ್ತು ಟೂರ್ನಮೆಂಟ್ ನ ಬೆಸ್ಟ್ ಬೌಲರ್ ಆಗಿ ಪ್ರಕೃತಿ ನ್ಯಾಶ್‌ನ ಮಹೇಶ್ ಬೆಸ್ಟ್ ಬ್ಯಾಟರ್ ಮತ್ತು ಪಂದ್ಯಾಟದುದ್ದಕ್ಕೂ ಶ್ರೇಷ್ಠ ಆಲ್‌ರೌಂಡರ್  ಪ್ರದರ್ಶನ ನೀಡಿದ ರಾಜಾ ಸಾಲಿಗ್ರಾಮ ಸರಣಿ ಶ್ರೇಷ್ಠ ಪ್ರಶಸ್ತಿ ರೂಪದಲ್ಲಿ ದ್ವಿಚಕ್ರ ವಾಹನವನ್ನು ಬಹುಮಾನ ರೂಪದಲ್ಲಿ ಪಡೆದುಕೊಂಡರು.

ರಿಯಲ್ ಫೈಟರ್ಸ್ ತಂಡ ಮೊಗವೀರ ಪ್ರೀಮಿಯರ್ ಲೀಗ್ ಚಾಂಪಿಯನ್ಸ್

ಟೂರ್ನಮೆಂಟ್‌ನ ಮೊದಲೆರಡು ದಿನಗಳ ಕಾಲ ನಡೆದ,ಮೊಗವೀರ ಸಮುದಾಯದ 8 ಪ್ರತಿಷ್ಠಿತ ಫ್ರಾಂಚೈಸಿಗಳ ನಡುವೆ ನಡೆದ ಮೊಗವೀರ ಪ್ರೀಮಿಯರ್  ಕ್ರಿಕೆಟ್ ಪಂದ್ಯಾಟದಲ್ಲಿ ರಿಯಲ್ ಫೈಟರ್ಸ್ ಮಲ್ಪೆ-ಮೊಗವೀರ ಉಳ್ಳಾಲ ಇಲೆವೆನ್ ತಂಡವನ್ನು ಮಣಿಸಿ ಪ್ರಥಮ ಪ್ರಶಸ್ತಿ 2 ಲಕ್ಷ ನಗದು ಬಹುಮಾನ ಸಹಿತ ಆಕರ್ಷಕ ಟ್ರೋಫಿಯನ್ನು ಹಾಗೂ ದ್ವಿತೀಯ ಸ್ಥಾನ ಪಡೆದ  ಮೊಗವೀರ ಇಲೆವೆನ್ ಉಳ್ಳಾಲ 1 ಲಕ್ಷ ರೂ. ನಗದು ಬಹುಮಾನ ಸಹಿತ ಆಕರ್ಷಕ ಟ್ರೋಫಿಯನ್ನು ಬಾಚಿಕೊಂಡಿತು.

ಫೈನಲ್ ನ ಪಂದ್ಯಶ್ರೇಷ್ಟ ಕಿರಣ್ ಮಟ್ಟು, ಟೂರ್ನಮೆಂಟ್‌ನ ಬೆಸ್ಟ್ ಬೌಲರ್ ಚರಣ್ ರಾಜ್,ಬೆಸ್ಟ್ ಬ್ಯಾಟರ್ ಸುಮಿತ್ ಮತ್ತು ಪಂದ್ಯಾಟದುದ್ದಕ್ಕೂ ಶ್ರೇಷ್ಠ ಆಲ್‌ರೌಂಡರ್ ಪ್ರದರ್ಶನ ನೀಡಿದ ರಿಯಲ್ ಫೈಟರ್ಸ್ ಮಲ್ಪೆ ತಂಡದ ಪ್ರದೀಪ್ ಕಿದಿಯೂರು ಸರಣಿ ಶ್ರೇಷ್ಠ ಪ್ರಶಸ್ತಿ ರೂಪದಲ್ಲಿ ದ್ವಿಚಕ್ರ ವಾಹನವನ್ನು ಪಡೆದುಕೊಂಡರು.

ಕಿರ್ಮಾನಿ ಬಹುಮಾನ ವಿತರಣೆ: ವಿಜೇತ ತಂಡಗಳಿಗೆ  1983ರಲ್ಲಿ  ವಿಶ್ವಕಪ್ ವಿಜೇತ  ಭಾರತದ ತಂಡದ ವಿಕೆಟ್ ಕೀಪರ್ ಸೈಯದ್ ಕೀರ್ಮಾನಿ ಬಹುಮಾನ ವಿತರಿಸಿದರು.

ಸಮಾರೋಪ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಟಗಾರ 1983 ವಿಶ್ವಕಪ್ ವಿಜೇತ ತಂಡದ ಕೀಪರ್ ಮಾತನಾಡಿ ಅಂತರ್‌ರಾಷ್ಟ್ರೀಯ ಪಂದ್ಯಾಟದಲ್ಲೂ ನೋಡಿರದ ವೈಭವ,ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ನೋಡಿರದ ಕಿಕ್ಕಿರಿದ ಜನಸಂದಣಿಯನ್ನು ಮಂಗಳೂರಿನಲ್ಲಿ ನೋಡುವ ಭಾಗ್ಯ ನನ್ನದಾಯಿತು,ಮಾರುತಿ ಉಳ್ಳಾಲ ಸಂಸ್ಥೆಯ ಕ್ರೀಡೆಯ ಮೇಲಿನ ಪ್ರೀತಿ ಗೌರವ,ಸಾಮಾಜಿಕ ಕಾಳಜಿ ಅತ್ಯಂತ ಪ್ರಶಂಸನೀಯ ಹಾಗೂ ನೀವು ತೋರಿಸಿದ ಪ್ರೀತಿ ಆದರಕ್ಕೆ ಚಿರಋಣಿ ಎಂದರು.

*ಹಿರಿಯ ಕ್ರೀಡಾಪಟುಗಳು ಮತ್ತು ಸಾಧಕರಿಗೆ ಗೌರವ :ಹಲವಾರು ವರ್ಷಗಳಿಂದ ಅನೇಕ ಕ್ರೀಡಾಪಟುಗಳ ಭವಿಷ್ಯವನ್ನು ರೂಪಿಸಿದ ಕ್ರಿಕೆಟ್ ಆಟಗಾರರಾದ ದಿನೇಶ್ ಕರ್ಕೇರ,ಮಾರುತಿ ಸಂಸ್ಥೆಯ ಗೌರವಾಧ್ಯಕ್ಷರಾದ ಸುಧೀರ್ ವಿ. ಅಮೀನ್,ಈಜುಪಟು, ಮಹಮ್ಮದ್ ಬಾಸಿತ್ ,ನಾಟಕಕಾರ ದೇವದಾಸ್ ಕಾಪಿಕಾಡ್,80-90 ರ ದಶಕದ ಹಿರಿಯ ಆಟಗಾರರು,ಅಲ್ಲದೇ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 60 ಜನರನ್ನು ಸನ್ಮಾನಿಸಲಾಯಿತು.
*ಸಹಾಯ ಧನ ವಿತರಣೆ:
ದಿವಂಗತ  ನಝೀರ್ ಉಳ್ಳಾಲ್, ಅಶ್ವಥ್ ಪುತ್ರನ್, ವಿನೋದ್ ಪುತ್ರನ್, ಶರತ್ ತಿಂಗಳಾಯ, ಕುಟುಂಬದವರಿಗೆ ತಲಾ ಒಂದು ಲಕ್ಷ ರೂ. ಹಾಗೂ ವಿಕಲಾಂಗ ವಿದ್ಯಾರ್ಥಿನಿ ಕೊಣಾಜೆಯ ಫಾತಿಮಾ ನಿಶಾ ರವರ ವಿದ್ಯಾಭ್ಯಾಸಕ್ಕಾಗಿ 25,000 ರೂ. ಅಲ್ಲದೇ ಇತರರಿಗೆ ಸಹಾಯಧನ ನೀಡಲಾಯಿತು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆ ಪೊಲೀಸ್ ಆಯುಕ್ತ  ಎನ್.ಶಶಿಕುಮಾರ್, ಯಶ್ಪಾಲ್‌ ಸುವರ್ಣ, ಶಾಸಕ ವೇದವ್ಯಾಸ ಕಾಮತ್, ಆನಂದ ಲೋಬೊ, ಶರತ್ ಶೆಟ್ಟಿ,ಗೌತಮ್ ಶೆಟ್ಟಿ, ಕಾರ್ಫೋರೇಟರ್ ಅಬ್ದುಲ್ ಲತೀಫ್, ಡಾ. ಸುಮನ, ರಣಜಿ ಆಟಗಾರ ನಿಹಾಲ್ ಉಳ್ಳಾಲ್, ನಿವೃತ್ತ ಎಸ್ ಪಿ ಜಯಂತ್ ಶೆಟ್ಟಿ,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,ಪುಂಡಲೀಕ ಹೊಸಬೆಟ್ಟು, ಯತೀಶ್ ಬೈಕಂಪಾಡಿ, ಉದ್ಯಮಿಗಳಾದ ಮೋಹನ್ ಬೆಂಗ್ರೆ, ಸುಲೈಮಾನ್, ಚೇತನ್ ಬೆಂಗ್ರೆ, ದಯಾನಂದ ಪುತ್ರನ್, ದ.ಕ ಮೊಗವೀರ ಸಂಯುಕ್ತ ಸಭೆ ಹಾಗೂ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್,ಜನನಿ ಟೂರ್ಸ್ ರೆಸಾರ್ಟ್ ನ ಮಾಲೀಕ ಜಗದೀಶ್ ಕೋಟ್ಯಾನ್,ದ.ಕ ಮಹಾಜನ ಸಂಘದ ಕೋಶಾಧಿಕಾರಿ ಭರತ್ ಕುಮಾರ್ ಎರ್ಮಾಳ್, ಯುವಕ ಮಂಡಲದ ಅಧ್ಯಕ್ಷ ವರದರಾಜ್ ಬಂಗೇರ, ಸಂಚಾಲಕರಾದ ಸಂದೀಪ್ ಪುತ್ರನ್, ಅನಿಲ್ ಚರಣ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಾಂತ್ ಅಂಬಲಪಾಡಿ ಮತ್ತು ವಿನಯ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು

share
Next Story
X