ರಕ್ತದಾನ ಮಾಸಾಚರಣೆಯ ಪೋಸ್ಟರ್ ಬಿಡುಗಡೆ

ಮಂಗಳೂರು, ಫೆ.22: ‘ರಕ್ತ ಕೊಟ್ಟು ಬಾಂಧವ್ಯ ಕಟ್ಟು’ ಎಂಬ ಘೋಷಣೆಯೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ದ.ಕ. ಜಿಲ್ಲಾದ್ಯಂತ ಫೆ.22ರಿಂದ ಮಾ.20ರವರೆಗೆ ನಡೆಯಲಿರುವ ರಕ್ತ ದಾನ ಮಾಸಾಚರಣೆಯ ಪೋಸ್ಟರ್‌ನ್ನು ಬಂಟ್ವಾಳದ ಕಚೇರಿಯಲ್ಲಿ ಬುಧವಾರ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮಜೀದ್ ತುಂಬೆ, ರಾಜ್ಯ ಸಮಿತಿ ಸದಸ್ಯ ಅಕ್ಬರ್ ಅಲಿ ಪೊನ್ನೋಡಿ, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮದ್ದ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ನವಾಝ್ ಕಟ್ಟೆ ಉಪಸ್ಥಿತರಿದ್ದರು.
Next Story