ಉಡುಪಿ: ಆಯುರ್ವೇದ ಶಿಕ್ಷಕರಿಗೆ ಬೋಧನೆ-ಕಲಿಕಾ ವಿಧಾನ ಬಗ್ಗೆ ಕಾರ್ಯಾಗಾರ

ಉಡುಪಿ: ಉಡುಪಿ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಂಹಿತ ಮತ್ತು ಸಿದ್ಧಾಂತ ಸ್ನಾತಕೋತ್ತರ ವಿಭಾಗದ ವತಿಯಿಂದ ಶ್ರೀಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥವಾಗಿ ಆಯುರ್ವೇದ ಶಿಕ್ಷಕರಿಗೆ ರಾಷ್ಟ್ರಮಟ್ಟದ ಬೋಧನೆ-ಕಲಿಕಾ ವಿಧಾನಗಳ ಬಗ್ಗೆ ‘ಕೋವಿದ- 2023’ ಕಾರ್ಯಾಗಾರವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಡೀನ್ ಹಾಗೂ ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾ ಲಯದ ಪ್ರಾಂಶುಪಾಲ ಡಾ.ಪ್ರಶಾಂತ್ ಎ.ಎಸ್. ಉದ್ಘಾಟಿಸಿ, ಆಯುರ್ವೇದ ಇಂದು ಜಾಗತೀಕರಣವಾಗಿ ಸಾಕಷ್ಟು ಮಹತ್ವ ಪಡೆದಿದೆ. ಈ ಕಾರ್ಯಾಗಾರವು ಬದಲಾದ ನೇಷನಲ್ ಕಮೀಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್‌ನ ಪಠ್ಯಕ್ರಮವನ್ನು ಅನುಸರಿಸುವಲ್ಲಿ ಶಿಕ್ಷಕರಿಗೆ ಪ್ರಯೋಜನಕಾರಿಯಾಗಿದೆ ಎಂದರು.
ಉಡುಪಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಂಹಿತ ಮತುತಿ ಸಿದ್ಧಾಂತ ಸ್ನಾತಕೋತ್ತರ ವಿಭಾಗದಿಂದ ಕೋವಿದ ಪುಸಕ್ತವನ್ನು ಅನಾವರಣಗೊಳಿಸಲಾಯಿತು. ನೇಷನಲ್‌ಕಮೀಷನ್ ಫಾರ್‌ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್‌ನ ಬೋರ್ಡ್ ಆಫ್ ಸ್ಟಡೀಸ್ ಅಧ್ಯಕ್ಷ ಡಾ.ಬಿ.ಎಸ್.ಪ್ರಸಾದ್ ದಿಕ್ಸೂಚಿ ಭಾಷಣ ವನ್ನು ಆನ್‌ಲೈನ್ ಮೂಲಕ ನೆರವೇರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಮತಾ ಕೆ.ವಿ. ಅಧ್ಯಕ್ಷತೆಯನ್ನು ವಹಿಸಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ ಎಸ್., ಕಾಲೇಜಿನ ಸ್ನಾತಕೋತ್ತರ ವಿಭಾಗದ ಅಧ್ಯಕ್ಷ ಡಾ.ನಿರಂಜನ್ ರಾವ್, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಡಾ.ವೀರಕುಮಾರ ಕೆ., ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ.ವಿದ್ಯಾಲಕ್ಷ್ಮಿ ಕೆ. ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಮಹಾರಾಷ್ಟ್ರ ಪುಣೆಯ ತಿಲಕ್ ಆಯುರ್ವೇದ ಮಹಾವಿದ್ಯಾಲಯದ ಸಂಹಿತ ಮತ್ತು ಸಿದ್ಧಾಂತ ವಿಭಾಗದ ಪ್ರಾಧ್ಯಾಪಕ ಡಾ.ಮೋಹನ್ ಆರ್.ಜೋಶಿ ಮತ್ತು ಮಹಾರಾಷ್ಟ್ರದ ವೈ.ಎಂ.ಪಿ.ಎ.ಎಂ.ಸಿಯ ರೋಗ ನಿದಾನ ವಿಭಾಗದ ಮುಖ್ಯಸ್ಥ ಹಾಗೂ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಜೈಕಿರಣ್ ಕಿಣಿ ಉಪಸ್ಥಿತರಿದ್ದರು.
ಸಂಹಿತ ಮತ್ತು ಸಿದ್ಧಾಂತ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಾಪಕ ಸುಬ್ರಹ್ಮಣ್ಯ ಭಟ್ ಪಿ. ಸ್ವಾಗತಿಸಿದರು. ಸಹಪ್ರಾಧ್ಯಾಪಕ ಡಾ. ಅರ್ಹಂತ್ ಕುಮಾರ್ ಎ. ವಂದಿಸಿದರು. ರೋಗನಿದಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅರುಣ್ ಕುಮಾರ್ ಹಾಗೂ ಕೌಮಾರಭೃತ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸಹನಾ ಶಂಕರಿ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭವು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್‌ಎಸ್. ಅಧ್ಯಕ್ಷತೆಯಲ್ಲಿ ಜರಗಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ವೀರಕುಮಾರ ಕೆ., ಪುಣೆ ಮಹಾರಾಷ್ಟ್ರದ ತಿಲಕ್ ಆಯುರ್ವೇದ ಮಹಾವಿದ್ಯಾಲಯದ ಸಂಹಿತ ಮತುತಿ ಸಿದ್ಧಾಂತ ವಿಭಾಗದ ಪ್ರಾಧ್ಯಾಪಕ ಡಾ.ಮೋಹನ್ ಆರ್.ಜೋಶಿ ಉಪಸ್ಥಿತರಿದ್ದರು.
ಸಂಹಿತ ಮತ್ತು ಸಿದ್ಧಾಂತ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಾಪಕ ಡಾ. ಲಿಖಿತಾ ಡಿ.ಎನ್. ವರದಿಯನ್ನು ವಾಚಿಸಿದರು. ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿ ಡಾ. ವಿದ್ಯಾಲಕ್ಷ್ಮಿಕೆ.ಯವರು ವಂದಿಸಿ, ಅಗದ ತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶುಭಪಿ ಯು. ಕಾರ್ಯಕ್ರಮ ನಿರೂಪಿಸಿದರು.







