ಮಾ.13ರಿಂದ 5, 8ನೇ ತರಗತಿಯ ಪಬ್ಲಿಕ್ ಪರೀಕ್ಷೆ: ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು, ಫೆ.23: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಸಕ್ತ ವರ್ಷದ 5ನೆ ಮತ್ತು 8ನೆ ತರಗತಿಯ ಮೌಲ್ಯಂಕನ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
5ನೆ ತರಗತಿಯ ಪರೀಕ್ಷೆಯು ಮಾ.15ರಿಂದ ಮಾ.18ರ ವರೆಗೆ, 8ನೆ ತರಗತಿಯ ಪರೀಕ್ಷೆಯು ಮಾ.13ರಿಂದ ಮಾ.18ರವರೆಗೆ ಮಧ್ಯಾಹ್ನ 2.30ರಿಂದ 4.30ರ ವರೆಗೆ ನಡೆಯಲಿದೆ.
5ನೆ ತರಗತಿಗೆ ಸಂಬಂಧಿಸಿ ಮಾ.15ರಂದು ಪ್ರಥಮ ಭಾಷೆ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಮರಾಠಿ, ತೆಲುಗು ಮತ್ತು ತೆಮಿಳು ಭಾಷೆಗಳ ಪರೀಕ್ಷೆಗಳು ನಡೆಯಲಿವೆ. ಮಾ.16ರಂದು ಗಣಿತ, ಮಾ.17ರಂದು ಪರಿಸರ ಅಧ್ಯಯನ ಹಾಗೂ ಮಾ.18ರಂದು ದ್ವಿತೀಯ ಭಾಷೆ ಕನ್ನಡ ಮತ್ತು ಇಂಗ್ಲೀಷ್ ಪರೀಕ್ಷೆಗಳು ನಡೆಯಲಿವೆ.
8ನೆ ತರಗತಿಯ ಸಂಬಂಧಿಸಿ ಮಾ.13ರಂದು ಪ್ರಥಮ ಭಾಷೆ ಕನ್ನಡ, ಇಂಗ್ಲೀಷ್, ಸಂಸ್ಕøತ, ಹಿಂದಿ, ಉರ್ದು, ಮರಾಠಿ, ತೆಲುಗು ಮತ್ತು ತೆಮಿಳು ಭಾಷೆ ಪರೀಕ್ಷೆ ನಡೆಯಲಿದೆ. ಮಾ.14ರಂದು ದ್ವಿತೀಯ ಭಾಷೆ ಕನ್ನಡ ಮತ್ತು ಇಂಗ್ಲೀಷ್ ಪರೀಕ್ಷೆಗಳು ನಡೆಯಲಿವೆ. ಮಾ.15ರಂದು ತೃತೀಯ ಭಾಷೆ ಕನ್ನಡ, ಇಂಗ್ಲೀಷ್, ಹಿಂದಿ, ಅರೇಬಿಕ್, ಉರ್ದು, ಪರ್ಷಿಯನ್, ತುಳು, ಕೊಂಕಣಿ, ಮರಾಠಿ ಪರೀಕ್ಷೆಗಳು ನಡೆಯಲಿವೆ. ಮಾ.16ರಂದು ಗಣಿತ, ಮಾ.17ರಂದು ವಿಜ್ಞಾನ ಹಾಗೂ ಮಾ.18ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.







