ಯುವತಿ ನಾಪತ್ತೆ

ಮಂಗಳೂರು, ಫೆ.23:ನಗರದ ಜಪ್ಪಿನಮೊಗರು ಪ್ರಜ್ಞಾ ಸ್ವಾಧಾರ ಗೃಹದಲ್ಲಿದ್ದ ರೂಪಾ (26) ಎಂಬಾಕೆ 2022ರ ಅಕ್ಟೋಬರ್ 15ರಿಂದ ನಾಪತ್ತೆಯಾಗಿದ್ದು, ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಶ್ರವಣ ಬೆಳಗೊಳದ ಶ್ರೀಕಂಠ ನಗರ ನಿವಾಸಿಯಾಗಿರುವ ಈಕೆ ಸುರತ್ಕಲ್‌ನ ಕಾನಾ ಇಡ್ಯಾದ ಬಾಡಿಗೆ ಮನೆಯಲ್ಲಿದ್ದರು. ಸುರತ್ಕಲ್ ಪೊಲೀಸರು ಈಕೆಯನ್ನು ಜಪ್ಪಿನಮೊಗರು ಪ್ರಜ್ಞಾ ಸ್ವಾಧಾರ ಗೃಹಕ್ಕೆ ಸೇರಿಸಿದ್ದರು.
6 ಅಡಿ ಎತ್ತರ, ದುಂಡು ಮುಖ, ಕಪ್ಪು ಕೂದಲು, ಸಾಧಾರಣಾ ಶರೀರ ಹೊಂದಿರುವ ಈಕೆ ಕಾಣೆಯಾದ ದಿನ ಆಕಾಶ ನೀಲಿ ಬಣ್ಣದ ಟಾಪ್, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ನೀಲಿ ಜಾಕೆಟ್ ಧರಿಸಿದ್ದರು. ಕನ್ನಡದಲ್ಲಿ ಮಾತನಾ ಡುವ ಈಕೆಯಯ ಪತ್ತೆಯಾದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯನ್ನು (0824-2220529) ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story