ಹೈದರಾಬಾದ್: ಬೀದಿ ನಾಯಿಗಳ ದಾಳಿಗೆ ನಾಲ್ಕರ ಬಾಲಕ ಬಲಿ

ಹೈದರಾಬಾದ್,ಫೆ.21: ಹೈದರಾಬಾದ್ ನ ಹೌಸಿಂಗ್ ಸೊಸೈಟಿಯೊಂದರಲ್ಲಿ ರವಿವಾರ ಬೀದಿನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ನಾಲ್ಕರ ಹರೆಯದ ಬಾಲಕನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಹೃದಯ ಕಲಕುವ ಘಟನೆ ಬೆಳಕಿಗೆ ಬಂದಿದೆ.
ಈ ಭೀಕರ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,ಬಾಲಕ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದಾಗ ಬೀದಿ ನಾಯಿಗಳು ದಾಳಿ ನಡೆಸಿದ್ದು ಮತ್ತು ಬಾಲಕ ಪಾರಾಗಲು ವಿಫಲ ಪ್ರಯತ್ನ ನಡೆಸಿರುವ ದೃಶ್ಯಗಳನ್ನು ಅದು ತೋರಿಸಿದೆ.
ಬಾಲಕನ ತಂದೆ ಗಂಗಾಧರ ಅದೇ ಹೌಸಿಂಗ್ ಸೊಸೈಟಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದಾರೆ.
ಮಗನ ಆಕ್ರಂದನವನ್ನು ಕೇಳಿದ ಗಂಗಾಧರ ಸ್ಥಳಕ್ಕೆ ಧಾವಿಸಿ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದರು. ಗಂಗಾಧರ ನಿಝಾಮಾಬಾದ್ನಿಂದ ಕೆಲಸ ಹುಡುಕಿಕೊಂಡು ಕುಟುಂಬಸಮೇತ ಹೈದರಾಬಾದಿಗೆ ಬಂದಿದ್ದರು ಎಂದು ವರದಿಗಳು ತಿಳಿಸಿವೆ.
Next Story





