ಸಮಸ್ತ ಬಂಟ್ವಾಳ ತಾಲೂಕು ಸಮಿತಿ ಅಸ್ತಿತ್ವಕ್ಕೆ

ಮಂಗಳೂರು : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಬಂಟ್ವಾಳ ತಾಲೂಕು ಸಮಿತಿ ರಚನೆಯು ಬಿ.ಸಿ ರೋಡು ತಲಪಾಡಿಯ ಸಮಸ್ತ ಕಚೇರಿಯಲ್ಲಿ ಗುರುವಾರ ನಡೆಯಿತು. ಸಮಸ್ತ ಕರ್ನಾಟಕ ಮುಶಾವರದ ಪ್ರಧಾನ ಕಾರ್ಯದರ್ಶಿ ಶೈಖುನಾ ಬಿ.ಕೆ. ಅಬ್ದುಲ್ ಖಾದರ್ ಅಲ್‌ಖಾಸಿಮಿ ಅಧ್ಯಕ್ಷತೆ ವಹಿಸಿದ್ದರು. ಅಹ್ಮದ್ ದಾರಿಮಿ ಕಂಬಳಬೆಟ್ಟು ಉದ್ಘಾಟಿಸಿದರು.
ನೂತನ ಸಮಿತಿಯ ನಿರ್ದೇಶಕರಾಗಿ ಶೈಖುನಾ ಬಂಬ್ರಾಣ ಉಸ್ತಾದ್, ಅಧ್ಯಕ್ಷರಾಗಿ ಅಹ್ಮದ್ ದಾರಿಮಿ ಕಂಬಳಬೆಟ್ಟು, ಉಪಾಧ್ಯಕ್ಷರಾಗಿ ಕೆ.ಬಿ. ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿ, ಅಶ್ಫಾಕ್ ಫೈಝಿ ನಂದಾವರ, ಕೆ.ಕೆ.ಇಸ್ಮಾಯಿಲ್ ಮುಸ್ಲಿಯಾರ್ ಕೊಡಂಗಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ದಾರಿಮಿ ಫರಂಗಿಪೇಟೆ, ಕಾರ್ಯದರ್ಶಿಗಳಾಗಿ ಅಬೂಸಿರಾಜ್ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ, ಕೆ.ಎಂ.ಎ. ಹನೀಫಿ ಕೊಡುಂಗಾಯಿ, ಹನೀಫ್ ದಾರಿಮಿ ಸುರಿಬೈಲು, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಕೋಶಾಧಿಕಾರಿಯಾಗಿ ಮುಸ್ತಫಾ ಅನ್ಸಾರಿ ಬಾಂಬಿಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಕಾಸಿಂ ದಾರಿಮಿ ವಿಟ್ಲ, ಮಜೀದ್ ದಾರಿಮಿ ಏನಾಜೆ, ಅನ್ಸಾರುದ್ದೀನ್ ಫೈಝಿ ಮಿತ್ತಬೈಲು, ಸದಸ್ಯರಾಗಿ ಅಬ್ದುಲ್ ಗಫೂರ್ ಹನೀಫೀ ಕೊಡುಂಗಾಯಿ, ಶೇಖಬ್ಬ ಬಾಖವಿ ಸಜಿಪ, ಇರ್ಷಾದ್ ದಾರಿಮಿ ಮಿತ್ತಬೈಲು, ಶಾಫಿ ದಾರಿಮಿ, ಇಬ್ರಾಹಿಂ ದಾರಿಮಿ ಗೋಳ್ತಮಜಲು, ಅಬೂಸಾಲಿಹ್ ಫೈಝಿ ಅಕ್ಕರಂಗಡಿ, ಅಬ್ದುರ‌್ರಹ್ಮಾನ್ ಫೈಝಿ ಕೊಡಾಜೆ, ಉಮರ್ ದಾರಿಮಿ ಪರ್ತಿಪ್ಪಾಡಿ ಆಯ್ಕೆಯಾಗಿದ್ದಾರೆ.
ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ ಸ್ವಾಗತಿಸಿದರು. ಹನೀಫ್ ದಾರಿಮಿ ಸುರಿಬೈಲು ವಂದಿಸಿದರು.