ಪಡುಬಿದ್ರೆ: ಅಂಗಡಿ ಮಾಲಕನ ನಗದು ಕಳವು ಪ್ರಕರಣ; ಓರ್ವ ಆರೋಪಿ ಸೆರೆ

ಕಾಪು (ಪಡುಬಿದ್ರೆ): ಹಾಲು ಖರೀದಿ ಮಾಡುವ ನೆಪದಲ್ಲಿ ಅಂಗಡಿ ಮಾಲಕನ ದ್ವಿಚಕ್ರ ವಾಹನದಲ್ಲಿದ್ದ 6 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ ತಂಡದ ಓರ್ವ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಸುನಿಲ್ (29) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಡಿ.22ರಂದು ರಾತ್ರಿ ಕಾಪು ಮಹಾಲಸಾ ಸ್ಟೋರ್ ಮಾಲಕ ರಾಘವೇಂದ್ರ ಕಿಣಿ ಅವರು ಅಂಗಡಿ ಮುಚ್ಚುತ್ತಿರುವಾಗ ಮೂರು ಜನ ಬಂದು ಹಾಲು ಕೊಡುವಂತೆ ಕೇಳಿದ್ದು, ಆ ವೇಳೆ ಮಾಲಕ ಅಂಗಡಿಯ ಒಳಹೋದಾಗ ದುಷ್ಕರ್ಮಿಗಳು ಮಾಲಕನ ಸ್ಕೂಟರ್‌ನಲ್ಲಿಟ್ಟಿದ್ದ 6 ಲಕ್ಷ ರೂ. ನಗದನ್ನು ದೋಚಿ ಪರಾರಿಯಾಗಿದ್ದರು.
ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Next Story