ಮಾದಕ ಪದಾರ್ಥದ ಕುರಿತ ವಿವಾದ: ಗೆಳತಿಗೆ ಬೆಂಕಿ ಹಚ್ಚಿ ಹತ್ಯೆ

ಹೊಸದಿಲ್ಲಿ, ಫೆ. 21: ಮಾದಕ ಪದಾರ್ಥದ ಕುರಿತ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ ಸಹ ಜೀವನ ಸಂಗಾತಿ 28 ವರ್ಷದ ಮಹಿಳೆಗೆ ಬೆಂಕಿ ಹಚ್ಚಿ ಹತ್ಯೆಗೈದ ಘಟನೆ ವಾಯುವ್ಯ ದಿಲ್ಲಿಯ ಅಮನ್ ವಿಹಾರ್ ನಲ್ಲಿ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮೋಹಿತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ಮಹಿಳೆಯನ್ನು ವಾಯುವ್ಯ ದಿಲ್ಲಿಯ ಬಲ್ಬೀರ್ ವಿಹಾರದ ನಿವಾಸಿ ಎಂದು ಗುರುತಿಸಲಾಗಿದೆ. ಈಕೆ ಪಾದರಕ್ಷೆ ತಯಾರಿಕೆ ಕಂಪೆನಿಯಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು. ಮಹಿಳೆ ಪತಿಯನ್ನು ತ್ಯಜಿಸಿದ್ದಳು ಹಾಗೂ ಕಳೆದ 6 ವರ್ಷಗಳಿಂದ ಮೋಹಿತ್ನೊಂದಿಗೆ ವಾಸಿಸುತ್ತಿದ್ದಳು ಎಂದು ಅವರು ತಿಳಿಸಿದ್ದಾರೆ. ಫೆಬ್ರವರಿ 10ರಂದು ರಾತ್ರಿ ಮೋಹಿತ್ ತನ್ನ ಸ್ನೇಹಿತನ ಮನೆಯಲ್ಲಿ ಮಾದಕ ದ್ರವ್ಯ ಸೇವಿಸುತ್ತಿರುವುದನ್ನು ಕಂಡು ಮಹಿಳೆ ಆತನೊಂದಿಗೆ ಜಗಳವಾಡಿದ್ದಳು.
ಇದರಿಂದ ಕುಪಿತಗೊಂಡ ಮೋಹಿತ್ ಆಕೆಯ ಮಾಲೆ ಟಾರ್ಪಿನ್ ಆಯಿಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Next Story





