ಪವನ್ ಖೇರಾಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಪ್ರಧಾನಿ ಕುರಿತು ಹೇಳಿಕೆ ನೀಡಿರುವುದಕ್ಕೆ ಅಸ್ಸಾಂ ಪೊಲೀಸರಿಂದ ಗುರುವಾರ ಬಂಧಿಸಲ್ಪಟ್ಟಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಎಲ್ಲ ಎಫ್ ಐಆರ್ ಗಳನ್ನು ಒಂದೇ ವ್ಯಾಪ್ತಿಗೆ ತರುವಂತೆ ನೋಟಿಸ್ ನೀಡಿದೆ.
ದಿಲ್ಲಿ ವಿಮಾನ ನಿಲ್ದಾಣದಲ್ಲಿ ಖೇರಾ ಅವರನ್ನು ವಿಮಾನದಿಂದ ಕೆಳಗಿಳಿಸಿದ ಅಸ್ಸಾಂ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಪ್ರಧಾನಿ ಮೋದಿಗೆ ಅವಮಾನಿಸಿದ ಆರೋಪದಲ್ಲಿ ಖೇರಾ ಅವರ ಬಂಧಿಸಿದ್ದಾರೆ ಎನ್ನಲಾಗಿದೆ.
Next Story





