ಅಮಾಸೆಬೈಲು: ಕೃಷಿ ಸಾಲ ತೀರಿಸಲಾಗದೆ ಕೃಷಿಕ ಆತ್ಮಹತ್ಯೆ
ಅಮಾಸ್ಸೆಬೈಲು: ಕೃಷಿ ಕೆಲಸದ ಬಗ್ಗೆ ಮಾಡಿರುವ ಸಾಲ ತೀರಿಸಲಾಗದೆ ಕೃಷಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.24ರಂದು ಬೆಳಗ್ಗೆ 6ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಮಚ್ಚಟ್ಟು ಗ್ರಾಮದ ಹೊನದನೆ ಮನೆಜೆಡ್ಡು ನಿವಾಸಿ ನರಸಿಂಹ ಪೂಜಾರಿ ಎಂಬವರ ಮಗ ರಾಜೇಶ್ ಎಂದು ಗುರುತಿಸಲಾಗಿದೆ. ಹಂಚಿಕಟ್ಟೆ ಅಂಚೆ ಕಚೇರಿಯಲ್ಲಿ ತಾತ್ಕಾಲಿಕ ಪೋಸ್ಟಮೆನ್ ಆಗಿ ಕೆಲಸ ಮಾಡಿಕೊಂಡಿದ್ದ ಇವರು, ಮನೆಯ ಕೃಷಿ ಕೆಲಸದ ಬಗ್ಗೆ ಸಾಲ ಮಾಡಿಕೊಂಡಿದ್ದರು.
ಈ ಸಾಲ ತೀರಿಸಲಾಗದೆ ರಾಜೇಶ್, ಮನೆಯ ಎದುರಿನ ದನದ ಕೊಟ್ಟಿಗೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story