ಆರೆಸ್ಸೆಸ್ ಪಥ ಸಂಚಲನದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರಕಾರ

ಹೊಸದಿಲ್ಲಿ,ಫೆ.21: ಮರುನಿಗದಿತ ದಿನಾಂಕಗಳಂದು ತಮಿಳುನಾಡಿನಲ್ಲಿ ಪಥ ಸಂಚಲನ ನಡೆಸಲು ಆರೆಸ್ಸೆಸ್ (RSS)ಗೆ ಅನುಮತಿ ನೀಡಿರುವ ಮದ್ರಾಸ ಉಚ್ಚ ನ್ಯಾಯಾಲಯ(Madras High Court)ದ ಆದೇಶದ ವಿರುದ್ಧ ರಾಜ್ಯ ಸರಕಾರವು ಸರ್ವೋಚ್ಚ ನ್ಯಾಯಾಲಯ(Supreme Court)ದ ಮೆಟ್ಟಿಲೇರಿದೆ.
ಆರೆಸ್ಸೆಸ್ ನ ಪಥ ಸಂಚಲನವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದು ತನ್ನ ಅರ್ಜಿಯಲ್ಲಿ ತಿಳಿಸಿರುವ ತಮಿಳುನಾಡು ಸರಕಾರವು,ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆಯನ್ನು ಕೋರಿದೆ.
ತಮಿಳುನಾಡಿನಲ್ಲಿ ಮರುನಿಗದಿತ ದಿನಾಂಕಗಳಂದು ತನ್ನ ಪಥ ಸಂಚಲನ ನಡೆಸಲು ಫೆ.10ರಂದು ಆರೆಸ್ಸೆಸ್ಗೆ ಅನುಮತಿ ನೀಡಿದ್ದ ಮದ್ರಾಸ್ ಉಚ್ಚ ನ್ಯಾಯಾಲಯವು,ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಪ್ರತಿಭಟನೆಗಳು ಅಗತ್ಯವಾಗಿವೆ ಎಂದು ಅಭಿಪ್ರಾಯಿಸಿತ್ತು.
Next Story





