ಫೌಂಡೇಶನ್ ಡೇ ಪ್ರಯುಕ್ತ ಕೆಸಿಎಫ್ ಖತರ್ ವತಿಯಿಂದ ರಕ್ತದಾನ ಶಿಬಿರ

ದೋಹ : ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಖತರ್ ಘಟಕ ಇದರ ವತಿಯಿಂದ ಕೆ.ಸಿ.ಎಫ್ ಫೌಂಡೇಶನ್ ಡೇ ಇದರ ಪ್ರಯುಕ್ತ ಇಲ್ಲಿನ ಪ್ರಖ್ಯಾತ ಹಾಮದ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಇಂಡಿಯನ್ ಕಲ್ಚರಲ್ ಸೆಂಟರ್ (ICC) ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ರಕ್ತದಾನದಿಂದ ಕೆ.ಸಿ.ಎಫ್ ಜೀವ ತುಂಬುತ್ತಿದೆ. ನೊಂದ ಅನಿವಾಸಿಗಳ ಪಾಲಿಗೆ ಆಶ್ರಯವಾಗಿ ಕಾರ್ಯಾಚರಿಸುತ್ತಿರುವ ಕೆ.ಸಿ.ಎಫ್ ಕಾರ್ಯ ವೈಖರಿಗಳು ಶ್ಲಾಘನೀಯವೆಂದು ಅಭಿಪ್ರಾಯಪಟ್ಚರು.
ಕಾರ್ಯಕ್ರಮದಲ್ಲಿ 100ಕ್ಕಿಂತಲೂ ಮಿಕ್ಕ ಕಾರ್ಯಕರ್ತರು ಸ್ವಯಂಪ್ರೇರಿತ ರಕ್ತದಾನಮಾಡಿ ಮಾದರಿಯಾದರು.
ಕಾರ್ಯಕ್ರಮದಲ್ಲಿ ಐಎನ್‌ಸಿ ನಾಯಕ ಹಾಫಿಳ್ ಉಮರುಲ್ ಫಾರೂಕ್ ಸಖಾಫಿ ಎಮ್ಮೆಮ್ಮಾಡು, ಕನ್ನಡ ಸಂಘ ಖತರ್ ನಾಯಕ ರಮೇಶ ಮುಂತಾದವರು ಉಪಸ್ಥಿತರಿದ್ದರು.
ಕೆ.ಸಿ.ಎಫ್ ಖತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹನೀಫ್ ಪಾತೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಸಿ.ಎಫ್ ಖತರ್ ಪ್ರ.ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ ಸ್ವಾಗತಿಸಿ ಮಅರೂಫ್ ಸುಲ್ತಾನಿ ವಂದಿಸಿದರು.