ಎಸ್ಸೆಸ್ಸೆಫ್ ಜಯನಗರ ಡಿವಿಷನ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಜಯನಗರ ಡಿವಿಷನ್ ಇದರ ವಾರ್ಷೀಕ ಮಹಾಸಭೆಯು ಖಾಸಗಿ ಹೋಟೆಲ್ ಮಡಿವಾಳದಲ್ಲಿ ಡಿವಿಷನ್ ಅಧ್ಯಕ್ಷ ಅಬ್ದುಲ್ ಅಝೀಝ್ ಉಮೈದಿ ಅಧ್ಯಕ್ಷತೆಯಲ್ಲಿ ಜರಗಿತು.
ಎಸ್ ವೈಎಸ್ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪಯೋಟ ಉದ್ಘಾಟನೆ ನೆರವೇರಿಸಿದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ಸಂಶುದ್ದೀನ್ ವಾರ್ಷಿಕ ವರದಿ, ಹನೀಫ್ ಸಅದಿ ಕ್ಯುಡಿ & ಸಿಸಿ ವರದಿ, ವಾಜಿದ್ ಅಂಜದಿ ರೈಂಬೋ ವರದಿ, ಅಝ್ಅರ್ ಕ್ಯಾಂಪಸ್ ವರದಿ, ಅಬ್ದುಲ್ ರವೂಫ್ ಮೀಡಿಯಾ ಮತ್ತು ಪಬ್ಲಿಕೇಶನ್ ವರದಿ ವಾಚಿಸಿದರು. ಲೆಕ್ಕಪತ್ರ ವನ್ನು ಕೋಶಾಧಿಕಾರಿ ಮುಸ್ತಾಕ್ ಅಹ್ಮದ್ ಮಂಡಿಸಿದರು.
ನಿರೀಕ್ಷಕರಾಗಿ ಆಗಮಿಸಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬೀಬ್ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ವಾಜಿದ್ ಅಂಜದಿ ಉಸ್ತಾದ್ ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಾಕ್ ಅಹ್ಮದ್, ಕೋಶಾಧಿಕಾರಿಯಾಗಿ ಅಝ್ಅರ್, ದವಾ ಕಾರ್ಯದರ್ಶಿಯಾಗಿ ಸಲೀಂ ನಹೀಮಿ, ಕ್ಯಾಂಪಸ್ ಮತ್ತು ವಿಸ್ಡಂ ಕಾರ್ಯದರ್ಶಿ ಯಾಗಿ ಜುನೈದ್ ಮುಸ್ಲಿಯಾರ್, ಕ್ಯುಡಿ ಕಾರ್ಯದರ್ಶಿಯಾಗಿ ಪೈಝಲ್ ರಹ್ಮಾನ್, ರೈನ್ಬೋ ಕಾರ್ಯದರ್ಶಿಯಾಗಿ ಮುಹಮ್ಮದ್ ಅಹ್ಸನಿ, ಜಿಡಿ ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್, ಮೀಡಿಯಾ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಿದ್ದೀಕ್ ನೇಮಕಗೊಂಡರು.

.jpeg)