ಮಣಿಪಾಲ: ಉತ್ತರ ಪ್ರದೇಶ ಮೂಲದ ಪ್ರೊಫೆಸರ್ ಆತ್ಮಹತ್ಯೆ

ಮಣಿಪಾಲ: ಮಣಿಪಾಲ ಕಾಲೇಜಿನ ಪ್ರೊಫೆಸರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ದಶರಥ ನಗರ ಎಂಬಲ್ಲಿ ನಡೆದಿದೆ.
ಮೃತರನ್ನು ಮಣಿಪಾಲದ ಆರ್ಕಿಟೆಕ್ ಕಾಲೇಜಿನ ಪ್ರಾಧ್ಯಾಪಕ, ಉತ್ತರ ಪ್ರದೇಶದ ಮೂಲದ ಅಹಮದ್ ಮಿರ್ಜಾ(38) ಎಂದು ಗುರುತಿಸಲಾಗಿದೆ. ಇವರು ದಶರಥ ನಗರದಲ್ಲಿರುವ ಖಾಸಗಿ ವಸತಿಗೃಹದ ನಾಲ್ಕನೇ ಮಹಡಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಮೃತದೇಹವು ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇವರು ಮೃತಪಟ್ಟು ನಾಲ್ಕು ದಿನ ಕಳೆದಿರಬಹುದೆಂದು ಶಂಕಿಸಲಾಗಿದೆ. ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದ್ದು, ನಿಖರವಾದ ಕಾರಣ ತಿಳಿದುಬಂದಿಲ್ಲ. ಮಣಿಪಾಲ ಎಸ್ಸೈ ನವೀನ್ ನಾಯ್ಕ್, ಸಿಬ್ಬಂದಿ ಸುಕುಮಾರ್, ಉಮೇಶ್ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರೀಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಮೃತದೇಹವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.
Next Story