ಉಡುಪಿ: 143 ಮೀನುಗಾರ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ

ಉಡುಪಿ, ಫೆ.21: ಮಲ್ಪೆಕೊಳ ಹಾಗೂ ಮಲ್ಪೆಪಡುಕೆರೆ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ವಾಸ್ತವ್ಯವಿರುವ 143 ಮೀನುಗಾರರ ಕುಟುಂಬಗಳಿಗೆ ಇಂದು ಖಾಯಂ ನಿವೇಶನ ಹಕ್ಕುಪತ್ರವನ್ನು ವಿತರಿಸಲಾಯಿತು.
ಸಿ.ಆರ್.ಝಡ್ ನಿಯಮಾವಳಿಯಲ್ಲಿನ ಸಮಸ್ಯೆಯಿಂದಾಗಿ 143 ಕುಟುಂಬ ಗಳಿಗೆ ಹಕ್ಕುಪತ್ರವನ್ನು ನೀಡುವಲ್ಲಿ ತೊಡಕುಂಟಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಿ ವಿಶೇಷ ಪ್ರಕರಣದಡಿಯಲ್ಲಿ ಖಾಯಂ ನಿವೇಶನ ಹಕ್ಕುಪತ್ರ ವನ್ನು 2ನೇ ಹಂತದಲ್ಲಿ 143 ಅರ್ಹ ಫಲಾನುಭವಿಗಳ ಕುಟುಂಬಗಳಿಗೆ ಶಾಸಕ ಕೆ. ರಘುಪತಿ ಭಟ್ ಮನೆ ಮನೆಗೆ ಭೇಟಿ ನೀಡಿ ವಿತರಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷ ಲಕ್ಷ್ಮೀ ಮಂಜುನಾಥ ಕೊಳ, ನಗರಸಭಾ ಸದಸ್ಯರಾದ ಎಡ್ಲಿನ್ ಕರ್ಕಡ, ನಗರಸಭೆಯ ನಾಮ ನಿರ್ದೇಶಿತ ಸದಸ್ಯ ವಿಜಯ್ ಕುಂದರ್, ಮಲ್ಪೆಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಹಾಗೂ ಮೀನುಗಾರ ಮುಖಂಡ ಸ್ಥಳೀಯ ಉಪಸ್ಥಿತರಿದ್ದರು.
Next Story