ಮಣಿಪಾಲ: ಫೆ.22ರಿಂದ ಅಂತರ್ ವಿವಿ ಮಹಿಳಾ ಚೆಸ್ ಟೂರ್ನಿ

ಉಡುಪಿ : ಮಣಿಪಾಲ ಆಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಹಾಗೂ ಭಾರತೀಯ ವಿವಿಗಳ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಅಖಿಲ ಭಾರತ ಅಂತರ ವಲಯ ಅಂತರ ವಿವಿ ಮಹಿಳಾ ಚೆಸ್ ಟೂರ್ನಿ ನಾಳೆಯಿಂದ ಫೆ.೨೫ರವರೆಗೆ ಕೆಎಂಸಿ ಮಣಿಪಾಲದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆಯಲಿದೆ.
ಟೂರ್ನಿಯ ಉದ್ಘಾಟನಾ ಸಮಾರಂಭ ಫೆ.೨೨ರ ಬುಧವಾರ ಬೆಳಗ್ಗೆ ೯:೦೦ ಗಂಟೆಗೆ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆಯಲಿದ್ದು, ಕರ್ನಾಟಕದ ಮೊದಲ ಮಹಿಳಾ ಚೆಸ್ ಅಂತಾರಾಷ್ಟ್ರೀಯ ಮಾಸ್ಟರ್ (ಐಎಂ) ಆಗಿರುವ ಇಶಾ ಶರ್ಮ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪಂದ್ಯಕ್ಕೆ ಚಾಲನೆ ನೀಡ ಲಿದ್ದಾರೆ.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆಯ ಸಮಾರಂಭದಲ್ಲಿ ಮಾಹೆ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಹಾಗೂ ಎಐಯುನ ಅನುರಾಗ್ ಸಿಂಗ್ ಅವರು ಅತಿಥಿಗಳಾಗಿರುವರು ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
Next Story





