ಸನ್‌ರೆಸರ್ಸ್ ಹೆದರಾಬಾದ್‌ನ ನೂತನ ನಾಯಕರಾಗಿ ಮಾರ್ಕ್ರಮ್ ನೇಮಕ

ಹೊಸದಿಲ್ಲಿ, ಫೆ.23: ದಕ್ಷಿಣ ಆಫ್ರಿಕಾದ ಬ್ಯಾಟರ್ ಏಡೆನ್ ಮಾರ್ಕ್ರಮ್‌ರನ್ನು 2023ರ ಆವೃತ್ತಿಯ ಐಪಿಎಲ್‌ಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನೂತನ ನಾಯಕರನ್ನಾಗಿ ನೇಮಿಸಲಾಗಿದೆ.
ಹೊಸ ಐಪಿಎಲ್ ಋತು ಮಾರ್ಚ್ 31ರಿಂದ ಆರಂಭವಾಗಲಿದ್ದು, ಮಾರ್ಕ್ರಮ್ ತಂಡದ ನೂತನ ನಾಯಕನಾಗಿದ್ದಾರೆ ಎಂದು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಟ್ವಿಟರ್‌ನಲ್ಲಿ ಪ್ರಕಟಿಸಿದೆ.
ಮಾರ್ಕ್ರಮ್ ಅವರು ಕೇನ್ ವಿಲಿಯಮ್ಸನ್‌ರಿಂದ ನಾಯಕತ್ವವಹಿಸಿಕೊಳ್ಳಲಿದ್ದು, ಅವರನ್ನು ಕಳೆದ ಋತುವಿನ ಅಂತ್ಯದಲ್ಲಿ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿತ್ತು. 2023ರ ಆವೃತ್ತಿಯ ಆಟಗಾರರ ಹರಾಜಿನ ವೇಳೆ ವಿಲಿಯಮ್ಸನ್ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಪಾಲಾದರು.
28ರ ಹರೆಯದ ಮಾರ್ಕ್ರಮ್ ಇತ್ತೀಚೆಗೆ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು ಮೊದಲ ಆವೃತ್ತಿಯ ದಕ್ಷಿಣ ಆಫ್ರಿಕಾ ಟಿ-20 ಪ್ರಶಸ್ತಿ ಜಯಿಸಲು ನೆರವಾಗಿದ್ದರು. ಟೂರ್ನಮೆಂಟ್‌ನಲ್ಲಿ 365 ರನ್ ಹಾಗೂ 11 ವಿಕೆಟ್‌ಗಳನ್ನು ಕಬಳಿಸುವ ಮೂಲಕ ‘ಸರಣಿ ಶ್ರೇಷ’ ಪ್ರಶಸ್ತಿಗೆ ಭಾಜನರಾಗಿದ್ದರು.
Next Story