ಶ್ಲೋಕ ಹೇಳುವ ಬಾಲ ಪ್ರತಿಭೆ ವೈನವಿ ಬಿ.ಸಿ.

ಬೆಂಗಳೂರು, ಫೆ.22: ಐದು ನಿಮಿಷಗಳಲ್ಲಿ ಭಗವದ್ಗೀತೆಯ ಮೂರು ಅಧ್ಯಾಯಗಳ ಅರವತ್ತು ಶ್ಲೋಕಗಳನ್ನು ಸ್ಪುಟವಾಗಿ ಶರವೇಗದಲ್ಲಿ ಪಠಸಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಗೌರವವನ್ನು ಕುಮಾರಿ ವೈನವಿ ಬಿ.ಸಿ. ಪಡೆದುಕೊಂಡಿದ್ದಾರೆ.
ಇವರು ನೆಲಮಂಗಲ ತಾಲೂಕಿನ ತಡಸೀಘಟ್ಟ ಗ್ರಾಮದ ಮೇಘನಾ ಚನ್ನಮೂರ್ತಿ ದಂಪತಿಗಳ ಮಗಳಾಗಿದ್ದು, ಐದನೇ ವಯಸ್ಸಿಗೆ ಭಗವದ್ಗೀತೆಯ ಎಲ್ಲ ಹದಿನೆಂಟು ಅಧ್ಯಾಯಗಳ ಏಳು ನೂರು ಶ್ಲೋಕಗಳನ್ನು ಸಂಪೂರ್ಣವಾಗಿ ಹೇಳುವ ಮೂಲಕ ಕಿರಿಯ ವಯಸ್ಸಿನಲ್ಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವೈನವಿ ಬಿ.ಸಿ. ಅವರು ಹಲವು ರೀತಿಯ ವಿಶಿಷ್ಟ ಕಲಿಕಾ ಸಾಮರ್ಥ್ಯಕ್ಕೆ ‘ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾಡ್ರ್ಸ್’ ಸಾಧನೆ ಮಾಡಿದ್ದಾರೆ. 2022ರ ಅಕ್ಟೋಬರ್‍ನಲ್ಲಿ ವಲ್ರ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್, 2023ರ ಜನವರಿಯಲ್ಲಿ ಏಷ್ಯಾ ಬುಕ್ ಆಫ್ ರೆಕಾಡ್ರ್ಸ್ - ಗ್ರ್ಯಾಂಡ್ ಮಾಸ್ಟರ್ ಗೌರವಕ್ಕೂ ಪಾತ್ರರಾಗಿದ್ದಾರೆ. ಇವರ ಪ್ರತಿಭೆ ಮೆಚ್ಚಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಾಲ ಪುರಸ್ಕಾರ ನೀಡಿ ಗೌರವಿಸಿದೆ.
Next Story





