ಮಾ.12ಕ್ಕೆ ಉಡುಪಿ ಜಿಲ್ಲೆಗೆ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ

ಉಡುಪಿ, ಫೆ. 22: ಕರ್ನಾಟಕ ರಾಜ್ಯ ಭಾರತೀಯ ಜನತಾ ಪಾರ್ಟಿ ವತಿಯಿಂದ 4 ರಥಯಾತ್ರೆಗಳು ಹೊರಡಲಿದ್ದು, ಮೈಸೂರಿನಿಂದ ಹೊರಡುವ ಒಂದನೇ ರಥಯಾತ್ರೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರಿಂದ ಉದ್ಘಾಟನೆಗೊಂಡು ಮಾರ್ಚ್ 12ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದೆ.
ಮಾರ್ಚ್ 12ರಂದು ವಿಜಯ ಸಂಕಲ್ಪ ರಥಯಾತ್ರೆಯು ಕಾರ್ಕಳದಿಂದ ಹೊರಟು 13ರಂದು ಕಾಪು ಮತ್ತು ಉಡುಪಿ, 14ರಂದು ಕುಂದಾಪುರ ಮತ್ತು ಬೈಂದೂರು ಮೂಲಕ ಶೃಂಗೇರಿಗೆ ತಲುಪಲಿದೆ ಎಂದು ವಿಜಯ ಸಂಕಲ್ಪ ರಥಯಾತ್ರೆಯ ರಾಜ್ಯ ಸಹ ಸಂಚಾಲಕ ಕಿಶೋರ್‌ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ಈ ರಥಯಾತ್ರೆಯಲ್ಲಿ ರೋಡ್ ಶೋ ಮತ್ತು ಪ್ರಮುಖರೊಂದಿಗೆ ಸಂವಾದ ನಡೆಯಲಿದೆ ಎಂದವರು ತಿಳಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವಿಜಯ ಸಂಕಲ್ಪ ರಥಯಾತ್ರೆಯ ಸಂಚಾಲಕ ಪ್ರಕಾಶ್ ಶೆಟ್ಟಿ ಪಾದಬೆಟ್ಟು, ಸಹ ಸಂಚಾಲಕ ಅನಿತಾ ಶ್ರೀಧರ್ ಮುಂತಾದವರು ಉಪಸ್ಥಿತರಿದ್ದರು.
ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಶ ನಾಯಕ್, ಸುಪ್ರಸಾದ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ. ರಾಘವೇಂದ್ರ ಕಿಣಿ, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಮಹಾವೀರ್, ಸಚಿನ್ ಪೂಜಾರಿ, ಸತ್ಯಾನಂದ ನಾಯಕ್ ಹಾಗೂ ಮಂಡಲಗಳ ವಿಜಯ ಸಂಕಲ್ಪ ರಥಯಾತ್ರೆ ಉಸ್ತುವಾರಿಗಳು ಉಪಸ್ಥಿತರಿದ್ದರು.