ರಾಜ್ಯಮಟ್ಟದ ಅಥ್ಲೆಟಿಕ್: ತೇಜಲ್ ಗೆ ಚಿನ್ನದ ಪದಕ

ಬೆಳ್ತಂಗಡಿ: ಚಾಮುಂಡಿ ವಿಹಾರ ಕ್ರೀಡಾಂಗಣ ಮೈಸೂರಿನಲ್ಲಿ ಫೆಬ್ರವರಿ 19ರಿಂದ 22 ರವರೆಗೆ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ವಿಭಾಗದ ಬಾಲಕರ 110 ಮೀಟರ್ ಹರ್ಡಲ್ಸ್ ನಲ್ಲಿ ಮುಂಡಾಜೆ ನಿವಾಸಿ ತೇಜಲ್ ಕೆ. ಆರ್ ಇವರು ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
2022ರ ಆಗಸ್ಟ್ ನಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಚಾಂಪಿಯನ್‍ಶಿಪ್ ನಲ್ಲಿ 16 ವರ್ಷದೊಳಗಿನ ಬಾಲಕರ 80 ಮೀಟರ್ ಹರ್ಡಲ್ಸ್ ನಲ್ಲಿ ನೂತನ ರಾಜ್ಯ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಪಡೆದಿದ್ದರು.
ರಾಜೇಶ್ ಕೆ. ವಿ., ಜಿನ್ಸಿ ದಂಪತಿಯ ಪುತ್ರನಾಗಿರುವ ತೇಜಲ್, ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಕ್ರೀಡಾ ವಿದ್ಯಾರ್ಥಿಯಾಗಿದ್ದು, ದೈಹಿಕ ಶಿಕ್ಷಕ ಶಾಂತರಾಮ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
Next Story





