Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕರ್ನಾಟಕ ಸರಕಾರದ ಧೋರಣೆಯು...

ಕರ್ನಾಟಕ ಸರಕಾರದ ಧೋರಣೆಯು ಆರೋಗ್ಯಕರವಾಗಿದೆಯೇ?

ಕರ್ನಾಟಕದ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ನೇಮಕಾತಿ

ಪಿ.ಎಸ್. ಜಯರಾಮುಪಿ.ಎಸ್. ಜಯರಾಮು24 Feb 2023 11:53 PM IST
share
ಕರ್ನಾಟಕ ಸರಕಾರದ ಧೋರಣೆಯು ಆರೋಗ್ಯಕರವಾಗಿದೆಯೇ?
ಕರ್ನಾಟಕದ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ನೇಮಕಾತಿ

ಅಸ್ತಿತ್ವದಲ್ಲಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಯ್ದೆಯನ್ನು ಬದಲಿಸಲು ಕರ್ನಾಟಕ ಸರಕಾರ ಪರಿಷ್ಕೃತ ಕರಡು ಮಸೂದೆಯನ್ನು ಹಿಂದಿನ ಅಧಿವೇಶನದಲ್ಲಿ ಮಂಡಿಸುವುದರೊಂದಿಗೆ ಕರ್ನಾಟಕದಲ್ಲಿ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ನೇಮಕಾತಿ ವಿಷಯವು ಮುನ್ನೆಲೆಗೆ ಬಂದಿತು. ಪರಿಷ್ಕೃತ ಕರಡು ಮಸೂದೆಯಲ್ಲಿ, ಸರಕಾರ ಮತ್ತು ರಾಜ್ಯಪಾಲರು ಉಪಕುಲಪತಿಗಳ ನೇಮಕಾತಿಯಲ್ಲಿ ತಮ್ಮ ಅಧಿಕಾರವನ್ನು ಮರುಸ್ಥಾಪಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳನ್ನು ನೇಮಕ ಮಾಡುವ ಆಡಳಿತ ಮಂಡಳಿಯ ವಿಷಯದ ಬಗ್ಗೆ ಸರಕಾರ ಹಿಂದೆ ಸರಿದಿದೆ. ಪರಿಷ್ಕೃತ ಮಸೂದೆಯು ಸಾರ್ವಜನಿಕ ವಿಶ್ವವಿದ್ಯಾನಿಲಯದ ಷರತ್ತು 31(4)ಯಡಿ ಉಪಕುಲಪತಿಯನ್ನು ಸರಕಾರದೊಂದಿಗೆ ಸಮಾಲೋಚಿಸಿ ಮಂಡಳಿಯಿಂದ ರಚಿಸಲಾದ ಶೋಧನಾ ಸಮಿತಿ ಶಿಫಾರಿಸುವ ಮೂರು ಹೆಸರುಗಳಿಂದ ನೇಮಕ ಮಾಡುವುದನ್ನು ಉಲ್ಲೇಖಿಸುತ್ತದೆ. ಆದರೆ, ಕರಡು ಮಸೂದೆಯು ಸರಕಾರವೇ ರಚಿಸಿದ್ದ ವಾಸುದೇವ್ ಆತ್ರೆ ಸಮಿತಿ (2022) ಮಾಡಿದ ಶಿಫಾರಸುಗಳಿಗೆ ವಿರುದ್ಧವಾಗಿದೆ. ಬೋರ್ಡ್ ಆಫ್ ಗವರ್ನರ್ (ಬಿಒಜಿ) ಶೋಧನಾ ಸಮಿತಿಯನ್ನು ರಚಿಸುತ್ತದೆ. ಅಂತಹ ಸಮಿತಿಯು ಶಿಫಾರಸು ಮಾಡಿದವರಲ್ಲಿ ಒಬ್ಬರನ್ನು ಉಪಕುಲಪತಿಯನ್ನಾಗಿ ನೇಮಿಸಬೇಕು ಎಂದು ಆತ್ರೆ ಸಮಿತಿಯು ಸ್ಪಷ್ಟವಾದ ಪದಗಳಲ್ಲಿ ಹೇಳಿತ್ತು. ಪರಿಷ್ಕೃತ ವಿಧೇಯಕವು ಅದಕ್ಕೆ ವಿರುದ್ಧವಾಗಿದ್ದು, ಸರಕಾರದ ನಿಜವಾದ ಉದ್ದೇಶಗಳನ್ನು ತೋರಿಸುತ್ತದೆ. ಅದೇನೆಂದರೆ: ಉಪಕುಲಪತಿಗಳ ನೇಮಕಾತಿಯಲ್ಲಿ ವಿಶ್ವವಿದ್ಯಾನಿಲಯಗಳ ಕುಲಪತಿಯ ಅಧಿಕಾರವನ್ನು ಉಳಿಸಿಕೊಳ್ಳುವುದು. ನೇರವಾಗಿ ಹೇಳುವುದಾದರೆ, ಸರಕಾರವು ತನ್ನ ಪರವಾಗಿ ಯಥಾಸ್ಥಿತಿಯನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿದೆ. ನಾವು ಹಿಂದಿನಿಂದಲೂ ಗಮನಿಸಿರುವಂತೆ, ಸಾಮಾನ್ಯವಾಗಿ ಶೋಧನಾ ಸಮಿತಿಗಳು, ಸರಕಾರಕ್ಕೆ ಒಪ್ಪಿಗೆಯಾಗುವ ಹೆಸರುಗಳನ್ನು ಮಾತ್ರ ಶಿಫಾರಸು ಮಾಡುತ್ತವೆ. ಇದು ಬಹಿರಂಗ ರಹಸ್ಯ.

ಯಥಾಸ್ಥಿತಿ ಕಾಯ್ದುಕೊಳ್ಳುವಿಕೆಯನ್ನು ಮುಂದುವರಿಸುವುದರ ಮೂಲಕ, ಉಪಕುಲಪತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಎನ್‌ಇಪಿ 2020 ಸೂಚಿಸಿದ ಮಾನದಂಡದ ಷರತ್ತು 19.2ನ್ನು ಕರ್ನಾಟಕ ಸರಕಾರವು ಉಲ್ಲಂಘಿಸುತ್ತಿದೆ. ಎನ್‌ಇಪಿಯ ಮಾನದಂಡವು ಕೆಳ ಕಂಡಂತಿದೆ:
‘‘ಭಾರತದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ನಾವೀನ್ಯತೆ ಮತ್ತು ಉತ್ಕೃಷ್ಟತೆಯನ್ನು ಅನುಸರಿಸುವ ಸ್ವತಂತ್ರ ಸ್ವ-ಆಡಳಿತ ಸಂಸ್ಥೆಗಳಾಗುವ ಗುರಿಯನ್ನು ಹೊಂದಿರಬೇಕು. ಪ್ರತಿಯೊಂದು ಸಂಸ್ಥೆಯ ಬಿಒಜಿಯ ಮುಖ್ಯಸ್ಥರು ಸೇರಿದಂತೆ ನೇಮಕಾತಿಗಳಲ್ಲಿ ಯಾವುದೇ ರಾಜಕೀಯ ಅಥವಾ ಬಾಹ್ಯ ಹಸ್ತಕ್ಷೇಪವಿಲ್ಲದೆ ಸಂಸ್ಥೆಗಳು ಆಡಳಿತ ನಡೆಸುವ ಅಧಿಕಾರವನ್ನು ಹೊಂದಿರುತ್ತದೆ’’.
ಆದರೆ, ಕರ್ನಾಟಕ ಸರಕಾರದ ಧೋರಣೆಯು ಆರೋಗ್ಯಕರವಾಗಿಲ್ಲ. ಪರಿಷ್ಕೃತ ವಿಧೇಯಕವು ಉಪ ಕುಲಪತಿಗಳ ಆಯ್ಕೆಯ ವಿಷಯಗಳಲ್ಲಿ ಆಡಳಿತ ಮಂಡಳಿ ಮತ್ತು ಶೋಧನಾ ಸಮಿತಿಗಳ ಸ್ವತಂತ್ರ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ.
ಹೊಸದಾಗಿ ಸ್ಥಾಪಿತವಾಗುತ್ತಿರುವ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಮೊದಲ ಉಪಕುಲಪತಿಗಳ ನೇಮಕಾತಿಯನ್ನು ಸರಕಾರವು ಮಾಡಲಿದೆ ಎಂದು ಮಸೂದೆಯು ಷೋಷಿಸಿದೆ. ಈ ಮೂಲಕ ಕುಲಪತಿಗಳ ಆಯ್ಕೆಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಮಾಡುವ ಶೋಧನಾ ಸಮಿತಿಗಳು ಈ ನೇಮಕಾತಿಯಲ್ಲಿ ಭಾಗವಹಿಸುವುದಿಲ್ಲ ಎಂದು ಭಾವಿಸಲಾಗುತ್ತದೆ. ಹಾಗಾಗಿ, ನೂತನ ಎಂಟು ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳನ್ನು ನೇಮಿಸುವಲ್ಲಿ ಸರಕಾರವು ಸಂಪೂರ್ಣ ಸ್ವಾತಂತ್ರ್ಯವನ್ನು ಚಲಾಯಿಸುತ್ತದೆ.
ಯಾವುದೇ ಸಾರ್ವಜನಿಕ ವಿಶ್ವವಿದ್ಯಾನಿಲಯದ ಆಡಳಿತದಲ್ಲಿ, ಉಪ ಕುಲಪತಿಗಳು ಪ್ರಮುಖ ಸ್ಥಾನವನ್ನು ಹೊಂದಿರುತ್ತಾರೆ. ಏಕೆಂದರೆ, ಅವರು ಶೈಕ್ಷಣಿಕ ಉತ್ಕೃಷ್ಟತೆ, ನಾಯಕತ್ವ ಮತ್ತು ಆಡಳಿತ ಸಾಮರ್ಥ್ಯಗಳನ್ನು ಹೊಂದಿರುವ ವ್ಯಕ್ತಿಯಾಗಿರಬೇಕು. ಹಾಗಾಗಿ, ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಅಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಬಯೋಡೇಟಾವನ್ನು ಸಂಬಂಧಪಟ್ಟ ವಿಶ್ವವಿದ್ಯಾನಿಲಯಗಳ ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ಪ್ರದರ್ಶಿಸುವುದು ಸೂಕ್ತ. ಅಭ್ಯರ್ಥಿಯ ಸೇವಾ ಅವಧಿ, ಬೋಧನೆ ಮತ್ತು ಸಂಶೋಧನಾ ಸಾಧನೆಗಳಿಗೆ ಅಂಕಗಳನ್ನು ನಿಗದಿಪಡಿಸಬೇಕು. ಆಕಾಂಕ್ಷಿಗಳು ತಮ್ಮ ಸೇವಾ ಮತ್ತು ಆಡಳಿತಾತ್ಮಕ ಅನುಭವದ ಸಮಯದಲ್ಲಿ ಸಂಸ್ಥೆಗೆ ತಂದ ಸಂಶೋಧನಾ ನಿಧಿಯ ದಾಖಲೆಗಳನ್ನು ಮುಕ್ತವಾಗಿ ತಿಳಿಸಬೇಕು. ಕುಲಪತಿ ಅಭ್ಯರ್ಥಿಗಳು ತಾವು ನೇಮಕವಾದರೆ ವಿಶ್ವವಿದ್ಯಾನಿಲಯವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ನೀಲನಕ್ಷೆಯನ್ನು ಸಮಿತಿಯ ಸದಸ್ಯರೊಂದಿಗೆ ಹಂಚಿಕೊಳ್ಳಬೇಕು. ಈ ಪ್ರಕ್ರಿಯೆಯ ನಂತರ, ವಿವಿಧ ಮಾನದಂಡಗಳಿಗೆ ಸಂಬಂಧಿಸಿದಂತೆ, ಶೋಧನಾ ಸಮಿತಿಯು ಅಭ್ಯರ್ಥಿಗಳಿಗೆ ಅಂಕಗಳನ್ನು ನೀಡಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಹಾಗೂ ಸಾಮಾಜಿಕ ನ್ಯಾಯ ಮತ್ತು ಲಿಂಗ ಸಮಾನತೆಯನ್ನು ಗಮನದಲ್ಲಿಟ್ಟುಕೊಂಡು ಪಾರದರ್ಶಕವಾಗಿ ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಆಡಳಿತ ಮಂಡಳಿ(ಬಿಒಜಿ)ಗೆ ಸಲ್ಲಿಸಬೇಕು. ನಂತರದಲ್ಲಿ ಆಡಳಿತ ಮಂಡಳಿಯು (ಬಿಒಜಿ) ಪಾರದರ್ಶಕವಾಗಿ ಉಪ ಕುಲಪತಿಯನ್ನು ನೇಮಿಸಬೇಕು.
ಈ ವಿಧಾನವನ್ನು ಅನುಸರಿಸಿದರೆ ಮಾತ್ರ ಉಪ ಕುಲಪತಿಗಳ ನೇಮಕ ಕಾರ್ಯವು ವಿವಾದಗಳಿಗೆ ಒಳಗಾಗದ ರೀತಿಯಲ್ಲಿ ಪೂರ್ಣಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಶೋಧನಾ ಸಮಿತಿಯ ರಚನೆಯು ಸರಕಾರದ ಅಥವಾ ಇತರ ಮೂಲಗಳ ಒತ್ತಡಗಳಿಂದ ಮುಕ್ತವಾಗಿರಬೇಕು. ಶೋಧನಾ ಸಮಿತಿಯು ಒಬ್ಬ ಹೆಸರಾಂತ ಸ್ವತಂತ್ರ ಮನಸ್ಸಿನ ದಕ್ಷ ಮಾಜಿ ಉಪಕುಲಪತಿ, ಒಬ್ಬ ಪ್ರತಿಷ್ಠಿತ ಸಾರ್ವಜನಿಕ ಬುದ್ಧಿಜೀವಿ, ಓರ್ವ ವಿಶ್ವವಿದ್ಯಾನಿಲಯದ ಹೆಸರಾಂತ ಹಳೆಯ ವಿದ್ಯಾರ್ಥಿ (ಚ್ಝ್ಠಞ್ಞಜಿ) ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿರುವ ಓರ್ವ ಕೈಗಾರಿಕೋದ್ಯಮಿಯನ್ನು ಹೊಂದಿರಬೇಕು. ಈ ರೀತಿಯಲ್ಲಿ ರಚಿತವಾದ ಶೋಧನಾ ಸಮಿತಿಯು ಪಾರದರ್ಶಕತೆ ಹಾಗೂ ನಿಷ್ಪಕ್ಷವಾಗಿ ಕಾರ್ಯ ನಿರ್ವಹಿಸಬೇಕು.
ಕುಲ ಸಚಿವ (ಆಡಳಿತ) ಮತ್ತು ಕುಲ ಸಚಿವ (ಮೌಲ್ಯಮಾಪನ) ಮತ್ತು ಹಣಕಾಸು ಅಧಿಕಾರಿಗಳ ನೇಮಕದಲ್ಲಿ ಸರಕಾರದ ಅಧಿಕಾರವನ್ನು ಮರುಸ್ಥಾಪಿಸುವುದರ ಸಲುವಾಗಿ ಪರಿಷ್ಕೃತ ಮಸೂದೆಯು ಆತ್ರೆ ಸಮಿತಿ ಸಲ್ಲಿಸಿದ ಕರಡು ಮಸೂದೆಗೆ ವಿರುದ್ಧವಾಗಿದೆ. ಇದು ನಿಜಕ್ಕೂ ವಿಷಾದಕರವಾದ ಸಂಗತಿ. ಈ ಅಧಿಕಾರಿಗಳ ನೇಮಕಾತಿಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದರ ಮೂಲಕ ಸರಕಾರ ವಿಶ್ವವಿದ್ಯಾನಿಲಯಗಳ ಮೇಲೆ ತನ್ನ ಸಂಪೂರ್ಣ ನಿಯಂತ್ರಣವನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿದೆ. ಇದರಿಂದಾಗಿ ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆ ಕುಂಠಿತವಾಗುತ್ತದೆ.
ಕೈಗಾರಿಕೋದ್ಯಮಿಗಳು ಆಡಳಿತ ಮಂಡಳಿಯ(ಬಿಒಜಿ)ಗಳ ಮುಖ್ಯಸ್ಥರಾಗಬೇಕೆಂದು ಸರಕಾರ ಬಯಸುತ್ತದೆ ಎಂದು ವರದಿಯಾಗಿದೆ. ಆಡಳಿತ ಮಂಡಳಿಯಲ್ಲಿ ಉದ್ಯಮ ಪ್ರತಿನಿಧಿಯನ್ನು ಹೊಂದಿರುವುದು ಉಪಯುಕ್ತವಾದ ವಿಷಯವಾದರೂ, ತಮ್ಮ ಅಧಿಕಾರದ ಅವಧಿಯಲ್ಲಿ ಗೌರವಯುತವಾಗಿ ಕಾರ್ಯನಿರ್ವಹಿಸಿದ ದಕ್ಷ ಮತ್ತು ಸ್ವತಂತ್ರ ಮನೋಭಾವದ ನಿವೃತ್ತ ಉಪಕುಲಪತಿಗೆ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡುವುದು ವಿಶ್ವವಿದ್ಯಾನಿಲಯಗಳ ಹಿತದೃಷ್ಟಿಯಿಂದ ಸೂಕ್ತ ಎನ್ನಿಸುತ್ತದೆ.

(ಲೇಖಕರು ಮಾಜಿ ಡೀನ್, ಫ್ಯಾಕಲ್ಟಿ ಆಫ್ ಆರ್ಟ್ಸ್, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು)

share
ಪಿ.ಎಸ್. ಜಯರಾಮು
ಪಿ.ಎಸ್. ಜಯರಾಮು
Next Story
X