Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. 'ಮಾದಕ' ಮಾಯೆಗೆ ಮಕ್ಕಳು...

'ಮಾದಕ' ಮಾಯೆಗೆ ಮಕ್ಕಳು ಬಲಿಯಾಗುತ್ತಿದ್ದಾರೆ

24 Feb 2023 12:15 AM IST
share
ಮಾದಕ ಮಾಯೆಗೆ ಮಕ್ಕಳು ಬಲಿಯಾಗುತ್ತಿದ್ದಾರೆ

ಹೇಗೆ ಡ್ರಗ್ ಮಾಫಿಯಾ ಪ್ರಾಥಮಿಕ, ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನೂ ಬಿಡದೆ ಸೆಳೆಯುತ್ತದೆ, ಅವರನ್ನು ಅಸಹಾಯಕತೆಯ ವ್ಯೆಹದೊಳಕ್ಕೆ ಸಿಲುಕಿಸುತ್ತದೆ, ನಂತರ ಅವರನ್ನು ತಮ್ಮ ಕೆಲಸಕ್ಕೆ ಬಳಸಿಕೊಳ್ಳುತ್ತದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. ಇತ್ತೀಚೆಗೆ ವಿದ್ಯಾರ್ಥಿನಿಯರೂ ಹೀಗೆ ಇಂಥ ಜಾಲದೊಳಕ್ಕೆ ಸಿಲುಕುತ್ತಿರುವ ಆಘಾತಕಾರಿ ಸುದ್ದಿಗಳು ಆಗಾಗ ಬರುತ್ತಲೇ ಇವೆ.

ಕೆ.ಜಿ.ಕೆ ಆಕೆ 9ನೇ ತರಗತಿಯ ವಿದ್ಯಾರ್ಥಿನಿ. ಶಾಲೆಯ ಸಮಯದ ಬಳಿಕವೂ ಮನೆಗೆ ಬೇಗ ಬರುತ್ತಿರಲಿಲ್ಲ ಅಥವಾ ಎಷ್ಟೋ ಸಲ ಮನೆಯಿಂದ ಸಂಜೆ ಹೊರಗೆ ಹೊರಟರೆ ರಾತ್ರಿ 11ರ ಮೇಲೆಯೇ ವಾಪಸ್ ಬರುತ್ತಿದ್ದುದು. ಯಾಕೆಂದು ಪೋಷಕರು ಕೇಳಿದರೆ ಏನಾದರೊಂದು ಕಥೆ ಕಟ್ಟಿ ತಪ್ಪಿಸಿಕೊಳ್ಳುತ್ತಿದ್ದಳು.
ಹೀಗೆ ನಡೆಯುತ್ತಿದ್ದುದು ಯಾವಾಗಲೋ ಒಮ್ಮೆ ಅಲ್ಲ. ಸತತ ಮೂರು ವರ್ಷಗಳಿಂದ ಅನೇಕ ಸಲ ಹೀಗೇ ಆಗುತ್ತಿತ್ತು ಎಂದರೆ ನಂಬುವುದೇ ಅಸಾಧ್ಯ. ಆದರೆ ನಂಬಲೇಬೇಕು.
ಕಡೆಗೂ ಅವಳ ಈ ನಡವಳಿಕೆಯ ಹಿಂದಿನ ಸತ್ಯ ಬಯಲಾಗಿದೆ. ತಾನೆಂಥ ಕರಾಳ ಬಲೆಯಲ್ಲಿ ಸಿಲುಕಿಕೊಂಡಿದ್ದೆ ಎಂಬುದನ್ನು ಆಕೆ ಬಹಿರಂಗಪಡಿಸಿದ್ದಾಳೆ. ಕೇಳಿದರೆ ಎಂಥವರೂ ಬೆಚ್ಚಿ ಬೀಳಬಹುದು. ಆ 9ನೇ ತರಗತಿಯ ವಿದ್ಯಾರ್ಥಿನಿ ಡ್ರಗ್ ಮಾಫಿಯಾದ ಸುಳಿಯಲ್ಲಿ ಸಿಲುಕಿಕೊಂಡಿದ್ದಳು.
ಇಂಥದೊಂದು ಆಘಾತಕಾರಿ ಸಂಗತಿ ನಡೆದಿರುವುದು ಕೇರಳದಲ್ಲಿ. ಒಂಭತ್ತನೇ ತರಗತಿಯ ವಿದ್ಯಾರ್ಥಿನಿ, ತಾನು ಹೇಗೆ ಮೊದಲು ಮಾದಕ ದ್ರವ್ಯ ಸೇವಿಸಿದೆ, ಬಳಿಕ ಹೇಗೆ ಡ್ರಗ್ ಮಾಫಿಯಾದಲ್ಲಿ ಸಿಕ್ಕಿಹಾಕಿಕೊಂಡು ಅದರ ಸಾಗಾಟದ ಕೆಲಸ ಮಾಡಬೇಕಾಯಿತು ಎಂಬ ಕರಾಳ ಕಥೆಯನ್ನು ಬಿಚ್ಚಿಟ್ಟಿದ್ದಾಳೆ.
ಇದೆಲ್ಲವೂ ಶುರುವಾದದ್ದು ಆಕೆ 7ನೇ ತರಗತಿಯಲ್ಲಿದ್ದಾಗಲೇ. ಡ್ರಗ್ ಮಾಫಿಯಾ ಜಾಲದ ಸಂಪರ್ಕಕ್ಕೆ ಆಕೆ ಬರುವಂತಾದದ್ದು ಇನ್‌ಸ್ಟಾಗ್ರಾಮ್ ಮೂಲಕ ಎಂಬುದು ಇನ್ನೂ ಆಘಾತಕಾರಿ ಸಂಗತಿ. ಮೊಬೈಲ್, ಸೋಷಿಯಲ್ ಮೀಡಿಯಾಗಳು ವಿದ್ಯಾರ್ಥಿಗಳನ್ನು ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗಿಬಿಡುತ್ತಿವೆ ಎಂಬುದು ನಿಜವಾಗಿಯೂ ತಲ್ಲಣ ಹುಟ್ಟಿಸುತ್ತದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯ ಗೆಳೆಯನೊಬ್ಬ ಅವಳನ್ನು ಅಂಥದೊಂದು ಗುಂಪಿಗೆ ಸೇರಿಸಿದ್ದ. ಅವನು ಆಗ 12ನೇ ತರಗತಿ ಮುಗಿಸಿದವನು. ಆ ಡ್ರಗ್ ಮಾಫಿಯಾ ಗುಂಪಿನವರು ಅದನ್ನು ಅವಳಿಗೆ ಶಾಲೆಯ ಹೊರಗೆ ಕೊಡುತ್ತಿದ್ದರಂತೆ. ಅದು ಯಾರ ಗಮನಕ್ಕೂ ಬರುತ್ತಿರಲಿಲ್ಲ ಎಂದು ಆಕೆ ಹೇಳಿದ್ದಾಳೆ. ಎಂಡಿಎಂಎಯಂಥ ನಿಷೇಧಿತ ಮಾದಕವಸ್ತು ಸೇವನೆ ಮಾಡುತ್ತಿದ್ದುದಾಗಿ ಆಕೆ ಹೇಳಿಕೊಂಡಿ ದ್ದಾಳೆ. ಅದನ್ನು ಹೇಗೆ ಬಳಸಬೇಕೆಂಬುದನ್ನು ಆ ಗುಂಪು ಕೊಟ್ಟಿದ್ದ ಒಂದು ಲಿಂಕ್ ಮೂಲಕವೇ ಕಲಿತೆ ಎಂತಲೂ ಆಕೆ ಹೇಳಿದ್ದಾಳೆ.
 
7ನೇ ತರಗತಿ ಮುಗಿಸಿದಾಗಿನಿಂದಲೂ ಆಕೆ ಆ ಗುಂಪಿಗಾಗಿ ಡ್ರಗ್ ಸಾಗಾಟದ ಕೆಲಸ ಮಾಡಿಕೊಂಡು ಬಂದಿದ್ದಾಳೆ. ಶಾಲಾ ಸಮಯದ ಬಳಿಕ ಅದನ್ನು ಮಾಡುತ್ತಿದ್ದುದಾಗಿ ಹೇಳಿದ್ದಾಳೆ. ಆ ಗುಂಪಿನವರು ಶಾಲೆಯ ಸಮೀಪಕ್ಕೆ ಡ್ರಗ್ ತಲುಪಿಸುತ್ತಿದ್ದರು. ಎಲ್ಲಿಗೆ ಅದನ್ನು ತಲುಪಿಸಬೇಕೆಂಬ ಮಾಹಿತಿಯನ್ನು ಕೂಡ ಇನ್‌ಸ್ಟಾಗ್ರಾಮ್ ಚಾಟ್ ಮೂಲಕವೇ ತಿಳಿಸಲಾಗುತ್ತಿತ್ತಂತೆ. ವರ್ಷಗಟ್ಟಲೆ ಇವೆಲ್ಲವೂ ಗುಟ್ಟಾಗಿರುವಂತೆ ಆಕೆ ನಿಭಾಯಿಸಿದ್ದಾಳೆ. ಒಂದು ಗ್ರಾಂ ಡ್ರಗ್ ಸಾಗಿಸಿದರೆ ಸುಮಾರು 700 ರೂ.ಗಳಂತೆ ಸಿಗುತ್ತಿದ್ದ ಹಣವನ್ನೂ ಆಕೆ ಸ್ನೇಹಿತರ ಬಳಿಯೇ ಇರಿಸಿದ್ದಾಳೆ. ಮನೆಗೆ ತೆಗೆದುಕೊಂಡು ಹೋದರೆ ಹಣವೆಲ್ಲಿಂದ ಬಂತು ಎಂದು ಪೋಷಕರು ಕೇಳುವ ಪ್ರಶ್ನೆಗೆ ಏನೆಂದು ಉತ್ತರ ಹೇಳುವುದು ಎಂಬ ಭಯ.

ಕಡೆಗೂ ಮಗಳ ವಿಚಿತ್ರ ನಡವಳಿಕೆ, ಅವಳ ಕೈಮೇಲೆ ಬ್ಲೇಡಿನಿಂದ ಆದ ಮಾರ್ಕ್‌ಗಳು ಗಳಿಂದ ಅನುಮಾನಗೊಂಡ ತಾಯಿ ಅನುಮಾನಗೊಂಡಿದ್ದಾರೆ. ಆನಂತರ, ಮಗಳು ಶಾಲೆಗೆ ಹೋಗುತ್ತಿದ್ದಾಗ ಹಿಂಬಾಲಿಸಿದ್ದಾರೆ. ಅಪರಿಚಿತರೊಂದಿಗೆ ಮಗಳು ಮಾತನಾಡುವುದು ಗೊತ್ತಾಗಿದೆ. ಬಳಿಕವೇ ಮಗಳಿಂದ ಸತ್ಯಸಂಗತಿ ಬಯಲಾಗಿದೆ. ಆಮೇಲೆ ಆಕೆಯ ತಾಯಿ ಮತ್ತು ಸಾಮಾಜಿಕ ಹೋರಾಟಗಾರರು ಮಕ್ಕಳ ಸಹಾಯವಾಣಿ ಮತ್ತು ಕ್ಯಾಲಿಕಟ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈಗಾಗಲೇ ಆಕೆ ನೀಡಿರುವ ಮಾಹಿತಿ ಆಧರಿಸಿ ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕ ಈ ಹಿಂದೆಯೂ ಡ್ರಗ್ ಮಾರಾಟ ಸಂಬಂಧವೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ವಿದ್ಯಾರ್ಥಿನಿಯ ಮತ್ತೊಬ್ಬ ಸ್ನೇಹಿತನ ಬಗ್ಗೆ ಕೂಡ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಆತ ಕೂಡ ಈ ಹಿಂದೆ ಮಾದಕ ವಸ್ತು ಪ್ರಕರಣದಲ್ಲಿ ಭಾಗಿಯಾಗಿದ್ದವನೇ ಎನ್ನಲಾಗಿದೆ. ಇನ್ನೂ ಇಬ್ಬರ ಬಗ್ಗೆಯೂ ಆಕೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾಳೆ. ಆಕೆಯ ಹೇಳಿಕೆ ಆಧರಿಸಿ 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆಯಾಗಿದೆ.

ಕಳೆದ ವರ್ಷವೂ ಕೋಝಿಕ್ಕೋಡ್‌ನ ಅಝಿಯೂರ್ ಎಂಬ ಹಳ್ಳಿಯ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಇಂಥದೇ ಗ್ಯಾಂಗ್ ಡ್ರಗ್ ಸಾಗಾಟಕ್ಕೆ ಬಲವಂತವಾಗಿ ಹಚ್ಚಿತ್ತು ಎಂದು ವರದಿಯಾಗಿತ್ತು. ಆದರೆ ಪೊಲೀಸರು ಕಡೆಗೆ ಬಂಧಿತ ಯುವಕ ಆಕೆಯನ್ನು ಈ ಜಾಲದೊಳಕ್ಕೆ ಸಿಲುಕಿಸಲು ಆಮಿಷವೊಡ್ಡಿರುವುದಕ್ಕೆ ಯಾವುದೇ ಸಾಕ್ಷವಿಲ್ಲ ಎಂದಿದ್ದರು. ಹೇಗೆ ಡ್ರಗ್ ಮಾಫಿಯಾ ಪ್ರಾಥಮಿಕ, ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನೂ ಬಿಡದೆ ಸೆಳೆಯುತ್ತದೆ, ಅವರನ್ನು ಅಸಹಾಯಕತೆಯ ವ್ಯೆಹದೊಳಕ್ಕೆ ಸಿಲುಕಿಸುತ್ತದೆ, ನಂತರ ಅವರನ್ನು ತಮ್ಮ ಕೆಲಸಕ್ಕೆ ಬಳಸಿಕೊಳ್ಳುತ್ತದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. ಇತ್ತೀಚೆಗೆ ವಿದ್ಯಾರ್ಥಿನಿಯರೂ ಹೀಗೆ ಇಂಥ ಜಾಲದೊಳಕ್ಕೆ ಸಿಲುಕುತ್ತಿರುವ ಆಘಾತಕಾರಿ ಸುದ್ದಿಗಳು ಆಗಾಗ ಬರುತ್ತಲೇ ಇವೆ.
ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿಗಳಿದ್ದ ದೊಡ್ಡ ಮಟ್ಟದ ಡ್ರಗ್ ಜಾಲ ಈ ವರ್ಷದ ಆರಂಭದಲ್ಲೇ ಬಯಲಾಗಿತ್ತು. ಎಂಥದೋ ಸೆಳೆತ, ಏನೋ ಕುತೂಹಲ ಕಡೆಗೆ ಎಂಥ ಅಪಾಯಕಾರಿ ದೂರಕ್ಕೆ ಕೊಂಡೊಯ್ದುಬಿಡಬಲ್ಲದು ಎಂಬುದರ ಊಹೆ ಕೂಡ ಇಲ್ಲದೆ ಅನೇಕ ಯುವಕರು ಇಂಥ ಜಾಲದಲ್ಲಿ ಸಿಕ್ಕಿಬೀಳುತ್ತಿರುವುದು ನಿಜಕ್ಕೂ ದುರಂತ.

share
Next Story
X