ಸೆಲ್ಫಿಗಾಗಿ ಗಲಾಟೆ: ಸೋನು ನಿಗಮ್‌ರನ್ನು ಎಳೆದಾಡಿದ ಅಭಿಮಾನಿಗಳು; ವೇದಿಕೆಯಿಂದ ಕೆಳಕ್ಕೆ ಬಿದ್ದ ಅಂಗರಕ್ಷಕ
ಮುಂಬೈ: ಕಳೆದ ರಾತ್ರಿ ಮುಂಬೈನಲ್ಲಿ ನಡೆದ ಸಂಗೀತೋತ್ಸವದಲ್ಲಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಾಗ ಗಲಾಟೆ ನಡೆದಿದ್ದು, ಗಾಯಕ ಸೋನು ನಿಗಮ್ (Sonu Nigam) ರನ್ನು ಎಳೆದಾಡಿದ್ದಾರೆ. ಘಟನೆ ವೇಳೆ ನಿಗಮ್ ಅವರ ಸಹಾಯಕರೊಬ್ಬರು ವೇದಿಕೆಯಿಂದ ಕೆಳಗೆ ಬಿದ್ದಿದಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸೋನು ನಿಗಮ್ (Sonu Nigam) ತಂಡದವರೊಂದಿಗೆ ಸ್ಥಳೀಯ ಶಿವಸೇನೆ ಶಾಸಕರ ಪುತ್ರ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಚೆಂಬೂರಿನಲ್ಲಿ ರಾತ್ರಿ 11 ಗಂಟೆಗೆ ಸೋನು ನಿಗಮ್ (Sonu Nigam) ತಮ್ಮ ಪ್ರದರ್ಶನದ ನಂತರ ವೇದಿಕೆಯಿಂದ ಇಳಿಯುತ್ತಿದ್ದಾಗ ಈ ಘಟನೆ ನಡೆದಿದೆ.
ಸಣ್ಣಪುಟ್ಟ ಗಾಯಗಳಾಗಿರುವ ಅವರ ಸಹಾಯಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.
"ಚೆಂಬೂರ್ ಉತ್ಸವದಲ್ಲಿ ಸೋನು ನಿಗಮ್ (Sonu Nigam) ಅವರ ನೇರ ಪ್ರದರ್ಶನದ ನಂತರ ವೇದಿಕೆಯಿಂದ ನಿರ್ಗಮಿಸುವಾಗ ಈ ಘಟನೆ ಸಂಭವಿಸಿದೆ. ಅವರನ್ನು ಯಾರೋ ಹಿಂಬದಿಯಿಂದ ಸೆಲ್ಫಿಗಾಗಿ ತಡೆದಿದ್ದಾರೆ. ಗಾಯಕನ ಜೊತೆಗಿದ್ದ ಇಬ್ಬರು ಅವರನ್ನು ಪಕ್ಕಕ್ಕೆ ಸರಿಸಲು ಪ್ರಯತ್ನಿಸಿದಾಗ, ಆ ವ್ಯಕ್ತಿ ಅವರನ್ನು ಮೆಟ್ಟಿಲುಗಳಿಂದ ಕೆಳಗೆ ತಳ್ಳಿದ್ದಾರೆ. ಅವರಲ್ಲಿ ಒಬ್ಬರಿಗೆ ಗಾಯಗಳಾಗಿವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಮರಾಜ್ ಸಿಂಗ್ ರಜಪೂತ್ ಹೇಳಿದ್ದಾರೆ.
ಘಟನೆಯ ಆರೋಪಿ ಮಹಾರಾಷ್ಟ್ರ ಶಾಸಕನ ಪುತ್ರ ಸ್ವಪ್ನಿಲ್ ಫಾಟರ್‌ಪೇಕರ್ ಎಂದು ಅಧಿಕಾರಿ ತಿಳಿಸಿದ್ದಾರೆ. ಯುವಕನ ಬಗ್ಗೆ ವಿಚಾರಿಸಿದಾಗ ಆತ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಅವರ ಪುತ್ರ ಎಂಬುದು ಗೊತ್ತಾಯಿತು ಎಂದು ನಿಗಮ್ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ದೇಶದಲ್ಲಿ 1.2 ಲಕ್ಷ ಏಕ ಶಿಕ್ಷಕ ಶಾಲೆಗಳು!
#Breaking
— Sameet Thakkar (@thakkar_sameet) February 20, 2023
Singer Sonu Nigam who raised his voice about Azan Loudspeakers attacked by Janab Uddhav Thackeray MLA Prakash Phaterpekar and his goons in music event at Chembur. Sonu has been taken to the hospital nearby. pic.twitter.com/32eIPQtdyM