Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅದಾನಿ ಗ್ರೂಪ್‌ನ ಅವಾಂತರಗಳ ಮಾಸ್ಟರ್...

ಅದಾನಿ ಗ್ರೂಪ್‌ನ ಅವಾಂತರಗಳ ಮಾಸ್ಟರ್ ಮೈಂಡ್ ವಿನೋದ್ ಅದಾನಿ

ಆರ್.ಕೆ.ಆರ್.ಕೆ.23 Feb 2023 12:00 AM IST
share
ಅದಾನಿ ಗ್ರೂಪ್‌ನ ಅವಾಂತರಗಳ ಮಾಸ್ಟರ್ ಮೈಂಡ್ ವಿನೋದ್ ಅದಾನಿ

ಅದಾನಿ ಸಮೂಹದ ಅವಾಂತರಗಳ ಬಗ್ಗೆ ಜಗಜ್ಜಾಹೀರಾಗಿ, ಅವರಿಗೆ ಅತ್ಯಾಪ್ತ ಭಾರತ ಸರಕಾರ ಹಾಗೂ ಗೋದಿ ಮೀಡಿಯಾಗಳು ಅವರನ್ನು ಸಮರ್ಥಿಸಿಕೊಳ್ಳಲು ಹೆಣಗಾಡುತ್ತಿರುವುದನ್ನು ನೋಡುತ್ತಲೇ ಇದ್ದೇವೆ.

ಇದರ ನಡುವೆಯೇ ಜಾಗತಿಕ ಮಾಧ್ಯಮಗಳ ತನಿಖಾ ವರದಿಗಳು ಮಾತ್ರ ಇನ್ನೂ ಅದಾನಿ ಬೆನ್ನು ಬಿಟ್ಟ ಹಾಗಿಲ್ಲ. ಇಲ್ಲಿನ ಸುದ್ದಿವಾಹಿನಿಗಳು ಅದೆಷ್ಟು ಅದಾನಿಗೆ ಕೊಡೆ ಹಿಡಿಯುತ್ತವೋ ಅಷ್ಟೇ ಅಂತರ್‌ರಾಷ್ಟ್ರೀಯ ಮಾಧ್ಯಮಗಳು ಅದಾನಿ ಸಾಮ್ರಾಜ್ಯವನ್ನು ಬಯಲು ಮಾಡುತ್ತಲೇ ಇವೆ.
ಹಿಂಡನ್‌ಬರ್ಗ್ ವರದಿ ಬಳಿಕ ಅದಾನಿ ಗ್ರೂಪ್ ತೀರಾ ಕುಸಿದುಹೋಗಿರುವ ಬೆನ್ನಲ್ಲೇ ಫೋರ್ಬ್ಸ್ ವರದಿ ಹೊರಬಿದ್ದಿದೆ. ಅದರ ಪ್ರಕಾರ, ಅದಾನಿ ಅವಾಂತರ ಗಳ ಮಾಸ್ಟರ್ ಮೈಂಡ್ ಗೌತಮ್ ಅದಾನಿ ಅಲ್ಲ, ಅವರ ಹಿರಿಯಣ್ಣ ಅನಿವಾಸಿ ಭಾರತೀಯ ವಿನೋದ್ ಅದಾನಿ. ಅದಾನಿ ಗ್ರೂಪ್‌ನ ಅಕ್ರಮಗಳ ಹಿಂದಿನ ನಿಜವಾದ ಸೂತ್ರಧಾರಿ ವಿನೋದ್ ಅದಾನಿ ಎಂದು ಫೋರ್ಬ್ಸ್ ವಿಶೇಷ ವರದಿ ಬಹಿರಂಗಪಡಿಸಿದೆ.
ಹಿಂಡನ್‌ಬರ್ಗ್ ತನ್ನ ವರದಿಯಲ್ಲಿ ಗೌತಮ್ ಅದಾನಿ ಹೆಸರನ್ನು 54 ಬಾರಿ ಬಳಸಿದ್ದರೆ, ಯಾರಿಗೂ ಅಷ್ಟಾಗಿ ಗೊತ್ತಿರದ ವಿನೋದ್ ಅದಾನಿ ಹೆಸರು 151 ಬಾರಿ ಉಲ್ಲೇಖವಾಗಿದೆ. ಅದಕ್ಕಿಂತ ಹೆಚ್ಚು ಬಾರಿ ಬೇರೆ ಯಾರದ್ದೇ ಹೆಸರು ಆ ವರದಿಯಲ್ಲಿಲ್ಲ. ಯಾಕೆಂದರೆ ಅದಾನಿ ಸಮೂಹದ ಇಷ್ಟೆಲ್ಲಾ ಹಗರಣಗಳ ಕೇಂದ್ರದಲ್ಲಿರುವುದು ಇದೇ ಹಿರಿಯಣ್ಣ ವಿನೋದ್ ಅದಾನಿ ಎನ್ನುತ್ತದೆ ಫೋರ್ಬ್ಸ್ ವರದಿ.

ಆಸ್ಟ್ರೇಲಿಯದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಹೊರಟಿದ್ದ ಅದಾನಿ ಗ್ರೂಪ್ ಬಗ್ಗೆ ಅಧ್ಯಯನ ಮಾಡಿದ ಅಲ್ಲಿನ ವಿಶ್ಲೇಷಣಾ ಸಂಸ್ಥೆ ಕ್ಲೈಮೇಟ್ ಎನರ್ಜಿ ಫೈನಾನ್ಸ್‌ನ ನಿರ್ದೇಶಕ ಟಿಮ್ ಬಕ್ಲಿ ಫೋರ್ಬ್ಸ್‌ಗೆ ಹೇಳಿರುವ ಪ್ರಕಾರ ಗೌತಮ್ ಅದಾನಿ ಆ ಸಮೂಹದ ಚಿರಪರಿಚಿತ, ಆಪ್ತ, ನಯವಾದ ಮುಖ. ಆದರೆ ಖಾಸಗಿ ತೆರಿಗೆ ಸ್ವರ್ಗಗಳಲ್ಲಿ ಅದರ ಮಾಸ್ಟರ್ ಮೈಂಡ್ ಹಾಗೂ ಇಡೀ ಆಟದ ನಿಜವಾದ ಸೂತ್ರಧಾರ ವಿನೋದ್ ಅದಾನಿ. ಆದರೆ, ಅದಾನಿ ಸಮೂಹ ಮಾತ್ರ ತಮ್ಮ ಯಾವುದೇ ಲಿಸ್ಟೆಡ್ ಕಂಪೆನಿಯಲ್ಲಿ ವಿನೋದ್ ಅದಾನಿ ಪಾಲುದಾರರಲ್ಲ ಎಂದು ಹೇಳುತ್ತ, ಅಂತರ ಕಾಯ್ದುಕೊಳ್ಳುತ್ತಿರಲು ಪ್ರಯತ್ನಿಸುತ್ತಿರುವುದು ತಮಾಷೆಯಾಗಿದೆ.
ಫೋರ್ಬ್ಸ್ ತೆರೆದಿಟ್ಟಿರುವ ವಿನೋದ್ ಅದಾನಿಯ ಸಾಗರೋತ್ತರ ಗುಪ್ತ ಸಾಮ್ರಾಜ್ಯದ ವಿವರಗಳನ್ನು ನೋಡುತ್ತ ಹೋಗುವುದಾದರೆ,
ವಿನೋದ್ ಅದಾನಿಯ ವೆನ್ನಲಾದ ಹಲವಾರು ಸಾಗರೋತ್ತರ ಶೆಲ್ ಕಂಪೆನಿ ಗಳ ಮೂಲಕ ಶತಕೋಟಿ ಡಾಲರ್‌ಗಟ್ಟಲೆ ಹಣ ಭಾರತದೊಳಗಿನ ಅದಾನಿ ಸಮೂಹದ ಕಂಪೆನಿಗಳಿಗೆ ಹರಿದುಬರುತ್ತಿದೆ ಮತ್ತು ಇದೆಲ್ಲವೂ ತೆರಿಗೆಯಿಂದ ತಪ್ಪಿಸಿಕೊಳ್ಳುವ ಆಟವಾಗಿದೆ.
ಅಂತರ್‌ರಾಷ್ಟ್ರೀಯ ನಿರ್ಬಂಧಕ್ಕೊಳಗಾಗಿರುವ ರಶ್ಯದ ವಿಟಿಬಿ ಬ್ಯಾಂಕ್‌ನಿಂದ 263 ಮಿಲಿಯನ್ ಡಾಲರ್ ಸಾಲಕ್ಕಾಗಿ ಅದಾನಿ ಸಮೂಹದ ಪ್ರವರ್ತಕರ ಷೇರುಗಳನ್ನು ಅಡವಿರಿಸಲಾಗಿದೆ. ಹೀಗೆ ಷೇರುಗಳನ್ನು ಅಡವಿಟ್ಟು ಸಾಲ ಪಡೆದಿರುವುದು ಸಿಂಗಾಪುರದಿಂದ ಕಾರ್ಯನಿರ್ವಹಿಸುವ ವಿನೋದ್ ಅದಾನಿಯ ಪಿನಾಕಲ್ ಟ್ರೇಡ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ಕಂಪೆನಿ. ಅಲ್ಲದೆ ಹಾಗೆ ಸಾಲ ಪಡೆದಿರುವ ಹಣದಲ್ಲಿ 258 ಮಿಲಿಯನ್ ಡಾಲರ್ ಹಣವನ್ನು ಅದಾನಿ ಸಮೂಹದೊಂದಿಗೆ ಸಂಬಂಧ ಹೊಂದಿರುವ ಯಾವುದೋ ಹೆಸರಿಸದ ಕಂಪೆನಿಯೊಂದಕ್ಕೆ ಸಾಲ ಕೊಡಲಾಗಿದೆ.
     ಮತ್ತು ಸಾಲ ಪಡೆಯಲು ಗ್ಯಾರಂಟಿಯೆಂದು ಅಡವಿರಿಸಲಾದ ಎರಡು ಹೂಡಿಕೆ ನಿಧಿಗಳು ಆಫ್ರೋ ಏಶ್ಯ ಟ್ರೇಡ್ ಆ್ಯಂಡ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್ ಮತ್ತು ವರ್ಲ್ಡ್ ವೈಡ್ ಎಮರ್ಜಿಂಗ್ ಮಾರ್ಕೆಟ್ ಹೋಲ್ಡಿಂಗ್ಸ್ ಲಿಮಿಟೆಡ್ ಎಂದು ಗುರುತಿಸಲ್ಪಟ್ಟಿವೆ. ವರ್ಲ್ಡ್ ವೈಡ್ ಎಮರ್ಜಿಂಗ್ ಮಾರ್ಕೆಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಪೂರ್ಣ ಒಡೆತನವುಳ್ಳ ಮಾರಿಷಸ್ ಮೂಲದ ಅಕ್ರೊಪೊಲೀಸ್ ಟ್ರೇಡ್ ಆ್ಯಂಡ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್ ಮಾಲಕ ವಿನೋದ್ ಅದಾನಿ ಇದರ ಅಂತಿಮ ಫಲಾನುಭವಿ ಎಂಬುದನ್ನು ಫೋರ್ಬ್ಸ್ ಉಲ್ಲೇಖಿಸಿದೆ.
 ಆಫ್ರೋ ಏಶ್ಯ ಟ್ರೇಡ್ ಆ್ಯಂಡ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್ ಮತ್ತು ವರ್ಲ್ಡ್ ವೈಡ್ ಎಮರ್ಜಿಂಗ್ ಮಾರ್ಕೆಟ್ ಹೋಲ್ಡಿಂಗ್ಸ್ ಲಿಮಿಟೆಡ್ ಬಹುದೊಡ್ಡ ಪಾಲನ್ನು ಅಂದರೆ 4 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಅದಾನಿ ಸಮೂಹದ ಕಂಪೆನಿಗಳಾದ ಅದಾನಿ ಎಂಟರ್‌ಪ್ರೈಸಸ್, ಅದಾನಿ ಟ್ರಾನ್ಸ್‌ಮಿ ಷನ್, ಅದಾನಿ ಪೋರ್ಟ್ಸ್ ಮತ್ತು ಅದಾನಿ ಪವರ್ ಇವುಗಳಲ್ಲಿ ಹೊಂದಿವೆ.
ಇವೆಲ್ಲ ಒಂದು ಕಡೆಯಾದರೆ, ಬ್ಲೂಮ್ಬರ್ಗ್ ನ್ಯೂಸ್ ಏಜನ್ಸಿ, ಅದಾನಿ ಷೇರುಗಳು ಒತ್ತೆಯಾಗಿರುವ ಇನ್ನೊಂದು ಬಗೆಯನ್ನು ಬಹಿರಂಗಪಡಿಸಿದೆ. ಅದರ ಪ್ರಕಾರ, ನಾರ್ವೆಯ ಪೆನ್ಷನ್ ಫಂಡ್ ಕೆಎಲ್‌ಪಿ, ಅದಾನಿ ಗ್ರೀನ್‌ನಲ್ಲಿನ ತನ್ನೆಲ್ಲಾ ಷೇರುಗಳನ್ನು ಮಾರಲು ಮುಖ್ಯ ಕಾರಣ ಅದಾನಿ ಅವುಗಳನ್ನು ಆಸ್ಟ್ರೇಲಿಯದಲ್ಲಿನ ಕಲ್ಲಿದ್ದಲು ಗಣಿಗಾಗಿ ಸಾಲ ಪಡೆಯಲು ಅಡವಿರಿಸಿದ್ದು. ಗ್ರೀನ್ ಎನರ್ಜಿಯಲ್ಲಿನ ಷೇರುಗಳು ಕಲ್ಲಿದ್ದಲು ಗಣಿಗಾರಿಕೆಗಾಗಿ. ಹೇಗಿದೆ ತಮಾಷೆ?
ಇದಲ್ಲದೆ, 2016ರಲ್ಲಿ ತನಿಖಾ ಸಂಸ್ಥೆಗಳಾದ ಪನಾಮಾ ಮತ್ತು ಪಂಡೋರಾ ಪೇಪರ್ಸ್‌ನ ವರದಿಗಳಲ್ಲಿಯೂ ಬಹಮಾಸ್ ಮತ್ತು ಬ್ರಿಟಿಷ್ ದ್ವೀಪಗಳಲ್ಲಿ ವ್ಯವಹರಿಸುವ ವಿನೋದ್ ಅದಾನಿ ಹೆಸರು ಉಲ್ಲೇಖವಾಗಿದ್ದುದು ಈಗ ಮುನ್ನೆಲೆಗೆ ಬಂದಿದೆ. ಇನ್ನೂ ಏಕೆ ಇದರ ತನಿಖೆಯಾಗಿಲ್ಲ ಎಂದು ಕಾಂಗ್ರೆಸ್ ಇದರ ಬಗ್ಗೆ ಪ್ರಶ್ನಿಸಿದೆ.
 
ವಿನೋದ್ ಅದಾನಿಯಿಂದ ಅಂತರ ಕಾಯ್ದುಕೊಳ್ಳುವ ಗೌತಮ್ ಅದಾನಿ ನಡೆಯ ಬಗ್ಗೆಯೂ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ. ಅಂಬುಜಾ ಸಿಮೆಂಟ್ಸ್ ಅನ್ನು ಅದಾನಿ ಗ್ರೂಪ್ ಖರೀದಿಸಿದಾಗ ಅದು ಸೆಬಿಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಅಂತಿಮ ಫಲಾನುಭವಿ ಮಾಲಕತ್ವವು ವಿನೋದ್ ಶಾಂತಿಲಾಲ್ ಅದಾನಿ ಮತ್ತು ಅವರ ಪತ್ನಿ ರಂಜನಾ ಬೆನ್ ವಿನೋದ್ ಅದಾನಿ ಎಂದು ಉಲ್ಲೇಖವಾಗಿರುವಾಗಲೂ, ವಿನೋದ್ ಅದಾನಿಯಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸುವುದು ಹಾಸ್ಯಾಸ್ಪದ ಎಂದಿದ್ದಾರೆ. ವರ್ಷಗಳಿಂದ ತನಿಖಾ ಏಜನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ನೀವು, ನಿಮ್ಮ ಉದ್ಯಮಮಿತ್ರರನ್ನು ಪುರಾವೆ ಸಮೇತ ಹಿಡಿಯಲು ಯಾಕೆ ಬಳಸುತ್ತಿಲ್ಲ ಎಂದು ಅವರು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ. ಇನ್ನು, ಬಿಜೆಪಿಯವರೇ ಆದ ಸುಬ್ರಮಣಿಯನ್ ಸ್ವಾಮಿಯವರು, ಅದಾನಿಯ ಎಲ್ಲ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸಿ ನಂತರ ಹರಾಜು ಹಾಕಬೇಕು ಎಂದು ಆಗ್ರಹಿಸಿರುವುದೂ ಪ್ರಧಾನಿಯವರಿಗೆ ಕೇಳಿಸಿಯೇ ಇರುತ್ತದೆ.
ವಿನೋದ್ ಶಾಂತಿಲಾಲ್ ಅದಾನಿ ಸಾಗರೋತ್ತರ ಸಾಮ್ರಾಜ್ಯದಲ್ಲಿ ಏನೆಲ್ಲಾ ಆಟ ನಡೆಯುತ್ತಿದೆ ಎಂಬುದನ್ನು

ಈಗ ಬಹಿರಂಗವಾಗಿರುವ ವರದಿಗಳು ಹೇಳುತ್ತಿವೆ ಮತ್ತು ಇವಕ್ಕೆಲ್ಲ ಉತ್ತರ ಬಯಸುತ್ತಿವೆ. ಕಳೆದ 30 ವರ್ಷಗಳಿಂದ ವಿದೇಶದಲ್ಲಿರುವ ವಿನೋದ್ ಅದಾನಿ, ಅಮೆರಿಕದಲ್ಲಿ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಡಿಗ್ರಿ ಪಡೆದವರು. ಮಾರಿಷಸ್, ಸೈಪ್ರಸ್, ಬ್ರಿಟಿಷ್ ವರ್ಜಿನ್ ಐಲ್ಯಾಂಡ್, ಸಿಂಗಾಪೂರ್, ಆಸ್ಟ್ರೇಲಿಯ ಸೇರಿದಂತೆ 8 ಕಡೆ ಕಂಪೆನಿಗಳನ್ನು ಹೊಂದಿದ್ದಾರೆ. ದುಬೈನಲ್ಲೂ ವಿನೋದ್ ಆಸ್ತಿಯಿದೆ. ಸಿಂಗಾಪುರದಲ್ಲಿಯೂ 4 ಮಿಲಿಯನ್ ಡಾಲರ್ ಮೌಲ್ಯದ ಅಪಾರ್ಟ್‌ಮೆಂಟ್ ಹೊಂದಿದ್ದಾರೆ.
ಇಕನಾಮಿಕ್ಸ್ ಟೈಮ್ಸ್ ಪ್ರಕಾರ, 1980ರಲ್ಲಿ ವಿನೋದ್ ಸಣ್ಣ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಫ್ಯಾಕ್ಟರಿಯನ್ನು ತಮ್ಮ ಉಳಿತಾಯದ 1,000 ಡಾಲರ್ ಹಾಗೂ ಬ್ಯಾಂಕ್ ಸಾಲವನ್ನು ಸೇರಿಸಿ ಖರೀದಿಸುತ್ತಾರೆ. ಅದನ್ನು ನಡೆಸಲು ಗೌತಮ್ ಅದಾನಿ ನೆರವಾಗುತ್ತಾರೆ. ಅವರೇ ಹೇಳಿಕೊಂಡಂತೆ ಎಲ್ಲ ಶುರುವಾಗಿದ್ದು ಸೊನ್ನೆಯಿಂದ.
ವಿನೋದ್ ಅದಾನಿ ಬಗ್ಗೆ 2016ರಲ್ಲಿ ಇಕನಾಮಿಕ್ಸ್ ಟೈಮ್ಸ್ ಬರೆದ ಅಡ್ವರ್ಟೋರಿಯಲ್‌ನಲ್ಲಿ ಅಂದರೆ ದುಡ್ಡು ತೆಗೆದುಕೊಂಡು ಪ್ರಕಟಿಸುವ ಗುಣಗಾನ ಮಾಡುವ ಲೇಖನದಲ್ಲಿ, ‘‘ಅವರೊಂದು ಮಾತು ಕೊಟ್ಟರೆ ಅದು ಶಿಲಾಶಾಸನದಷ್ಟೆ ಖಚಿತವಾಗಿರುತ್ತಿತ್ತು’’ ಎಂದು ಹೇಳಲಾಗಿದೆ. ಅದೇ ಬರಹದಲ್ಲಿ ‘‘ಅವರು ಎಲ್ಲರಿಗೂ ನೆರವಾಗುತ್ತಿದ್ದರೂ ಯಾರಿಗೂ ಹೇಳಿಕೊಳ್ಳುತ್ತಿರಲಿಲ್ಲ’’ ಎಂದೂ ಇದೆ.
ಈಗ ಇಡೀ ದೇಶದ ಅರ್ಥವ್ಯವಸ್ಥೆಗೇ ಸಂಕಟ ತರುವಂತಹ, ಕೋಟ್ಯಂತರ ಜನರ ಹೂಡಿಕೆಗೆ ಕಂಟಕ ತರುವ ಹಗರಣದ ಹಿಂದಿರುವ ರೂವಾರಿ ಅವರೇ ಎಂದು ಜಾಗತಿಕ ಮಾಧ್ಯಮಗಳು ಹೇಳುತ್ತಿವೆ.
ಹಿಂಡನ್ ಬರ್ಗ್ ವರದಿ ಬರುವ ಮೊದಲು ಗೌತಮ್ ಅದಾನಿಯನ್ನು ಕೂಡ ಇಲ್ಲಿನ ಸುದ್ದಿವಾಹಿನಿಗಳು ತಲೆಯ ಮೇಲೆ ಹೊತ್ತುಕೊಂಡು ಕೊಂಡಾಡಿದ್ದವು. ನಮ್ಮ ವಾಹಿನಿಗಳು ದುಡ್ಡು ಪಡೆದು ಯಾರನ್ನೆಲ್ಲ ಇಂದ್ರ ಚಂದ್ರ ಎಂದು ಹೊಗಳುತ್ತವೆಯೋ ಅವರ ಬಂಡವಾಳವೆಲ್ಲ ಒಂದೊಂದಾಗಿ ಹೀಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬಯಲಾಗುತ್ತಿದೆ. ಭಾರತದ ಕಾರ್ಪೊರೇಟ್ ಜಗತ್ತಿನಲ್ಲಿ ನಡೆಯುತ್ತಿರುವ ಈ ವಿನೋದವನ್ನು ವಿದೇಶಿ ಮಾಧ್ಯಮಗಳು ನಮ್ಮೆದುರು ಒಂದೊಂದಾಗಿ ತಂದಿಡುತ್ತಿವೆ. ನಾವು ನೋಡುತ್ತಿದ್ದೇವೆ.

share
ಆರ್.ಕೆ.
ಆರ್.ಕೆ.
Next Story
X