ಇಂಡಿಗೋ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ

ಹೊಸದಿಲ್ಲಿ,ಫೆ.21: ಸೋಮವಾರ ದಿಲ್ಲಿಯಿಂದ ಒಡಿಶಾ(Odisha)ದ ದೇವಗಡಕ್ಕೆ ಪ್ರಯಾಣಿಸುತ್ತಿದ್ದ ಇಂಡಿಗೋ(IndiGo) ವಿಮಾನವನ್ನು ಬಾಂಬ್ ಬೆದರಿಕೆಯಿಂದಾಗಿ ಲಕ್ನೋಕ್ಕೆ ತಿರುಗಿಸಲಾಗಿತ್ತು. ಬಾಂಬ್ ಬೆದರಿಕೆ ಹುಸಿಯಾಗಿತ್ತು ಎನ್ನುವುದು ನಂತರ ದೃಢಪಟ್ಟಿತ್ತು ಎಂದು ಸಂಸ್ಥೆಯು ತಿಳಿಸಿದೆ.
ಲಕ್ನೋದ ಚೌಧರಿ ಚರಣಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪರಾಹ್ನ 12:20ಕ್ಕೆ ಇಳಿದ ವಿಮಾನವನ್ನು ಆಮೂಲಾಗ್ರ ತಪಾಸಣೆಗೆ ಒಳಪಡಿಸಲಾಗಿತ್ತು ಮತ್ತು ಬಾಂಬ್ಬೆದರಿಕೆ ಹುಸಿ ಎನ್ನುವುದು ದೃಢಪಟ್ಟ ಬಳಿಕ 2:55ಕ್ಕೆ ಪ್ರಯಾಣವನ್ನು ಮುಂದುವರಿಸಲು ಅನುಮತಿ ನೀಡಲಾಗಿತ್ತು ಎಂದು ಇಂಡಿಗೋ ಅಧಿಕಾರಿಯೋರ್ವರು ತಿಳಿಸಿದರು.
ತನಿಖೆಯಲ್ಲಿ ಭದ್ರತಾ ಏಜೆನ್ಸಿಗಳ ನಿಯಮಗಳನ್ನು ತಾನು ಅನುಸರಿಸಿದ್ದಾಗಿ ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.
Next Story







