ಭಾರತ ವಿರುದ್ಧ ಮೂರನೇ ಟೆಸ್ಟ್: ಕಮಿನ್ಸ್ ಅಲಭ್ಯ,ಆಸ್ಟ್ರೇಲಿಯಕ್ಕೆ ಸ್ಟೀವ್ ಸ್ಮಿತ್ ನಾಯಕ
ಹೊಸದಿಲ್ಲಿ: ಮಾರ್ಚ್ 1 ರಿಂದ ಇಂದೋರ್‌ನಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದಿಂದ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ವಂಚಿತರಾಗಲಿದ್ದಾರೆ.
ತಾಯಿಯ ಅನಾರೋಗ್ಯದ ಕಾರಣ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ಸೋತ ನಂತರ ಸಿಡ್ನಿಗೆ ತೆರಳಿದ್ದ ಕಮಿನ್ಸ್, ಬುಧವಾರ ಆರಂಭವಾಗಲಿರುವ ಮೂರನೇ ಟೆಸ್ಟ್‌ಗಾಗಿ ಭಾರತಕ್ಕೆ ಮರಳುವ ನಿರೀಕ್ಷೆಯಿತ್ತು.
ತನ್ನ ತಾಯಿಯ ಅನಾರೋಗ್ಯದ ಕಾರಣ ಇಂದೋರ್ ಟೆಸ್ಟ್‌ಗೆ ಲಭ್ಯವಿಲ್ಲ ಎಂದು 29 ವರ್ಷದ ಕಮಿನ್ಸ್ ಖಚಿತಪಡಿಸಿದ್ದಾರೆ. ಕಮಿನ್ಸ್ ಅನುಪಸ್ಥಿತಿಯಲ್ಲಿ ಮಾಜಿ ನಾಯಕ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ.
Next Story