ನಟಿ ಸ್ವರಾ ಭಾಸ್ಕರ್‌ಗೂ ಶ್ರದ್ಧಾಳದ್ದೇ ಪರಿಸ್ಥಿತಿ ಬರಬಹುದು: ಸಾಧ್ವಿ ಪ್ರಾಚಿ

ಹೊಸದಿಲ್ಲಿ: ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ರೊಂದಿಗೆ ಸ್ವರಾ ಭಾಸ್ಕರ್ ಅವರ ವಿವಾಹ ವಿರುದ್ಧ ಬಲಪಂಥೀಯರು ಟೀಕಿಸುತ್ತಿರುವ ನಡುವೆ, ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ, ಸ್ವರಾ ಅವರು ಶ್ರದ್ಧಾ ವಾಕರ್ ರ ಪರಿಸ್ಥಿತಿಯನ್ನೇ ಎದುರಿಸಬೇಕಾಬಹುದು ಎಂದು ಹೇಳಿದ್ದಾರೆ.
“ಬಹುಶಃ ಶ್ರದ್ಧಾ ಅವರ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ ಸುದ್ದಿಗೆ ಸ್ವರಾ ಭಾಸ್ಕರ್ ಗಮನ ಕೊಡಲಿಲ್ಲ, ಇಷ್ಟು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸ್ವರಾ ಒಮ್ಮೆ ಫ್ರಿಡ್ಜ್ ಅನ್ನು ನೋಡಬೇಕಾಗಿತ್ತು. ಅದು ಅವರ ವೈಯಕ್ತಿಕ ಆಯ್ಕೆಯಾಗಿದೆ. ನಾನು ಹೆಚ್ಚು ಹೇಳಲು ಏನೂ ಇಲ್ಲ. ಆದರೆ ಶ್ರದ್ಧಾಗೆ ಏನಾಯಿತೋ ಅದು ಸ್ವರಾ ಅವರಿಗೂ ಆಗಬಹುದು" ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆ.
“ಸ್ವರಾ ಭಾಸ್ಕರ್ ಯಾವಾಗಲೂ ಹಿಂದೂ ಧರ್ಮದ ವಿರುದ್ಧ ಇದ್ದರು. ಆಕೆ ಧರ್ಮದ ಹೊರಗಿನವರನ್ನು ಮದುವೆಯಾಗುತ್ತಾಳೆ ಎಂದು ನನಗೆ ಖಚಿತವಾಗಿತ್ತು. ಇದು ಈಗ ನಡೆದಿದೆ. ಆಕೆ ಮುಸಲ್ಮಾನನನ್ನು ಮದುವೆಯಾಗಿದ್ದಾಳೆ" ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆ.
''श्रद्धा के 35 टुकड़े हुए...स्वरा भास्कर की भी यह स्थिति बन सकती है''
— News24 (@news24tvchannel) February 21, 2023
स्वरा भास्कर की शादी पर बोलीं BJP नेता साध्वी प्राची#SwaraBhaskar #SadhviPrachi | Sadhvi Prachi pic.twitter.com/Ogu6Ma1Hxe







