ಉಡುಪಿ: ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಆತ್ಮಹತ್ಯೆಗೈಯಲು ಬಂದಿದ್ದ ಮಹಿಳೆಯ ರಕ್ಷಣೆ

ಉಡುಪಿ, ಫೆ.25: ಇಂದ್ರಾಳಿಯ ರೈಲು ನಿಲ್ದಾಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದರೆನ್ನಲಾದ ಮಹಿಳೆಯೊಬ್ಬರನ್ನು ರೈಲ್ವೆ ಪೋಲಿಸರು ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಜಂಟಿಯಾಗಿ ರಕ್ಷಿಸಿರುವ ಘಟನೆ ಶನಿವಾರ ನಡೆದಿದೆ.
ರಕ್ಷಿಸಲ್ಪಟ್ಟ ಮಹಿಳೆಯನ್ನು ಗೆದ್ಲಹಳ್ಳಿಯ ನಿವಾಸಿ ಗಂಗಣ್ಣ ಎಂಬವರ ಪುತ್ರಿ ಸವಿತಾ(32) ಎಂದು ಗುರುತಿಸಲಾಗಿದೆ. ಇವರನ್ನು ಬೈಲೂರಿನ ಹೊಸ ಬೆಳಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಲಾಗಿದೆ. ಸಂಬಂಧಿಕರು ಆಶ್ರಮವನ್ನು ಸಂಪರ್ಕಿ ಸಲು ಸೂಚಿಸಲಾಗಿದೆ.
ಜೀವನದಲ್ಲಿ ಎದುರಾಗಿರುವ ಕೌಟುಂಬಿಕ ಸಮಸ್ಯೆಗಳಿಂದ ನೊಂದಿರುವ ಸವಿತಾ ಆತ್ಮಹತ್ಯೆಗೆ ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾರೆ. ರೈಲು ನಿಲ್ದಾಣದಲ್ಲಿ ಮಹಿಳೆಯ ನಡವಳಿಕೆಯ ಬಗ್ಗೆ ಸಂಶಯಪಟ್ಟ ಕರ್ತವ್ಯನಿರತ ಪೋಲಿಸರು, ವಿಚಾರಿಸಿದಾಗ ಈ ವಿಷಯ ತಿಳಿದುಬಂದಿದೆ.
ಕಾರ್ಯಚರಣೆಯಲ್ಲಿ ರೈಲ್ವೆ ಪೊಲೀಸ್ ನಿರೀಕ್ಷಕ ಪಿ.ವಿ.ಮಧುಸೂದನ್, ಸಿಬ್ಬಂದಿ ಜೀನಾ ಪಿಂಟೋ, ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಆಶ್ರಮ ಸಂಚಾಲಕಿ ತನುಲಾ ತರುಣ್ ಭಾಗಿಯಾಗಿದ್ದರು.
Next Story