ಉಡುಪಿ ಜಿಲ್ಲೆಗೆ ಅಸ್ಸಾಂ ಶೈಕ್ಷಣಿಕ ಅಧ್ಯಯನ ತಂಡ ಭೇಟಿ
ಕುಂದಾಪುರ : ಅಸ್ಸಾಂ ರಾಜ್ಯದ ಎ.ಎನ್.ಟಿ ಸಂಸ್ಥೆಯು ಶೈಕ್ಷಣಿಕ ಅಧ್ಯಯನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿದ ಜಾಫೇಟ್ ನಾರ್ಜರಿ, ಬಿಕ್ರಂಜಿತ್ ಅವರ ತಂಡ ಉಡುಪಿ ಜಿಲ್ಲೆಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಕಚೇರಿಗೆ ಭೇಟಿ ನೀಡಿ ಸರಕಾರಿ ಶಾಲೆಗಳಲ್ಲಿನ ಎಸ್.ಡಿ.ಎಂ.ಸಿ ಕಾರ್ಯ ಚಟುವಟಿಕೆ ಕುರಿತು ಚರ್ಚೆ ನಡೆಸಿತು.
ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಮುದಾಯದ ಸಹಭಾಗಿತ್ವ, ಗುಣ ಮಟ್ಟದ ಶಿಕ್ಷಣಕ್ಕಾಗಿ ಮಗುವಿನ ಪೋಷಕರಿಂದ ಸ್ವ ಮೌಲ್ಯಮಾಪನ, ಮೂಲ ಭೂತ ಸೌಕರ್ಯ ಅಭಿವೃದ್ಧಿಗಾಗಿ ಎಸ್.ಡಿ.ಎಂ.ಸಿ ಸಮುದಾಯ ಮತ್ತು ಸ್ಥಳೀಯ ಸರಕಾರದ ಸಹಕಾರ ಹಾಗೂ ಸಹಭಾಗಿತ್ವ ವಿಚಾರವಾಗಿ ಸಮಗ್ರವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಸಂಪನ್ಮೂಲ ವ್ಯಕ್ತಿಗಳು ತಮ್ಮ ಸರಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಯ ಅನುಭವವನ್ನು ಹಂಚಿಕೊಂಡರು. ಪಡಿ ಸಂಸ್ಥೆ ನಿರ್ದೇಶಕ ರೆನ್ನೀ ಡಿಸೋಜ, ಶಿಕ್ಷಣ ಸಂಪನ್ಮೂಲ ಕೇಂದ್ರದ ತರಬೇತಿ ಸಂಯೋಜಕ ವಿವೇಕ್, ಜಿಲ್ಲಾ ಸಂಯೋಜಕಿ ಸುನಿತಾ, ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕುಂದಾಪುರ ಪುರಸಭಾ ಘಟಕದ ಅಧ್ಯಕ್ಷ ಅಶ್ವತ್ ಕುಮಾರ್, ಬೈಂದೂರು ತಾಲೂಕು ಘಟಕದ ಉಪಾಧ್ಯಕ್ಷ ರವಿ ಮರವಂತೆ, ಕಾರ್ಯದರ್ಶಿ ಜ್ಯೋತಿ ಶೆಟ್ಟಿ, ಕೋಶಾಧಿಕಾರಿ ಸಾಧಿಕ್ ಮಾವಿನಕಟ್ಟೆ, ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ.ನಾಗರಾಜ್, ಕಾರ್ಯದರ್ಶಿ ಪ್ರಮೋದ ಕೆ.ಶೆಟ್ಟಿ, ಪತ್ರಿಕಾ ಕಾರ್ಯದರ್ಶಿ ಶಶಿ ಬಳ್ಕೂರು, ಸಂಘಟನಾ ಕಾರ್ಯದರ್ಶಿಗಳಾದ ವರದ ಆಚಾರ್ಯ, ಸುಮಾ ಆಚಾರ್ಯ, ಆಯೇಷಾ ತನ್ವೀರ್, ಶೋಭಾ ಶಾಂತರಾಜ್ ಉಪಸ್ಥಿತರಿದ್ದರು.
ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಸ್ವಾಗತಿಸಿದರು. ರವಿ ಮರವಂತೆ ವಂದಿಸಿದರು.