ಚೆಸ್ ಪ್ರೋ ಲೀಗ್: ಮ್ಯಾಗ್ನಸ್ ಕಾರ್ಲ್‌ಸನ್ ಸೋಲುಣಿಸಿದ ವಿದಿತ್ ಗುಜರಾತಿ

ಮಂಗಳೂರು, ಫೆ. 22: ಆನ್‌ಲೈನ್ ಮೂಲಕ ನಡೆಯುತ್ತಿರುವ ಪ್ರೋ ಚೆಸ್ ಲೀಗ್ ಪಂದ್ಯಾವಳಿಯ ಮಂಗಳವಾರದ ಪಂದ್ಯವೊಂದರಲ್ಲಿ ಭಾರತದ ಚೆಸ್ ಗ್ರಾಂಡ್‌ಮಾಸ್ಟರ್ ವಿದಿತ್ ಗುಜರಾತಿ ಐದು ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ದೊಡ್ಡ ಗೆಲುವೊಂದನ್ನು ದಾಖಲಿಸಿದ್ದಾರೆ.
ಅದರಲ್ಲೂ ಕುತೂಹಲದ ಅಂಶವೆಂದರೆ, 28 ವರ್ಷದ ಭಾರತೀಯ ಕಪ್ಪು ಕಾಯಿಗಳಲ್ಲಿ ಆಡುವ ಮೂಲಕ ಈ ಗೆಲುವನ್ನು ಸಂಪಾದಿಸಿದ್ದು. ಈ ಸೋಲಿನಿಂದ ತೀವ್ರ ಹತಾಶೆಗೊಂಡ ಕಾರ್ಲ್‌ಸನ್ ತನ್ನ ಡೆಸ್ಕ್‌ಗೆ ಬಡಿಯುವ ಮೂಲಕ ಅದನ್ನು ಹೊರಗೆಡವಿದರು. ವಿದಿತ್ ಇಂಡಿಯನ್ ಯೋಗೀಸ್ ತಂಡದ ಪರವಾಗಿ ಆಡಿದರೆ, ಕಾರ್ಲ್ ಸನ್ ಕೆನಡ ಚೆಸ್ ಬ್ರಾಸ್ ಪರವಾಗಿ ಆಡಿದರು.
‘‘ನಾವು ಕಠಿಣ ಹೋರಾಟ ನೀಡಿದೆವು. ಮ್ಯಾಗ್ನಸ್‌ರನ್ನು ಸೋಲಿಸಲು ನನಗೆ ಸಾಧ್ಯವಾಗಿರುವುದು ಅತ್ಯಂತ ಮಹತ್ವದ ಕ್ಷಣವಾಗಿದೆ’’ ಎಂದು ಪಂದ್ಯದ ಬಳಿಕ ವಿದಿತ್ ಹೇಳಿದರು.
Next Story





